ಚೇತನ್ ಕುಮಾರ್ ಕನ್ನಡ ಚಿತ್ರರಂಗ ಕಂಡ ವಿಶಿಷ್ಟ ಪ್ರತಿಭೆ. ಸಿನಿಮಾಗಳಿಗೆ ಸಾಹಿತ್ಯ ಬರೆಯುತ್ತಾ ಜನಮನಕ್ಕೆ ಹತ್ತಿರವಾದ ಚೇತನ್ ಕುಮಾರ್, ಆ ನಂತರ ಯಶಸ್ವಿ ನಿರ್ದೇಶಕರಾಗಿ ಧ್ರುವ, ಶ್ರೀ ಮುರುಳಿ, ಪುನೀತ್ ರಾಜ್‌ಕುಮಾರ್ ಅವರಂಥ ಸ್ಟಾರ್ ನಟರಿಗೆ ಆಕ್ಷನ್ ಕಟ್ ಹೇಳಿದರು. ನಿರ್ದೇಶಕರಾದ ನಂತರವು ಚಿತ್ರಸಾಹಿತ್ಯ ಮುಂದುವರೆಸಿದರು. ಮಾಸ್ ಸಾಂಗ್ ಆಗಲಿ, ಪ್ರೇಮಗೀತೆಯಾಗಲಿ, ಹೀರೋ ಎಂಟ್ರಿಯಾಗಲಿ, ಫಿಲಾಸಫಿಯ ಹಾಡಾಗಲಿ ಎಲ್ಲದಕ್ಕೂ ಚೇತನ್ ಕುಮಾರ್ ಅವರ ಲೇಖನಿ ನ್ಯಾಯ ಸಲ್ಲಿಸಿದೆ. ಚೇತನ್ ಕುಮಾರ್ ಬರೆದ ‘ಪಸಂದಾಗವ್ನೇ’ ಹಾಡು ಎಲ್ಲೆಡೆ ಗುಲ್ಲೆಬ್ಬಿಸಿತ್ತು. ದರ್ಶನ್ – ಆರಾಧನಾ ಕುಣಿತಕ್ಕೆ ಚೇತನ್ ಅವರ ಸಾಹಿತ್ಯ ಮೆರುಗು ತುಂಬಿತ್ತು. ಯಶಸ್ವಿ ಚಿತ್ರಸಾಹಿತಿ ಚೇತನ್ ಕುಮಾರ್ ಅವರಿಗೆ ಈ ಬಾರಿ ‘ಕಾಟೇರ’ ಸಿನಿಮಾದ ‘ಪಸಂದಾಗವ್ನೇ” ಹಾಡಿನ ಚೆಂದದ ಸಾಹಿತ್ಯಕ್ಕೆ CHITTARA BEST LYRIC WRITER-2024 ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಚೇತನ್ ಕುಮಾರ್ ಅವರು, `ಬಹಳ ಖುಷಿ ಅನ್ನಿಸುತ್ತೆ ಈ ಅವಾರ್ಡ್ ಅನ್ನು ಪಡೆದುಕೊಳ್ಳುವುದಕ್ಕೆ. ನನಗೆ ಬರವಣಿಗೆ ಎಂದರೆ ತುಂಬಾ ಇಷ್ಟ. ಈ ಅವಾರ್ಡ್ ನೀಡಿದ್ದಕ್ಕೆ ಚಿತ್ತಾರ ಸಂಸ್ಥೆಗೆ ಧನ್ಯವಾದ ತಿಳಿಸುತ್ತೇನೆ. ಅದರಲ್ಲೂ ನಮ್ಮ ಗುರುಗಳಾದ ದೊಡ್ಡರಂಗೇಗೌಡರವರಿ0ದ ಅವಾರ್ಡ್ ಪಡೆದಿದ್ದಕ್ಕೆ ಖುಷಿಯಾಗಿದೆ. ಥ್ಯಾಂಕ್ ಯೂ ಚಿತ್ತಾರ’ ಎಂದಿದ್ದಾರೆ.