ಇವರು ಕಂಚಿನ ಕಂಠದ ಅದ್ಭುತ ನಟ. ಸಿನಿ ರಸಿಕರು ಕಂಡ ಬಹು ಜನಪ್ರಿಯ ಪೋಷಕ ನಟ. ಪಾತ್ರ ಯಾವುದೇ ಇರಲಿ, ತಮ್ಮ ವಿಶಿಷ್ಟ ನಟನೆಯ ಮೂಲಕವೇ ಆ ಪಾತ್ರಕ್ಕೆ ಹೊಸ ಆಯಾಮ ಕೊಡುವ ಬಹುಮುಖ ಪ್ರತಿಭೆ ಶರತ್ ಲೋಹಿತಾಶ್ವ. ಇತ್ತೀಚೆಗೆ ತೆರೆ ಕಂಡ `ಸಪ್ತ ಸಾಗರದಾಚೆಯಲ್ಲೋ ಸೈಡ್-ಎ’ ಚಿತ್ರದಲ್ಲಿ `ಪಾಟೀಲ’ ಎಂಬ ಖೈದಿ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. `ಸಪ್ತ ಸಾಗರದಾಚೆಯಲ್ಲೋ ಸೈಡ್ ಎ’ ಚಿತ್ರದ ನಟನೆಗೆ ಶರತ್ ಲೋಹಿತಾಶ್ವ ಅವರಿಗೆ CHITTARA BEST SUPPORTING ACTOR MALE-2024 ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ತಂದೆಯ ಅನುಪಸ್ಥಿತಿ ತುಂಬಾ ಕಾಡುತ್ತಿದೆ
“ಈ ಪ್ರಶಸ್ತಿ ನನಗೆ ತುಂಬಾನೇ ವಿಶೇಷವಾಗಿದೆ. ನಮ್ಮ ತಂದೆಯನ್ನು ಕಳೆದುಕೊಂಡು ಒಂದೂವರೆ ವರ್ಷವಾಯ್ತು. ಅವರ ಅನುಪಸ್ಥಿತಿಯಲ್ಲಿ ತೆಗೆದುಕೊಳ್ಳುತ್ತಿರುವ ಪ್ರಶಸ್ತಿ ಇದು. ಅವರ ಅನುಪಸ್ಥಿತಿ ತುಂಬಾ ಕಾಡುತ್ತಿದೆ. ಈ ಪ್ರಶಸ್ತಿಯನ್ನು ಅವರಿಗೆ ಅರ್ಪಿಸುತ್ತೇನೆ. ಈ ರೀತಿಯ ಒಂದು ಪ್ರಶಸ್ತಿಯನ್ನು ಕೈಲಿ ಹಿಡಿದುಕೊಂಡು ಬಹಳ ದಿನವಾಗಿತ್ತು. ಚಿತ್ತಾರ ಒಂದು ಅವಕಾಶ ಮಾಡಿಕೊಟ್ಟಿದೆ. ಹೇಮಂತ್ ರಾವ್ ಬಹಳ ಕ್ರಿಯೇಟಿವ್ ಡೈರೆಕ್ಟರ್. ಈ ಅವಾರ್ಡ್ನ್ನು ಮನೆಯವರಿಗೆ, ನಿರ್ದೇಶಕರಿಗೆ, ಇಡೀ ತಂಡಕ್ಕೆ ಅರ್ಪಿಸುತ್ತೇನೆ. ಚಿತ್ತಾರ ಮ್ಯಾಗಜಿನ್ ಆರಂಭದಿ0ದಲೂ ಓದುತ್ತಿದ್ದೆ. ಪತ್ರಿಕೆಯೊಂದು ಇಂತಹ ಅದ್ದೂರಿ ಕಾರ್ಯಕ್ರಮವನ್ನು ನಡೆಸುವುದು ಸುಲಭದ ಮಾತಲ್ಲ. ಹೆಮ್ಮೆ ಮತ್ತು ಖುಷಿಯಾಗುತ್ತಿದೆ.
-ಶರತ್ ಲೋಹಿತಾಶ್ವ, ಖ್ಯಾತ ನಟ