Sandalwood Leading OnlineMedia

`ಮಾರಕಾಸ್ತ್ರ’ ಸಿನಿಮಾದ ಸಾಹಸ ಸಂಯೋಜನೆಗೆ ಥ್ರಿಲ್ಲರ್ ಮಂಜುಗೆ ಒಲಿದು ಬಂತು `ಚಿತ್ತಾರ ಅತ್ಯತ್ತಮ ಸಾಹಸ ನಿರ್ದೇಶಕ’ ಪ್ರಶಸ್ತಿ/CHITTARA EXCLUSIVE

ಆಕ್ಷನ್ ಮೂಲಕವೇ ನೋಡುಗರ ಮೈನವಿರೇಳಿಸುವ ನಂಬರ್ ವನ್ ಸ್ಟಂಟ್ ಮಾಸ್ಟರ್ ಥ್ರಿಲ್ಲರ್ ಮಂಜು. ಅದ್ದೂರಿ ಸಾಹಸ, ಊಹೆಗೂ ಮೀರಿದ ಸ್ಟಂಟ್ ಸೀಕ್ವೆನ್ಸ್ ಮೂಲಕ ನಮ್ಮ ನಾಯಕರಿಗೆ ಆಕ್ಷನ್ ಇಮೇಜ್ ಕೊಟ್ಟವರು ಥ್ರಿಲ್ಲರ್ ಮಂಜು. `ಮಾರಕಾಸ್ತ್ರ’ ಸಿನಿಮಾದ ಸಾಹಸ ಸಂಯೋಜನೆಗೆ ಥ್ರಿಲ್ಲರ್ ಮಂಜು ಅವರಿಗೆ CHITTARA BEST STUNT DIRECTOR-2024 ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

 

ಅವಾರ್ಡ್ ಸ್ವೀಕರಿಸಿದ ಬಳಿಕ ಮಾತನಾಡಿದ ಥ್ರಿಲ್ಲರ್ ಮಂಜು, ‘ಈ ಅವಾರ್ಡ್ ತೆಗೆದುಕೊಂಡಿದ್ದು ಖಂಡಿತ ಖುಷಿಯಾಗ್ತಾ ಇದೆ. 100% ಪ್ರತಿಯೊಬ್ಬ ಟೆಕ್ನಿಷಿಯನ್‌ಗೆ, ಆರ್ಟಿಸ್ಟ್ಗೆ ಅವರಿಗೆ ಕೆಲಸ ಮಾಡಿದ ಮೇಲೆ ಸಿಗುವಂತ ಈ ಅವಾರ್ಡ್ ತುಂಬಾನೇ ಸ್ಪೆಷಲ್. ನಾನು ಈ ಮೊದಲೂ ಅವಾರ್ಡ್ ತಗೊಂಡಿದ್ದೀನಿ. ಆದರೆ ನಾನು ತೆಗೆದುಕೊಳ್ಳುವ ಪ್ರತಿಯೊಂದು ಅವಾರ್ಡ್ ಕೂಡ ಅವತ್ತಿನ ಸ್ಪೆಷಲ್. ಪ್ರತಿಯೊಂದು ಅವಾರ್ಡ್ನಿಂದ ಸ್ಪೂರ್ತಿ ಸಿಗುತ್ತೆ. ಈಗ ನೋಡಿ ಚಿತ್ತಾರ ಅವಾರ್ಡ್ ಕೊಟ್ಟಿದ್ದೀರ. ಆದರೆ ಆ ಸಿನಿಮಾದಲ್ಲಿ ಅವಾರ್ಡ್ ಸಿಗುತ್ತೆ ಅಂತ ಖಂಡಿತ ಮಾಡಿರಲಿಲ್ಲ. ಆದರೆ ಎಲ್ಲರೂ ಮೆಚ್ಚಿ ಕೊಟ್ಟಿರುವ ಅವಾರ್ಡ್ನಿಂದ ಖುಷಿಯಾಗಿದೆ. ಸಾಹಸ ಕಲಾವಿದನಾಗಿದ್ದ ನನ್ನನ್ನು ಸಾಹಸ ನಿರ್ದೇಶಕನಾಗಿ ಮಾಡಿದವರಿಗೆ ತುಂಬು ಹೃದಯದ ಧನ್ಯವಾದಗಳು’ ಎಂದಿದ್ದಾರೆ.

 

Share this post:

Related Posts

To Subscribe to our News Letter.

Translate »