Sandalwood Leading OnlineMedia

ಕಾಟೇರ ಚಿತ್ರದ ಅಭಿನಯಕ್ಕಾಗಿ `ಚಿತ್ತಾರ ಅತ್ಯುತ್ತಮ ಬಾಲ ನಟ ಪ್ರಶಸ್ತಿ’ ಪಡೆದ ಮಾಸ್ಟರ್ ರೋಹಿತ್ ಹಾಗೂ ಬಾನದಾರಿಯಲ್ಲಿ ಚಿತ್ರದ ಅಭಿನಯಕ್ಕಾಗಿ `ಚಿತ್ತಾರ ಅತ್ಯುತ್ತಮ ಬಾಲ ನಟಿ ಪ್ರಶಸ್ತಿ’ ಪಡೆದ ಬೇಬಿ ಗ್ರೀಷ್ಮ ಗೌಡ / CHITTARA EXCLUSIVE

`ಕಾಟೇರ’ ಚಿತ್ರದಲ್ಲಿ ಪುಟ್ಟರಾಜು ಎಂಬ ಹುಡುಗನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿ ಎಲ್ಲರ ಗಮನ ಸೆಳೆದ ಬಾಲಕಲಾವಿದ ಮಾಸ್ಟರ್ ರೋಹಿತ್ ಹಾಗೂ `ಬಾನದಾರಿಯಲ್ಲಿ’ ಸಿನಿಮಾದಲ್ಲಿ ಗ್ರೀಷ್ಮ ಎಂಬ ಪಾತ್ರದಲ್ಲಿ ತನ್ನ ಮುಗ್ಧ ನಟನೆಯಿಂದ ಜನಮೆಚ್ಚುಗೆ ಗಳಿಸಿದ ಬಾಲ ಕಲಾವಿದೆ ಗ್ರೀಷ್ಮಾ ಗೌಡ CHITTARA BEST CHILD ARTIST-2024 ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

 

“ಚಿತ್ತಾರ ಟೀಂ ನನ್ನ ಕೂಡ ಒಬ್ಬ ಚೈಲ್ಡ್ ಆರ್ಟಿಸ್ಟ್ ಅಂತ ಗುರುತಿಸಿ, ಈ ಅವಾರ್ಡ್ ನೀಡಿದ್ದೀರಿ. ಇದು ತುಂಬಾನೇ ಖುಷಿಕೊಡುತ್ತಿದೆ. ಈ ಅವಾರ್ಡ್ ಅನ್ನು ನಾನು ಸತ್ಯ ಸರ್, ತರುಣ್ ಸುಧೀರ್ ಸರ್‌ಗೆ ಡೆಡಿಕೇಟ್ ಮಾಡುವುದಕ್ಕೆ ಇಷ್ಟಪಡುತ್ತೀನಿ. ನಮ್ಮ ಫ್ಯಾಮಿಲಿ, ಕ್ಲಾಸ್‌ಮೇಟ್ಸ್, ಫ್ರೆಂಡ್ಸ್, ನನ್ನ ಟೀಚರ್ಸ್ ಎಲ್ಲರು ತುಂಬಾ ಸಪೋರ್ಟ್ ಮಾಡಿದ್ದಾರೆ. ಈ ಮೂಲಕ ಎಲ್ಲರಿಗೂ ಧನ್ಯವಾದ ಹೇಳುತ್ತೀನಿ”

– ಮಾಸ್ಟರ್ ರೋಹಿತ್, ಬಾಲ ನಟ

“ಈ ಅವಾರ್ಡ್ ತೆಗೆದುಕೊಂಡಿರುವ ಸಂತಸವನ್ನು ಎಕ್ಸ್ಪ್ರೆಸ್ ಮಾಡುವುದಕ್ಕೆ ಆಗ್ತಾ ಇಲ್ಲ, ಖುಷಿ ಇದೆ. ಮೊದಲಿಗೆ ಚಿತ್ತಾರಗೆ ಧನ್ಯವಾದ ತಿಳಿಸುತ್ತಾ ಈ ಒಂದು ಅವಾರ್ಡ್ ಬರುವಂತೆ ಮಾಡಿದ, ಸಿನಿಮಾದಲ್ಲಿ ಅವಕಾಶ ಕೊಟ್ಟವರಿಗೆ ಅರ್ಪಿಸುತ್ತೇನೆ. ನನ್ನ ಫ್ಯಾಮಿಲಿ ಕೂಡ ತುಂಬಾ ಸಪೋರ್ಟ್ ಮಾಡಿದೆ. ಹಾಗೇ ಬಾನದಾರಿಯಲಿ ತಂಡಕ್ಕೆ ಈ ಅವಾರ್ಡ್ ಅರ್ಪಿಸುತ್ತೇನೆ. ನಾನು ನಾಮಿನೇಟ್ ಆದಾಗ ನಂಗೆ ವೋಟ್ ಮಾಡಿದ ಎಲ್ಲರಿಗೂ ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತೇನೆ”

– ಬೇಬಿ ಗ್ರೀಷ್ಮ ಗೌಡ, ಬಾಲ ನಟಿ

 

Share this post:

Related Posts

To Subscribe to our News Letter.

Translate »