Sandalwood Leading OnlineMedia

“ಕಾಟೇರದ ಯಶಸ್ಸು ನನಗೆ ಮಾತ್ರವಲ್ಲ ಇಡೀ ಕರ್ನಾಟಕಕ್ಕೆ ಬೇಕಾಗಿತ್ತು”– ಶ್ರೀಮತಿ ಶ್ರುತಿ, ಖ್ಯಾತ ನಟಿ / CHITTARA EXCLUSIVE

ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಟಿಯಾಗಿ ದಶಕಗಳ ಕಾಲ ಅಭಿಮಾನಿಗಳನ್ನು ರಂಜಿಸಿದ ಶ್ರುತಿಯವರು ಇದೀಗ ವೈವಿಧ್ಯಮಯ ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಾ ನಿರ್ದೇಶಕರ ಕಲ್ಪನೆಗೆ ಹೊಸ ಮೆರುಗು ತುಂಬುತ್ತಿದ್ದಾರೆ. ‘ಕಾಟೇರ’ ಚಿತ್ರದಲ್ಲಿ ಶ್ರುತಿಯವರು ಕುಮಾರಿ ಎಂಬ ಪಾತ್ರಕ್ಕೆ ಜೀವ ತುಂಬಿ ನಟಿಸಿದ ರೀತಿ ಮರೆಯಲಾಗದು. ‘ಕಾಟೇರ’ ಚಿತ್ರದ ಅದ್ಭುತ ನಟನೆಗೆ ಶ್ರುತಿಯವರಿಗೆ CHITTARA BEST ACTOR SUPPORTING ROLE FEMALE-2024 ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

 

“ಕಾಟೇರದ ಯಶಸ್ಸು ನನಗೆ ಮಾತ್ರವಲ್ಲ ಇಡೀ ಕರ್ನಾಟಕಕ್ಕೆ ಬೇಕಾಗಿತ್ತು”

“ಈ ಸಿನಿಮಾ ಬಹಳ ಮುಖ್ಯ. ನನಗೆ ಮಾತ್ರವಲ್ಲ ಇಡೀ ಸಮಾಜಕ್ಕೆ. ಬಹುಶಃ ಕನ್ನಡಿಗರು ಬಹಳ ದಿನಗಳಿಂದ ಕಾತುರದಿಂದ ಕಾಯುತ್ತಿದ್ದ ಯಶಸ್ಸನ್ನು ಈ ಸಿನಿಮಾ ತಂದುಕೊಟ್ಟಿದೆ. ಈ ಸಿನಿಮಾದಲ್ಲಿ ಜನ ನನ್ನನ್ನು ಇಷ್ಟಪಟ್ಟು ಆಯ್ಕೆ ಮಾಡಿದ್ದಕ್ಕೆ ನನ್ನ ಧನ್ಯವಾದಗಳು. ಸಪೋರ್ಟಿಂಗ್ ಕ್ಯಾಟಗರಿಯಲ್ಲಿ ನಾನು ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದೀನಿ ಅಂತ ವೋಟ್ ಮಾಡಿ ಆಯ್ಕೆ ಮಾಡಿದ ಕರ್ನಾಕದ ಮಂದಿಗೆ ಧನ್ಯವಾದಗಳು. ಜೊತೆಗೆ ಚಿತ್ತಾರ ಸಂಸ್ಥೆ ಇಷ್ಟು ಅದ್ದೂರಿಯಾಗಿ ಕಾರ್ಯಕ್ರಮವನ್ನು ಮಾಡಿದೆ, ಅವರಿಗೂ ಕೂಡ ಧನ್ಯವಾದಗಳು’’

– ಶ್ರೀಮತಿ ಶ್ರುತಿ, ಖ್ಯಾತ ನಟಿ 

 

Share this post:

Related Posts

To Subscribe to our News Letter.

Translate »