ಸದ್ಯ ಸ್ಯಾಂಡಲ್ವುಡ್‌ನಲ್ಲಿ ಸಂಕಲನದ ಮೂಲಕವೇ ಹೊಸ ಸಂಚಲನ ಸೃಷ್ಟಿಸಿದ ಯುವ ಸಂಕಲನಕಾರ ಆಶಿಕ್ ಕುಸುಗೊಳಿ. ತಮ್ಮ ಕೆಲಸದ ಮೂಲಕ ಚಿತ್ರಕಥೆಗೆ ಹೊಸ ವೇಗ, ಹೊಸ ಸ್ಪರ್ಶ ಕೊಡುವ ಉದಯೋನ್ಮುಖ ಪ್ರತಿಭೆ ಆಶಿಕ್ ಕುಸುಗೊಳಿ. PRK Production ಸಂಸ್ಥೆ ನಿರ್ಮಿಸಿದ `ಆಚಾರ್ ಅಂಡ್ ಕೋ’ ಚಿತ್ರದಲ್ಲಿನ ಅತ್ಯುತ್ತಮ ಸಂಕಲನಕ್ಕಾಗಿ ಆಶಿಕ್ ಕುಸುಗೊಳ್ಳಿ ಅವರಿಗೆ CHITTARA BEST EDITOR-2024 ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಆಕಾಶ್ ಕುಸುಗೊಳಿ “ಮೊದಲನೆಯದಾಗಿ ಚಿತ್ತಾರ ಪತ್ರಿಕೆಗೆ ಧನ್ಯವಾದಗಳು. ಸಿನಿಮಾದಲ್ಲಿ ನನ್ನ ಸಂಕಲವನ್ನು ಮೆಚ್ಚಿ ನನಗೆ ವೋಟ್ ಮಾಡಿದ ಎಲ್ಲರಿಗೂ ಧನ್ಯವಾದ. ಈ ರೀತಿಯ ಅವಾರ್ಡ್ಗಳು ನಿಜಕ್ಕೂ ಸ್ಪೂರ್ತಿ ತುಂಬುತ್ತವೆ. ನನ್ನ ಸಿನಿಮಾ ನಿರ್ದೇಶಕರಾದ ಸಿಂಧು ಶ್ರೀನಿವಾಸಮೂರ್ತಿ ಅವರಿಗೂ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ. ಅವಾರ್ಡ್ ಬರುತ್ತೆ ಅಂತ ಅಂದುಕೊ0ಡಿರಲಿಲ್ಲ. ಚಿತ್ತಾರ ಪತ್ರಿಕೆಗೆ ಮತ್ತೊಮ್ಮೆ ಧನ್ಯವಾದ ಅರ್ಪಿಸುವುದಕ್ಕೆ ಇಷ್ಟಪಡುತ್ತೀನಿ” ಎಂದಿದ್ದಾರೆ.