ಸಿನಿಮಾ ಅನ್ನೋ ಮನೋರಂಜನೆಯ ಮಾಧ್ಯಮದಲ್ಲಿ ಕಲಾ ನಿರ್ದೇಶಕನ ಪಾತ್ರ ಮಹತ್ವದ್ದು. ಆತ ಸಿನಿಮಾಗಾಗಿ ಹಾಕುವ ದೊಡ್ಡ ಸೆಟ್ ನಿಂದ, ಹಿನ್ನೆಲೆಯಲ್ಲಿ ಕಾಣುವ ಸಣ್ಣ ಪ್ರಾಪರ್ಟಿಯ ತನಕ ಎಲ್ಲವು ನೋಡುಗರ ಗಮನ ಸೆಳೆಯುತ್ತದೆ. ವಿಜಯ್ ನಾಗೇಂದ್ರ ನಿರ್ದೇಶನದಲ್ಲಿ ಬಂದ ಕಂಪ್ಲೀಟ್ ಆಕ್ಷನ್ ಎಂಟರ್ ಟೈನರ್ ಚಿತ್ರ ‘ಗುರುದೇವ ಹೊಯ್ಸಳ’. ವಿಶ್ವಾಸ್ ಕಶ್ಯಪ್ ತಮ್ಮ ವಿಶಿಷ್ಟ ಕಲಾನಿರ್ದೇಶನದ ಮೂಲಕ ‘ಗುರುದೇವ್ ಹೊಯ್ಸಳ’ ಸಿನಿಮಾಗೆ ಹೊಸ ಮೆರುಗು ನೀಡಿದ್ದರು. `ಗುರುದೇವ್ ಹೊಯ್ಸಳ’ ಚಿತ್ರಕ್ಕಾಗಿ ವಿಶ್ವಾಸ್ ಕಶ್ಯಪ್ ಅವರಿಗೆ CHITTARA BEST ART DIRECTOR-2024 ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ವಿಶ್ವಾಸ್ ಕಶ್ಯಪ್, `ಚಿತ್ತಾರ ಸಂಸ್ಥೆಗೆ ನಾನು ತುಂಬು ಹೃದಯದ ಧನ್ಯವಾದ ತಿಳಿಸುತ್ತೇನೆ. ನನ್ನ ಕೆಲಸ ಗುರುತಿಸಿ ಈ ಅವಾರ್ಡ್ ನೀಡಿದ್ದಕ್ಕೆ. ಈ ಅವಾರ್ಡ್ನಿಂದ ನಂಗೆ ಇನ್ನಷ್ಟು ಸ್ಪೂರ್ತಿ ಬಂದಿದೆ. ಅಂಡ್ ಗುರುದೇವ ಹೊಯ್ಸಳ ಸಿನಿಮಾ ಸ್ವಲ್ಪ ಚಾಲೆಂಜಿAಗ್ ಆಗಿನೇ ಇತ್ತು. ಥ್ಯಾಂಕ್ಯೂ ವೆರಿ ಮಚ್ ನಮ್ಮ ತಂಡಕ್ಕೆ. ಸದಾ ಬೆಂಬಲಿಸುವ ಚಿತ್ತಾರಕ್ಕೂ ಧನ್ಯವಾದಗಳು’ ಎಂದಿದ್ದಾರೆ.