Sandalwood Leading OnlineMedia

`ಚಿತ್ತಾರ ಸ್ಟಾರ್ ಅವಾರ್ಡ್ಸ್-2025’ರ ನಾಮಿನೇಶನ್ ರಿವೀಲ್ ಮಾಡಲಿದ್ದಾರೆ ಸ್ಟಾರ್ ನಟ-ನಟಿಯರು

 
 
`ಚಿತ್ತಾರ’ ಮಾಸ ಪತ್ರಿಕೆ ಚಂದನವನವನ್ನು ಉತ್ತೇಜಿಸುವ ಮತ್ತು ಬೆಸೆಯುವ ಅದ್ಭುತ ವೇದಿಕೆಯೊಂದನ್ನು2019ರಲ್ಲಿ `ಚಿತ್ತಾರ ಸ್ಟಾರ್ ಅವಾರ್ಡ್ಸ್’ ಮೂಲಕ ಸೃಷ್ಟಿಸಿತು. ಮೊದಲ ಕಾರ್ಯಕ್ರಮದಲ್ಲೇ ವರ್ಣರಂಜಿತ, ಅದ್ದೂರಿ, ಅರ್ಥಗರ್ಭಿತ ಕಾರ್ಯಕ್ರಮವನ್ನು ನೀಡಿದ್ದ `ಚಿತ್ತಾರ’, ಈ ಹಿಂದೆ ಚಿತ್ತಾರ short films ಅವಾರ್ಡ್ಸ್, ಅಭಿಮಾನಿಯೊಂದಿಗೆ ತಾರೆ, ಎ ಡೇ ವಿತ್ ಸ್ಟಾರ್…  ಹೀಗೆ ಸಾಕಷ್ಟು ಯಶಸ್ವಿ ಕಾರ್ಯಕ್ರಮಗಳನ್ನು ನೀಡುತ್ತಲೇ ಬಂದಿದೆ. 
 
ಚಂದನವನದ ಪ್ರತಿಭೆಗಳನ್ನು ಗುರುತಿಸಲು ಮತ್ತು ಕನ್ನಡ ಚಿತ್ರರಂಗದ ಅಭೂತಪೂರ್ವ ಪರಂಪರೆಯನ್ನು ಎತ್ತಿಹಿಡಿಯಲು `ಚಿತ್ತಾರ ಸ್ಟಾರ್ ಅವಾರ್ಡ್ಸ್’ ವೇದಿಕೆಯಾಗಬೇಕೆಂಬುದೇ ಚಿತ್ತಾರದ ಆಶಯ. ಸ್ಯಾಂಡ್‌ವುಡ್‌ನಲ್ಲಿರುವ ಅಸಾಧಾರಣ ಪ್ರತಿಭೆಗಳನ್ನು ಗುರುತಿಸಿ, ಪ್ರಶಂಸಿಸಿ ಚಿತ್ರರಂಗದ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದಲೇ ಇದೀಗ `ಸ್ಟಾರ್ ಅವಾರ್ಡ್ಸ್’ ಐದನೇ ಆವೃತ್ತಿಗೆ ಸಜ್ಜಾಗಿದೆ. ಅಣಿಯಾಗಿದೆ. 2024ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಸೆನ್ಸಾರ್ ಮಂಡಳಿಯಿ0ದ ಪ್ರಮಾಣೀಕೃತಗೊಂಡು ಬಿಡುಗಡೆಯಾದ ಚಿತ್ರಗಳನ್ನು `ಚಿತ್ತಾರ ಸ್ಟಾರ್ ಅವಾರ್ಡ್ಸ್-2025’ಗೆ ಪರಿಗಣಿಸಲಾಗಿದೆ. ನಾಮನಿರ್ದೇಶಿತರನ್ನು, ವಿಜೇತರನ್ನಾಗಿಸುವ ಆಯ್ಕೆಯ ಅವಕಾಶವನ್ನು ವೆಬ್‌ಸೈಟ್ `ಆನ್‌ಲೈನ್ ವೋಟಿಂಗ್’ ಮೂಲಕ ಸಾರ್ವಜನಿಕರಿಗೂ ನೀಡಲಾಗಿದ್ದು, ಈ ಬಾರಿ ಮೊಟ್ಟ ಮೊದಲ ಬಾರಿಗೆ ವಾಟ್ಸ್ಪ್ ಮೂಲಕವೂ ವೋಟಿಂಗ್ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ವೋಟಿಂಗ್‌ಗೂ ಮೊದಲು ನಾಮನಿರ್ದೇಶನ ಕೊಂಡ ಪ್ರತಿಭೆಗಳನ್ನು ಚಂದನವನದ ಸ್ಟಾರ್ ನಟ/ನಟಿಯರು ಬಿಡುಗಡೆ ಮಾಡಲಿದ್ದಾರೆ..  ಅವುಗಳ ವಿವರಗಳು ಈ ಕೆಳಗಿನಂತಿವೆ..

 

 
 

Share this post:

Translate »