Sandalwood Leading OnlineMedia

ಅಕ್ಷಿತ್ ಶಶಿಕುಮಾರ್ – ಅದಿತಿ ಪ್ರಭುದೇವ ಅಭಿನಯದ “ಖೆಯೊಸ್” ಚಿತ್ರ ಫೆಬ್ರವರಿ 17 ರಂದು ತೆರೆಗೆ.

 
THE BLACK PEBBLE ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಪಾರುಲ್ ಅಗರವಾಲ್ ಹಾಗೂ ಹೇಮಚಂದ್ರ ರೆಡ್ಡಿ ನಿರ್ಮಿಸಿರುವ “ಖೆಯೊಸ್” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಹಾಗೂ ಸ್ಯಾಂಡಲ್ ವುಡ್ ಬೆಡಗಿ ಅದಿತಿ ಪ್ರಭುದೇವ ಈ ಚಿತ್ರದ ನಾಯಕ – ನಾಯಕಿಯಾಗಿ ಅಭಿನಯಿಸಿದ್ದಾರೆ. ಶಶಿಕುಮಾರ್ ಅವರು ಈ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದು, ತಂದೆ – ಮಗ ಇಬ್ಬರೂ ಒಟ್ಟಿಗೆ ಅಭಿನಯಿಸಿರುವ ಮೊದಲ ಚಿತ್ರವಿದು. ಆರ್ ಕೆ ಚಂದನ್, ಸಿದ್ದು ಮೂಲಿಮನಿ ಮೊದಲಾದವರು ,ತಾರಾಬಳಗದಲ್ಲಿದ್ದಾರೆ.
ಡಾ.ಜಿ.ವಿ.ಪ್ರಸಾದ್ “ಖೆಯೊಸ್” ಚಿತ್ರದ ನಿರ್ದೇಶಕರು. ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.
 
ಇದೊಂದು ಮೆಡಿಕಲ್ ಕಾಲೇಜಿನಲ್ಲಿ ನಡೆಯುವ ಕಥೆ. ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಮರ್ಡರ್ ಮಿಸ್ಟರಿ ಜಾನರ್ ಎನ್ನಬಹುದು. ಮನಸ್ಸಿನಲ್ಲಾಗುವ ಗೊಂದಲ, ಅಸ್ತವ್ಯಸ್ತ ಇವುಗಳಿಗೆ “ಖೆಯೊಸ್” ಎನ್ನುತ್ತಾರೆ. ಫೆಬ್ರವರಿ 17 ಚಿತ್ರ ತೆರೆಗೆ ಬರಲಿದೆ. ಜನವರಿ 26 ರಂದು “ಖೆಯೊಸ್” ಚಿತ್ರದ ತುಣುಕು ಬಿಡುಗಡೆಯಾಗಲಿದೆ. ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ ಎನ್ನುತ್ತಾರೆ ನಿರ್ದೇಶಕ ಜಿ.ವಿ.ಪ್ರಸಾದ್.
ವಿ.ನಾಗೇಂದ್ರ ಪ್ರಸಾದ್ ಹಾಗೂ ಜಿ.ವಿ.ಪ್ರಸಾದ್ ಬರೆದಿರುವ ಮೂರು ಹಾಡುಗಳು ಚಿತ್ರದಲ್ಲಿದ್ದು, ವಿಜಯ್ ಹರಿತ್ಸ ಸಂಗೀತ ನೀಡಿದ್ದಾರೆ. ದಿಲೀಪ್ ಕುಮಾರ್, ಸಂದೀಪ್ ವಳ್ಳೂರಿ ಛಾಯಾಗ್ರಹಣ ಹಾಗೂ ಮಧು ತುಂಬಿಕೆರೆ, ವೆಂಕಿ ಯುಡಿವಿ ಸಂಕಲನವಿರುವ “ಖೆಯೊಸ್” ಚಿತ್ರಕ್ಕೆ ಚೇತನ್ ಡಿಸೋಜ , ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿದೆ.
 
  

Share this post:

Related Posts

To Subscribe to our News Letter.

Translate »