Sandalwood Leading OnlineMedia

‘ಚಾನೆಲ್ 9’ ಹೊಸ ಶಾಖೆ ಉದ್ಘಾಟಿಸಿದ ಪ್ರಜ್ವಲ್ ದೇವರಾಜ್ , ಮೇಘನಾ ರಾಜ್

ಕ್ಯಾಸೆಟ್ ಹಾಗೂ ಮೊಬೈಲ್ ಗಳಿಗೆ ಜನಪ್ರಿಯವಾಗಿದ್ದ ಚಾನಲ್ 9 ಶೋ ರೂಮ್ ಇಂದು ‘ವಿಲ್ಯುರ್’ ಎಂಬ ಶಾಖೆಯನ್ನು ಬೆಂಗಳೂರಿನ ಜಯನಗರದಲ್ಲಿ ನೂತನವಾಗಿ ಆರಂಭಿಸಿದೆ. ಚಂದನವನದ ಖ್ಯಾತ ನಟ ಪ್ರಜ್ವಲ್ ದೇವರಾಜ್, ನಟಿ ಮೇಘನಾ ರಾಜ್ ಹಾಗೂ ಸುಂದರ್ ರಾಜ್ ‘ಚಾನೆಲ್ 9’ ನೂತನ ಶೋ ರೂಮ್ ಉದ್ಘಾಟನೆ ಮಾಡಿ ಶುಭ ಹಾರೈಸಿದ್ರು.
ಕಾಲೇಜು ದಿನಗಳಿಂದ ನಾನು ಇಲ್ಲಿಗೆ ಬರ್ತಿದ್ದೇನೆ. ನಾನು ಆರಂಭದಲ್ಲಿ ಬಳಸುತ್ತಿರುವ ಪೋನ್ ನಿಂದ ಹಿಡಿದು ಈಗ ಬಳಕೆ ಮಾಡುತ್ತಿರುವ ಫೋನ್ ಕೂಡ ಚಾನೆಲ್ 9 ನಲ್ಲೇ ತೆಗೆದುಕೊಂಡಿದ್ದು. ಇವರ ಸರ್ವಿಸ್ ತುಂಬಾ ಚೆನ್ನಾಗಿದೆ. ಎಲ್ಲಾ ಗ್ರಾಹಕರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ. ಒಂದು ಶೋ ರೂಮ್ ಇರೋದು ಹತ್ತು ಆಗಲಿ ಎಂದು ನಟ ಪ್ರಜ್ವಲ್ ದೇವರಾಜ್ ‘ಚಾನೆಲ್ 9’ ನೊಂದಿಗಿನ ತಮ್ಮ ಒಡನಾಟ ಹಂಚಿಕೊಂಡು ಶುಭ ಕೋರಿದ್ರು.
 
 
ನಟಿ ಮೇಘನಾ ರಾಜ್ ಮಾತನಾಡಿ ‘ಚಾನೆಲ್ 9’ ಗೆ ಇಂದು ಸೆಲೆಬ್ರೆಟಿ ಗೆಸ್ಟ್ ಆಗಿ ಬಂದಿಲ್ಲ ಮನೆ ಮಗಳಾಗಿ ಬಂದಿದ್ದೇನೆ. ಪ್ರತಿ ಸಾರಿ ಇಲ್ಲಿ ಬಂದಾಗಲು ನನ್ನ ಮನೆಯಂತೆ ಫೀಲ್ ಆಗುತ್ತೆ. ನಮಗೆ ಇವರು ಫ್ಯಾಮಿಲಿ ಫ್ರೆಂಡ್ಸ್ ಕೂಡ ಹೌದು. ಚಿಕ್ಕಂದಿನಲ್ಲಿ ನಾನು ಇಲ್ಲಿ ಕ್ಯಾಸೆಟ್ ರೆಂಟಿಗೆ ಪಡೆಯುತ್ತಿದ್ದೆ. ಕ್ವಾಲಿಟಿ ವಿಚಾರದಲ್ಲಿ ‘ಚಾನೆಲ್ 9’ ಯಾವತ್ತೂ ಕಾಂಪ್ರಮೈಸ್ ಆಗೋದಿಲ್ಲ. ಇವರ ಬೆಳವಣಿಗೆ ಆರಂಭದಿಂದ ನೋಡಿದ್ದೇನೆ ಈ ಹಂತಕ್ಕೆ ಬಂದಿರೋದು ನಮಗೆ ತುಂಬಾ ಖುಷಿ ಇದೆ ಎಂದು ತಿಳಿಸಿದ್ರು.
 
 
 
‘ಚಾನೆಲ್ 9’ ಮಾಲೀಕರಾದ ಅರ್ಜುನ್ ಮಾತನಾಡಿ ಇಂದು ಚಾನೆಲ್ 9 ನ ‘ವಿಲ್ಯುರ್’ ಎಂಬ ಹೊಸ ಶಾಖೆ ಆರಂಭಿಸಿದ್ದೇವೆ. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದಲ್ಲಿ ಎಲ್ಲಾ ಗೃಹೋಪಯೋಗಿ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳು ಇಲ್ಲಿ ಸಿಗಲಿವೆ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ನೀಡೋದು ನಮ್ಮ ಜವಾಬ್ದಾರಿ. ಎಲ್ಲರೂ ಒಮ್ಮೆ ಇಲ್ಲಿಗೆ ಭೇಟಿ ಮಾಡಬೇಕು ಎಂದು ತಿಳಿಸಿದ್ರು.
 

Share this post:

Related Posts

To Subscribe to our News Letter.

Translate »