ವಿಶಾಲ್ ಆತ್ರೇಯ ನಿರ್ದೇಶನದಲ್ಲಿ ಮೂಡಿ ಬಂದ ವಿಭಿನ್ನ ಕಥಾಹಂದರದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ‘ತತ್ಸಮ ತದ್ಭವ’ ಮತ್ತು ಆನಂದ್ ರಾಜ್ ನಿರ್ದೇಶನದ, ರಣ್ವಿತ್ ಶಿವಕುಮಾರ್ ಮತ್ತು ಅಭಿಷೇಕ್ ಕೋಟಾ ನಿರ್ಮಾಣದ, ಚಿನ್ನಾರಿ ಮುತ್ತ, ವಿಜಯ ರಾಘವೇಂದ್ರ ಅವರ ಏಕಪಾತ್ರಾಭಿನಯದಲ್ಲಿ ಮೂಡಿಬಂದ ವಿಭಿನ್ನ ಚಿತ್ರ ‘ರಾಘು’. ಈ ಎರಡೂ ಚಿತ್ರಗಳಿಗೆ ‘CHITTARA BEST PROMISING MOVIE-2024’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರಶಸ್ತಿ ಪಡೆದ ನಿರ್ದೇಶಕ ವಿಶಾಲ್ ಆತ್ರೇಯ ಮಾತನಾಡಿ, `ಈ ಅವಾರ್ಡ್ ಅನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಕೈಯಿಂದ ತೆಗೆದುಕೊಳ್ಳುತ್ತಿರುವುದು ನನಗೆ ತುಂಬಾ ಖುಷಿಯಾಗಿದೆ. ಯಾವುದೇ ನಿರ್ದೇಶಕನಿಗಾಗಲಿ ಮೊದಲ ಸಿನಿಮಾ ಸ್ಪೆಷಲ್ ಆಗಿನೇ ಇರುತ್ತದೆ. ಅದರಲ್ಲೂ ತತ್ಸಮ ತದ್ಭವ ಸಿನಿಮಾಕ್ಕೆ ಇಷ್ಟು ದೊಡ್ಡ ವೇದದಿಕೆಯಲ್ಲಿ ಪ್ರಶಸ್ತಿಯನ್ನು ಸ್ವೀಕಾರ ಮಾಡ್ತಾ ಇರುವುದು, ನನಗೆ ತುಂಬಾನೇ ಖುಷಿಯಾಗುತ್ತಿದೆ. ಇದಕ್ಕೆ ಕಾರಣ ನಿರ್ಮಾಪಕ ಪನ್ನಗಭರಣ ಸರ್. ಈ ಸಿನಿಮಾ ವಿಭಿನ್ನವಾಗಿದೆ. ಆದರೆ ನನ್ನ ಮೇಲೆ ನಂಬಿಕೆ ಇಟ್ಟು ಸಿನಿಮಾ ನಿರ್ಮಾಣ ಮಾಡಿದರು. ಮೇಘನಾ ಮ್ಯಾನ್ ಸಿನಿಮಾದ ಪಿಲ್ಲರ್ ಆಗಿದ್ದರು. ಹೀಗಾಗಿ ಈ ಅವಾರ್ಡ್ ಎಲ್ಲರಿಗೂ ಅರ್ಪಿಸುತ್ತೇನೆ. ಚಿತ್ತಾರ ಸಂಸ್ಥೆಗೆ ಮತ್ತೊಮ್ಮೆ ಧನ್ಯವಾದ ತಿಳಿಸುತ್ತೇನೆ’ ಎಂದಿದ್ದಾರೆ.