ಚಿ.ತು ಯುವಕರ ಸಂಘದ ಟೀಸರ್ ಗೆ ಪ್ರೇಕ್ಷಕರು ಫಿದಾ
ಅದೇ ಫ್ಲೇವರ್.. ಹೊಸ ಹೈಕ್ಳು.. ಔಟ್ ಅಂಡ್ ಔಟ್ ಹಳ್ಳಿ ಮಸಾಲೆ..
ಕಮರೊಟ್ಟು ಚೆಕ್ ಪೋಸ್ಟ್ ನಿರ್ಮಾಪಕರ ಮತ್ತೊಂದು ಕಾಣಿಕೆ
ಜೋಗಿ ವಾಯ್ಸಲ್ಲಿ ಚಿ.ತು ಟೀಸರ್, ಪಾತ್ರಗಳನ್ನ ಪರಿಚಯಿಸಿದ ಹ್ಯಾಟ್ರಿಕ್ ಡೈರೆಕ್ಟರ್
5ಲಕ್ಷ ವೀವ್ಸ್ ನಿಧಾನವಾಗಿ ದೊಡ್ಡದಾಗಿ ವೈರಲ್ ಆಗ್ತಿದೆ ಟೀಸರ್
—————
ಇನ್ನೂ ಒದಿ ಆಂಜನೇಯನ ಗಧೆಯ ಮಹತ್ವ ಹೇಳುವ ಜೈ ಗದಾ ಕೇಸರಿ…
ಚಿ.ತು ಯುವಕರ ಸಂಘ.. ಅಧ್ಯಕ್ಷ ಸಿನಿಮಾದಲ್ಲಿ ಶರಣ್ ಮತ್ತು ಚಿಕ್ಕಣ್ಣ ಕಟ್ಟಿದ್ದ ಸಂಘ. ಇದೀಗ ಅದೇ ಸಂಘದ ಹೆಸರಿಟ್ಟುಕೊಂಡು… ಅಧ್ಯಕ್ಷ ಫ್ಲೇವರ್ ನಲ್ಲಿ ಪಕ್ಕಾ ಹಳ್ಳಿ ನಾಟಿ ಸ್ಟೈಲ್ ನಲ್ಲಿ ಔಟ್ ಅಂಡ್ ಔಟ್ ಎಂಟ್ರೈನ್ಮೆಂಟ್ ಪ್ಯಾಕೇಜ್ ರೆಡಿಯಾಗಿದೆ. ಇತ್ತೀಚೆಗಷ್ಟೇ ರಿಲೀಸ್ ಆಗಿರೋ ಟೀಸರ್ ಗಮನ ಸೆಳೆದಿದೆ. ಯುಟ್ಯೂಬ್ ನಲ್ಲಿ 5ಲಕ್ಷ ವೀವ್ಸ್ ಜೊತೆಗೆ ಅತ್ಯುತ್ತಮ ಕಮೆಂಟ್ ಗಳನ್ನ ಪಡೆದುಕೊಂಡಿದೆ. ಸ್ಯಾಂಡಲ್ ವುಡ್ ಅಂಗಳದಲ್ಲಿ ಬರಲಿರೋ ಸಿನಿಮಾಗಳ ಸಾಲಲ್ಲಿ ಭರವಸೆ ಮತ್ತು ನಿರೀಕ್ಷೆ ಎರಡನ್ನೂ ಚಿತು ಯುವಕರ ಸಂಘದ ಟೀಸರ್ ಹುಟ್ಟಿಸಿದೆ.
ಚಿ.ತು ಯುವಕರ ಸಂಘ ಚಿತ್ರವನ್ನ ಶಿವು ರಾಮನಗರ ನಿರ್ದೇಶನ ಮಾಡಿದ್ದು, ಕಮರೊಟ್ಟು ಚೆಕ್ ಪೋಸ್ಟ್ ಖ್ಯಾತಿಯ ಚೇತನ್ ರಾಜ್ ನಿರ್ಮಾಣ ಮಾಡಿದ್ದಾರೆ. ಐ ಲವ್ ಯೂ ಖ್ಯಾತಿಯ ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲ್ ಸಂಗೀತ ಸಂಯೋಜಿಸಿದ್ದಾರೆ.
ಇನ್ನೂ ಒದಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು ಅರ್ಜುನ್ ಸರ್ಜಾ ಪುತ್ರಿ ನಿಶ್ಚಿತಾರ್ಥ .
ಚಿ. ತು ಯುವಕರ ಸಂಘಕ್ಕೆ ನಾಯಕನಾಗಿ ಸನತ್ ಕಾಣಿಸಿಕೊಂಡಿದ್ದು, ವಿರಾನಿಕ ಶೆಟ್ಟಿ ನಾಯಕಿಯಾಗಿ ಅಭಿನಯಸಿದ್ದಾರೆ. ತುಕಾಲಿ ಸಂತು,ಮಹಂತೇಶ್, ಸಲ್ಮಾನ್, ಕುರಿ ಪ್ರತಾಪ್ಗಿರಿ ಚಿತ್ರದ, ಬಲರಾಜವಾಡಿ, ಬಿರಾದಾರ್ ಸೇರಿದಂತೆ ದೊಡ್ಡ ಪ್ರತಿಭಾವಂತ ತಾರಾಬಳಗ ಈ ಚಿತ್ರದಲ್ಲಿದೆ. ಟೀಸರ್ ನಲ್ಲಿ ಈ ಎಲ್ಲಾ ಪಾತ್ರದಾರಿಗಳನ್ನ ಹ್ಯಾಟ್ರಿಕ್ ಡೈರೆಕ್ಟರ್ ಶೋ ಮ್ಯಾನ್ ಜೋಗಿ ಪ್ರೇಮ್ ಪರಿಚಯಿಸಿರೋದು ವಿಶೇಷ. ಟೀಸರ್ ಲುಕ್ ಇಂಪ್ರೆಸೀವ್ ಆಗಿದೆ. ಅಧ್ಯಕ್ಷ ಫ್ಲೇವರ್ ಇರೋ ಈ ಚಿತ್ರವನ್ನ ಖುದ್ದು ಅಧ್ಯಕ್ಷ ಶರಣ್ ಕೊಂಡಾಡಿದ್ದಾರೆ.
ಅಂದ್ಹಾಗೆ ಟೀಸರ್ ನಿಂದ ಸದ್ದು ಸುದ್ದಿ ಮಾಡ್ತಿರೋ ಚಿ.ತು ಯುವಕರ ಸಂಘದ ಹಾಡುಗಳು ಸದ್ಯದಲ್ಲೇ ರಿಲೀಸ್ ಆಗಲಿದೆ.