Sandalwood Leading OnlineMedia

`CHITTARA BEST FILM INDUSTRY COORDINATOR-2024′ ಪ್ರಶಸ್ತಿಗೆ ಭಾಜನರಾದ ಹಿರಿಯ ಪಿ.ಆರ್.ಓ, ಎಸ್.ಕೆ .ಅನಂತ್

ಯಾವುದೇ ಒಂದು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಆಯೋಜಕರು, ಪ್ರಾಯೋಜಕರು ಎಷ್ಟು ಮುಖ್ಯವೋ ಆ ಕಾರ್ಯಕ್ರಮಕ್ಕೆ ವಿಶೇಷ ಗಣ್ಯರನ್ನು ಕರೆತರುವ ಸಂಯೋಜಕರು ಅಷ್ಟೇ ಮುಖ್ಯ. ಕರ್ನಾಟಕದಲ್ಲಿ ಸರ್ಕಾರಿ ಕಾರ್ಯಕ್ರಮಗಳಿಂದ ಆರಂಭವಾಗಿ ಯಾವುದೇ ಚಲನಚಿತ್ರ ಪ್ರಶಸ್ತಿ ಸಮಾರಂಭ ನಡೆಯಲಿ, ಉನ್ನತ ಮಟ್ಟದ ಕಾರ್ಯಕ್ರಮಗಳಾಗಲಿ, ಪ್ರತಿಷ್ಠಿತ ರಾಜಕಾರಣಿಗಳು, ಐಎಎಸ್ ಐಪಿಎಸ್ ಅಧಿಕಾರಗಳು, ಉದ್ಯಮಿಗಳು, ಚಿತ್ರರಂಗದ ನಟ ನಟಿಯರ ಮದುವೆ ಕಾರ್ಯಕ್ರಮಗಳಾಗಲಿ ಅಲ್ಲೆಲ್ಲಾ ಈ ವ್ಯಕ್ತಿ ಇರಲೇಬೇಕೆಂದು ಆಯೋಜಕರು ಬಯಸುತ್ತಾರೆ. ಅವರೇ ಸೌತ್ ಇಂಡಿಯನ್ ಇಂಡಸ್ಟ್ರಿ ಸೆಲೆಬ್ರಿಟಿ ಕೋ ಆರ್ಡಿನೇಟರ್ ಆಗಿ ಖ್ಯಾತಿ ಗಳಿಸಿರುವ ಎಸ್ ಕೆ ಅನಂತ್. ಮೈಸೂರಿನ ದಿವಂಗತ ಕೇಶವಮೂರ್ತಿ ಮತ್ತು ದಿವಂಗತ ರಾಜಲಕ್ಷ್ಮೀಯವರ ಪುತ್ರರಾದ ಎಸ್ ಕೆ ಅನಂತ್ ಕರ್ನಾಟಕ ಕಂಡ ನಂಬರ್ ವನ್ ಸೆಲೆಬ್ರಿಟಿ ಮತ್ತು ವಿಐಪಿ ಕೋ ಅರ್ಡಿನೇಟರ್ ಎಂದರೆ ತಪ್ಪಾಗಲಾರದು. ಕರ್ನಾಟಕ ಸರ್ಕಾರದ ಚಲನಚಿತ್ರ ಪ್ರಶಸ್ತಿ ಸಮಾರಂಭವಾಗಲಿ, ಪ್ರತಿಷ್ಠಿತ ಫಿಲಂ ಅವಾರ್ಡ್ಸ್ ಕಾರ್ಯಕ್ರಮವಾಗಲಿ, ಸೆಲೆಬ್ರಿಟಿ ಗಾಯಕರ ಸಂಗೀತ ಸಂಜೆಯಾಗಲಿ, ಅಲ್ಲಿಗೆ ಗಣ್ಯಾತಿಗಣ್ಯರು ಅತಿಥಿಯಾಗಿ ಬಂದು ಹೋಗಬೇಕೆಂದರೆ ಅನಂತ್ ಎಂಬ ಸ್ನೇಹಸ್ನೇತುವೇ ಇರಲೇಬೇಕು.

