ಒ0ದು ಸಿನಿಮಾ ಮೂಲಕವೇ ಪ್ರಸ್ತುತ ಸಮಾಜಕ್ಕೆ ಚೆಂದದ ಸಂದೇಶ ನೀಡಬಹುದೆಂಬುದನ್ನು ನಿರೂಪಿಸಿದ `ರಾಧಾಕೃಷ್ಣ ಬ್ಯಾನರ್’ನಲ್ಲಿ ಕೇಶವ್ ಆರ್ ಅವರು ನಿರ್ಮಿಸಿದ, ಉದಯ್ ಕುಮಾರ್ ಪಿ.ಎಸ್. ನಿರ್ದೇಶನದ `ಬನ್ – ಟೀ’ ಚಿತ್ರ, ರವೀಂದ್ರ ತುಂಬ್ರಮನೆ ಅವರು ನಿರ್ಮಿಸಿ, ರಮೇಶ್ ಬೇಗಾರ್ ನಿರ್ದೇಶಿಸಿದ `ಜಲಪಾತ’ ಚಿತ್ರ ಮತ್ತು `ನೇಟೀವ್ ಕ್ರಿಯೆಷನ್ಸ್’ ಅಡಿಯಲ್ಲಿ ಇ.ದೊಡ್ಡನಾಗಯ್ಯ ನಿರ್ಮಿಸಿದ, ಎನ್.ಆರ್.ನಂಜು0ಡೇಗೌಡ ನಿರ್ದೇಶನದ `ಕಾಸಿನ ಸರ’ ಚಿತ್ರ.. ಈ ಮೂರು ಚಿತ್ರಗಳಿಗೆ CHITTARA BEST SOCIAL IMPACT MOVIE-2024 ಪ್ರಶಸ್ತಿ ನೀಡಿ ಗೌರವಿಸಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ `ಚಿತ್ತಾರ ಅವಾರ್ಡ್ಸ್ ತೆಗೆದುಕೊಂಡಿದ್ದು ತುಂಬಾ ಖುಷಿ ಫೀಲ್ ಆಗ್ತಾ ಇದೆ. ಗಾಂಧಿನಗರದಲ್ಲಿ ಅವಕಾಶಕ್ಕಾಗಿ ಅಲೆಯುವಾಗ ಚಿತ್ತಾರ ಮೋಟಿವೇಶನ್ ಆಗಿತ್ತು. ಯಾವತ್ತಾದ್ರೂ ಒಂದಿನ ನಮ್ಮದು ಒಂದು ಆರ್ಟಿಕಲ್ ಅದರಲ್ಲಿ ಬರಬೇಕು ಅಂತ. ಆದರೆ ಇಂದು ಅದೇ ಚಿತ್ತಾರ ಸ್ಟಾರ್ ಅವಾರ್ಡ್ನಲ್ಲಿ ಒಂದು ಅವಾರ್ಡ್ ತೆಗೆದುಕೊಂಡಿದ್ದು ಬಹಳ ಖುಷಿಯಾಗ್ತಾ ಇದೆ. ಥ್ಯಾಂಕ್ಸ್ ಟು ಚಿತ್ತಾರ. ನಮ್ಮಂಥ ಹೊಸಬರಿಗೆ ಈ ಅವಾರ್ಡ್ ಒಂದು ದೊಡ್ಡ ಸ್ಪೂರ್ತಿಯೇ ಸರಿ. ಸಿನಿಮಾ ಬರೀ ಮನರಂಜನೆ ಮಾತ್ರವಲ್ಲ. ಆ ಸಿನಿಮಾದಲ್ಲಿ ಏನಾದರೊಂದು ಸಮಾಜಕ್ಕೆ ಸಂದೇಶ ಹೇಳಬೇಕು. ಹೀಗೆ ಸ್ಪೂರ್ತಿ ನೀಡುತ್ತಿರುವ ಚಿತ್ತಾರಕ್ಕೆ ಧನ್ಯವಾದಗಳು’ ಎಂದಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಿರ್ದೇಶಕ ರಮೇಶ್ ಬೇಗಾರ್, `ಚಿತ್ತಾರ ಪತ್ರಿಕೆ ಮಲೆನಾಡಿನ ಹಳ್ಳಿಯ ಪ್ರದೇಶದ ಪ್ರತಿಭೆಗಳನ್ನು ಗುರುತಿಸಿದೆ. ಹಳ್ಳಿಯ ಪ್ರತಿಭೆಗಳಿಗೆ ಪುರಸ್ಕಾರ ನೀಡಿರುವ ಕಾರಣ ಮುಂದೆ ಒಳ್ಳೊಳ್ಳೆ ಪ್ರಾಜೆಕ್ಟ್ಗಳನ್ನು ಮಾಡುವುದಕ್ಕೆ ಸ್ಪೂರ್ತಿಯಾಗಿದೆ. ಇದು ನಮ್ಮ ತಂಡಕ್ಕೆ ಸಿಕ್ಕಂತ ಅವಾರ್ಡ್. ಆದರೆ ಈ ಅವಾರ್ಡ್ ಅನ್ನು ಇಡೀ ಮಲೆನಾಡು ತಂಡಕ್ಕೆ ಅರ್ಪಿಸುತ್ತೇನೆ’ ಎಂದಿದ್ದಾರೆ.
ಅವಾರ್ಡ್ ಸ್ವೀಕರಿಸಿದ ಬಳಿಕ ಮಾತನಾಡಿದ ನಿರ್ದೇಶಕ ನಂಜು0ಡೇಗೌಡ, `ಥ್ಯಾಂಕ್ಯೂ ಚಿತ್ತಾರ. ಇದೊಂದು ಸಾವಯವ ಕೃಷಿ ಬಗ್ಗೆ ಎಣೆದ ಸಿನಿಮಾವಾಗಿದೆ. ಚಿತ್ರರಂಗಕ್ಕೋಸ್ಕ ಫೀಲ್ಮ್ ಫೇರ್ ಬಿಟ್ಟರೆ ಯಾವುದೇ ಪತ್ರಿಕೆ ಮಾಡಲ್ಲ. ಇಷ್ಟು ಅದ್ದೂರಿಯಾಗಿ ಚಿತ್ತಾರ ಕೂಡ ಅವಾರ್ಡ್ ಕಾರ್ಯಕ್ರಮ ಮಾಡಿ, ನಮ್ಮ ಸಿನಿಮಾವನ್ನು ಗುರುತಿಸಿ ಅವಾರ್ಡ್ ನೀಡಿದೆ. ಕನ್ನಡದ ಚಿತ್ತಾರ ಎಲ್ಲರನ್ನು ಒಟ್ಟಿಗೆ ಸೇರಿಸಿ, ಅದ್ದೂರಿಯಾಗಿ ಕಾರ್ಯಕ್ರಮ ಮಾಡುತ್ತಿರುವುದು, ತುಂಬಾ ಸಂತೋಷ ಹಾಗೂ ಹೆಮ್ಮೆ ತರಿಸಿದೆ. ನಮ್ಮ ಸಿನಿಮಾ ಸಮಾಜಕ್ಕೊಂದು ಸಂದೇಶ ನೀಡುವಂಥ ಸಿನಿಮಾ. ಅದಕ್ಕೆ ತಕ್ಕನಾದ ಪುರಸ್ಕಾರ ಸಿಕ್ಕಿರುವುದು ಇಡೀ ತಂಡಕ್ಕೆ ಖುಷಿ ನೀಡಿದೆ’ ಎಂದಿದ್ದಾರೆ.