`ಚಿತ್ತಾರ’ ಮಾಸ ಪತ್ರಿಕೆ ಮತ್ತು ಕನ್ನಡ ಚಿತ್ರರಂಗದ ನಡುವಿನ ಅವಿನಾಭಾವ ಸಂಬ0ಧ ಒಂದೂವರೆ ದಶಕದಿಂದಲೂ ಇದೆ. ‘ಚಿತ್ತಾರ’ದ ಇತಿಹಾಸದ ಪುಟಗಳನ್ನು ತಿರುವಿದರೆ ಇದಕ್ಕೆ ಸಾಕಷ್ಟು ಸಾಕ್ಷಿಗಳು ಸಿಕ್ಕಿ ಬಿಡುತ್ತವೆ. ಕನ್ನಡ ಚಿತ್ರೋದ್ಯಮದ ನಾಡಿಮಿಡಿತವನ್ನು ಗಮನಿಸುತ್ತಾ, ಅಲ್ಲಿನ ಬೆಳವಣಿಗೆಗಳನ್ನು ಓದುಗರಿಗೆ ದಾಟಿಸುತ್ತಾ, ತಪ್ಪುಗಳಾದಾಗ ಎಚ್ಚರಿಸುತ್ತಾ, ಸಿನಿಮಾವನ್ನು ಮನೋರಂಜನಾ ಕ್ಷೇತ್ರವಾಗಿಯೂ, ಉದ್ಯಮವಾಗಿಯೂ ನೋಡುವ ಗಾಂಭೀರ್ಯತೆಯನ್ನು ‘ಚಿತ್ತಾರ’ ಉಳಿಸಿಕೊಂಡಿದೆ. ಹೀಗಾಗಿಯೇ ಚಂದನವನವನ್ನು ಉತ್ತೇಜಿಸುವ ಮತ್ತು ಬೆಸೆಯುವ ಅದ್ಭುತ ವೇದಿಕೆಯೊಂದನ್ನು 2019 ‘ಚಿತ್ತಾರ ಸ್ಟಾರ್ ಅವಾರ್ಡ್ಸ್’ ಮೂಲಕ ಸೃಷ್ಟಿಸಿತು. ಮೊದಲ ಕಾರ್ಯಕ್ರಮದಲ್ಲೇ ವರ್ಣರಂಜಿತ, ಅದ್ದೂರಿ, ಅರ್ಥಗರ್ಭಿತ ಕಾರ್ಯಕ್ರಮವನ್ನು ಆಯೋಜಿಸಿದ್ದ ‘ಚಿತ್ತಾರ’ ಇದೀಗ ಐದನೇ ಆವೃತ್ತಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಹಿರಿಯ ನಟ ಸುಂದರ್ ರಾಜ್ ಅವರು CHITTARA BEST ACTOR IN A SUPPORTING ROLE MALE – 2025′ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಚಿತ್ರರಂಗ ಮಹಾವೃಕ್ಷವಾಗಿ ನಿಲ್ಲಲು ಕಲೆಯನ್ನೇ ಜೀವನವಾಗಿಸಿಕೊಂಡು, ಪೋಷಿಸಿ, ಆರೈಕೆ ಎಷ್ಟೋ ಹಿರಿಯರ ಪಾಲು ದೊಡ್ಡದು. ಅಂತಹ ಹಿರಿಯರಲ್ಲಿ ನಮ್ಮ ಸುಂದರರಾಜ್ ಅವರು ಕೂಡ ಚಿತ್ರರಂಗಕ್ಕೆ ತಮ್ಮದೆ ಕೊಡುಗೆ ನೀಡಿದ್ದಾರೆ… ಕಾಡು ಚಿತ್ರದ ಮೂಲಕ ಬಣ್ಣ ಹಚ್ಚಿದ ಸುಂದರ್ ರಾಜ್ ಅವರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚೋಮನದುಡಿ, ತಬ್ಬಲಿ ನೀನಾದೆ ಮಗನೆ ಮುಂತಾದ ಕಾದಂಬರಿ ಆಧರಿತ ಚಿತ್ರಗಳಲ್ಲಿನ ಇವರ ನಟನೆ ಸದಾ ಜೀವಂತ….ಬ್ಯಾ0ಕರ್ ಮಾರ್ಗಯ್ಯ ಚಿತ್ರದಲ್ಲಿ ಬಾಲುವಾಗಿ, ಒಂದು ಮುತ್ತಿನ ಕಥೆ ಚಿತ್ರದಲ್ಲಿ ಧೂಮನಾಗಿ.. ಹೀಗೆ ರಾಜ್ ಕುಮಾರ್, ಲೋಕೇಶ್ ರಂಥ ಮಹಾನ್ ನಟರ ಜೊತೆ ನಟಿಸಿದ ಇವರ ಕುಟುಂಬಕ್ಕೆ ಕಲೆಯೇ ಜೀವಾಳ…ಪತ್ನಿ ಪ್ರಮೀಳಾ ಜೋಷಾಯ್ ಮಗಳು ಮೇಘನಾ ರಾಜ್ ಹೀಗೆ ಎಲ್ಲರೂ ಕಲೆಗೆ ತಮ್ಮನ್ನು ಮುಡುಪಾಗಿಟ್ಟಿದ್ದಾರೆ… ನಾಯಕ ನಟನಾಗಿ, ಪೋಷಕ ನಟನಾಗಿ, ಖಳ ನಟನಾಗಿ ಸದಾ ನಮ್ಮನ್ನ ರಂಜಿಸುತ್ತಾ ಬಂದಿದ್ದಾರೆ.. ತೆಲುಗು, ತಮಿಳು ಚಿತ್ರರಂಗದಲ್ಲೂ ನಟಿಸಿರುವ ಇವರೊಬ್ಬ ನಿರ್ದೇಶಕರ ನಟ. ನಿಜವಾದ ಕಲಾವಿದ ಪಾತ್ರಕ್ಕಷ್ಟೆ ಅಲ್ಲದೆ ಕಾಲಕ್ಕೂ ತಕ್ಕಂತೆ ಹೊಂದಿಕೊಳ್ಳುವುದು ಬಹುಮುಖ್ಯ…ಅದು ಇವರಿಗೆ ಕರಗತ…ಇತ್ತೀಚೆಗಷ್ಟೆ ತೆರೆಕಂಡ laughing Buddha ಚಿತ್ರದಲ್ಲಿ ನಾಯಕಿಯ ತಂದೆಯ ಪಾತ್ರದಲ್ಲಿನ ಇವರ ಅಭಿನಯವನ್ನ ಮೆಚ್ಚದವರು ಯಾರು, ಅವರ ಮುಂದಿನ ಸಿನಿ ಪಯಣ ಯಶಸ್ವಿಯಾಗಿ ಸಾಗಲಿ ನಮ್ಮನ್ನೆಲ್ಲಾ ಇನ್ನಷ್ಟು ರಂಜಿಸಲಿ ಎಂದು ಆಶಿಸುತ್ತಾ ಚಿತ್ತಾರವು CHITTARA BEST ACTOR IN A SUPPORTING ROLE MALE – 2025’ಪ್ರಶಸ್ತಿ ನೀಡಿ ಗೌರವಿಸಿದೆ.