ಇವರು ಕೋ ಅರ್ಡಿನೇಟರ್ ಆಗಿದ್ದಾರೆಂದರೆ, ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯುತ್ತದೆ ಎಂಬ ನಂಬಿಕೆ ಗಣ್ಯರದ್ದು. ಇವರ ಮಾತಿಗೆ, ಕೆಲಸಕ್ಕೆ ಅಷ್ಟು ಗೌರವ, ಮನ್ನಣೆ ಸಿಕ್ಕಿದೆ. ಕಳೆದ ಮೂರು ದಶಕಗಳಿಂದ ಚಿತ್ರರಂಗಕ್ಕೆ ಇವರು ಸಲ್ಲಿಸಿದ ಸೇವೆ ಅನನ್ಯ. ಇವರ ಸಾಧನೆ ಗುರುತಿಸಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಇಂಟರ್ನ್ಯಾಷನಲ್ ಆರ್ಯಭಟ ಪ್ರಶಸ್ತಿ, ಕಾರಂತ್ ಪ್ರಶಸ್ತಿ, ಸಂತೋಷ್ ಪತ್ರಿಕೆಯಿಂದ ಬೆಸ್ಟ್ ಆರ್ಟಿಸ್ಟ್ ಪಿ ಆರ್ ಓ ಪ್ರಶಸ್ತಿ ಸೇರಿದಂತೆ ಹತ್ತಾರು ಗೌರವ ಸನ್ಮಾನಗಳು ಅರಸಿ ಬಂದಿದೆ. ಎಸ್ ಪಿ ಬಾಲಸುಬ್ರಹ್ಮಣ್ಯಂ ಮತ್ತು ಜೇಸುದಾಸ್ ಅವರಿಂದಲೂ ಬೆಸ್ಟ್ ಮ್ಯೂಸಿಕಲ್ ಪಿ ಆರ್ ಓ ಪ್ರಶಸ್ತಿ ಪಡೆದ ಹಿರಿಮೆ ಇವರದು. ಅನಂತ್ ಅವರ ಕೆಲಸವನ್ನು ಮುಖ್ಯಮಂತ್ರಿಗಳಾದಿಯಾಗಿ ಗಣ್ಯಾತಿಗಣ್ಯರೆಲ್ಲರೂ ಮೆಚ್ಚಿದ್ದಾರೆ. ಎಸ್ ಕೆ ಅನಂತ್ ಅವರ ಸಾಧನೆ ಗುರುತಿಸಿ ‘ಚಿತ್ತಾರ ಸ್ಟಾರ್ ಅವಾರ್ಡ್ಸ್ – 2024’ ಕಾರ್ಯಕ್ರಮದಲ್ಲಿ CHITTARA BEST FILM INDUSTRY COORDINATOR-2024 ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅನಂತು ಅವರು, `ಇಡೀ ಚಿತ್ರರಂಗಕ್ಕೆ ನನ್ನ ಸಾಷ್ಟಾಂಗ ನಮಸ್ಕಾರಗಳು. ಇಷ್ಟು ವರ್ಷ ನನ್ನನ್ನು ಬೆಳೆಸಿದ್ದಾರೆ. ಚಿತ್ತಾರದಲ್ಲಿ ಈ ಮೊದಲು ಕೋರ್ಡಿನೇಟರ್ ಆಗಿಯೂ ಕೆಲಸ ಮಾಡಿದ್ದೀನಿ. ಇಲ್ಲಿಯೇ ಅವಾರ್ಡ್ ಪಡೆದುಕೊಳ್ಳುವುದು ತುಂಬಾ ಸಂತಸದ ವಿಚಾರ.

 

 

 

Share this post:

Related Posts

To Subscribe to our News Letter.

Translate »