Sandalwood Leading OnlineMedia

777+4 = 27 !

777+4 = 27 !

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ‍  ಚಿತ್ರ ಬಿಡುಗಡೆಯಾದ ಕೇವಲ 4 ದಿನದಲ್ಲಿ ರೂ.27 ಕೋಟಿ ಗಳಿಕೆ ಮಾಡಿದೆ ಎಂದು ತಿಳಿದುಬಂದಿದೆ.

 

ಕನ್ನಡ, ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾದ ಈ ಚಿತ್ರಕ್ಕೆ ಎಲ್ಲಾ ಭಾಷೆಗಳಲ್ಲೂ ವ್ಯಾಪಕ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ. ಶುಕ್ರವಾರ, ಶನಿವಾರ, ಭಾನುವಾರ ಚಿತ್ರದ ಬಹುತೇಕ ಪ್ರರ‍್ಶನಗಳು ಹೌಸ್ ಫುಲ್ ಆಗಿದ್ದವು, ಸೋಮವಾರ ಕೂಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

 

777 charlie movie review

 

 

ವಾರಾಂತ್ಯ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತೆಲುಗು ವಿತರಕರು ಸಂತೋಷಪಟ್ಟಿದ್ದಾರೆ. ಕೇರಳದಲ್ಲಿ ಮೂರು ಮಲಯಾಳಂ ಚಿತ್ರ ಕೂಡ ಚಾರ್ಲಿ ‍ ಬಿಡುಗಡೆಯಾದ ದಿನವೇ ಬಿಡುಗಡೆಯಾಗಿದೆ. ಆದರೂ ನಮ್ಮ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಗಳು ಬಂದಿದೆ. ತಮಿಳುನಾಡು, ಪುಣೆಯಲ್ಲು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಕನ್ನಡ ಆವೃತ್ತಿಯ ಡಿಜಿಟಲ್ ಹಕ್ಕುಗಳನ್ನು ವೂಟ್ಗೆ ಮಾರಾಟ ಮಾಡಲಾಗಿದ್ದು, ಚಿತ್ರದ ಇತರ ಆವೃತ್ತಿಗಳ ಹಕ್ಕುಗಳಿಗೆ ಬೇಡಿಕೆ ಹೆಚ್ಚುತ್ತಿದೆ.

777 ಚಾರ್ಲಿ ‍ ಪರಂವಾ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನರ‍್ಮಿಸಲಾಗಿದ್ದು, ಚಿತ್ರಕ್ಕೆ ಕಿರಣ್ರಾಜ್ ಕಥೆ ಬರೆದು ನರ‍್ದೇಶಿಸಿದ್ದಾರೆ ಹಾಗೂ ರಕ್ಷಿತ್ ಶೆಟ್ಟಿ ನಟಿಸಿದ್ದಾರೆ, ರಾಜ್ ಬಿ ಶೆಟ್ಟಿ, ಸಂಗೀತಾ ಶೃಂಗೇರಿ, ಡ್ಯಾನಿಶ್ ಸೇಟ್ ಮತ್ತು ಬಾಬಿ ಸಿಂಹ ಮತ್ತಿತರರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ನೋಬಿನ್ ಪಾಲ್ ನೀಡಿದ್ದಾರೆ. ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣವನ್ನು ನರ‍್ವಹಿಸಿದ್ದಾರೆ.

Share this post:

Related Posts

To Subscribe to our News Letter.

Translate »