Sandalwood Leading OnlineMedia

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಂದ ಬಿಡುಗಡೆಯಾಯಿತು ಧನ್ವೀರ್ ಅಭಿನಯದ “ಕೈವ” ಚಿತ್ರದ ಟ್ರೇಲರ್ ..ಬಹು ನಿರೀಕ್ಷಿತ ಈ ಚಿತ್ರ ಡಿಸೆಂಬರ್ 8 ರಂದು ತೆರೆಗೆ .

ರವೀಂದ್ರಕುಮಾರ್ ನಿರ್ಮಾಣದ, ಜಯತೀರ್ಥ ನಿರ್ದೇಶನದ ಹಾಗೂ ಧನ್ವೀರ್ ನಾಯಕರಾಗಿ ನಟಿಸಿರುವ ” ಕೈವ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ರಾಜಾಜಿನಗರದ ಕೆ.ಎಲ್.ಇ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ಅದ್ದೂರಿ ಸಮಾರಂಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. ಅಭಿಷೇಕ್ ಅಂಬರೀಶ್, ಚಿಕ್ಕಣ್ಣ, ನಟಿ ಆಶಾ ಭಟ್ ಸೇರಿದಂತೆ ಅನೇಕ ಗಣ್ಯರು ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಬಹು ನಿರೀಕ್ಷಿತ ಈ ಚಿತ್ರ ಡಿಸೆಂಬರ್ 8 ರಂದು ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ ಬಹು ನಿರೀಕ್ಷಿತ “ಅನಿಮಲ್” ಚಿತ್ರ ಡಿಸೆಂಬರ್ 1 ರಂದು ಬಿಡುಗಡೆ .

ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, “ಕೈವ” ಚಿತ್ರದ ಟ್ರೇಲರ್ ತುಂಬಾ ಚೆನ್ನಾಗಿದೆ. ನಾನು ಚಿತ್ರದ ಟ್ರೇಲರ್ ಜೊತೆಗೆ ಶೊ ರೀಲ್ ಕೂಡ ನೋಡಿದ್ದೇನೆ‌. ನಿರ್ದೇಶಕ ಜಯತೀರ್ಥ ಅವರು ಚಿತ್ರವನ್ನು ಉತ್ತಮವಾಗಿ ನಿರ್ದೇಶಿಸಿದ್ದಾರೆ. ಧನ್ವೀರ್ ಸೇರಿದಂತೆ ಎಲ್ಲರ ಅಭಿನಯ ಚೆನ್ನಾಗಿದೆ. ಚಿತ್ರ ಡಿಸೆಂಬರ್ 8 ರಂದು ಬಿಡುಗಡೆಯಾಗುತ್ತಿದೆ‌. ಎಲ್ಲರೂ ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎಂದರು.

ಇದನ್ನೂ ಓದಿ  ಮತ್ತೆ ಪ್ರೇಮಕಥೆಯತ್ತ ದಿಯಾ ಹೀರೋ..ಪೃಥ್ವಿ ಅಂಬಾರ್ ನಟನೆಯ ‘ಜೂನಿ’ ಸಿನಿಮಾದ ಫಸ್ಟ್ ಲುಕ್ ರಿಲೀಸ್

ನನಗೆ “ಬೆಲ್ ಬಾಟಮ್” ಚಿತ್ರದ ವೇಳೆ ಮಾರ್ಚುರಿಗೆ ಹೋದಾಗ ಸಿಕ್ಕ ಕಥೆಯಿದು. 1983 ರಲ್ಲಿ ಬೆಂಗಳೂರಿನ ತಿಗಳಪೇಟೆಯಲ್ಲಿ ನಡೆದ ನೈಜಘಟನೆ ಆಧರಿಸಿದ ಚಿತ್ರವಿದು. ಧನ್ವೀರ್ ಹಾಗೂ ಮೇಘ ಶೆಟ್ಟಿ ನಾಯಕ – ನಾಯಕಿಯಾಗಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದ ಐದು ಜನ ನಿರ್ದೇಶಕರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ದರ್ಶನ್ ಅವರು “ಕೈವ” ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದಾರೆ. ನನ್ನ ಹಿಂದಿನ ಚಿತ್ರಗಳಿಗೂ ಅವರು ಬಂದು ಹಾರೈಸಿದ್ದರು. ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ನಮ್ಮ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ ಎಂದು ನಿರ್ದೇಶಕ ಜಯತೀರ್ಥ ತಿಳಿಸಿದರು.

ಇದನ್ನೂ ಓದಿ  ಬಹು ನಿರೀಕ್ಷೆಯ ಆಡು ಜೀವಿತಂ ( the goat life) ಚಿತ್ರದ ರಿಲೀಸ್ ಡೇಟ್ ನಾಳೆ ಅನೌನ್ಸ್ : ಇದು ಬೆಸ್ಲಿ- ಪೃಥ್ವಿರಾಜ್ ಸುಕುಮಾರನ್ ಚಿತ್ರ

ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ದರ್ಶನ್ ಅವರಿಗೆ ನಾಯಕ ಧನ್ವೀರ್ ಹಾಗೂ ನಾಯಕಿ ಮೇಘ ಶೆಟ್ಟಿ ವಿಶೇಷ ಧನ್ಯವಾದ ತಿಳಿಸಿದರು‌. ಕಲಾವಿದರಾದ ರಾಘು ಶಿವಮೊಗ್ಗ, ಬಿ.ಎಂ.ಗಿರಿರಾಜ್, ಅಶ್ವಿನ್ ಹಾಸನ್, ಛಾಯಾಗ್ರಾಹಕಿ ಶ್ವೇತಪ್ರಿಯ ಹಾಗೂ ಸಂಭಾಷಣೆ ಬರೆದಿರುವ ರಘು ನಿಡವಳ್ಳಿ ಮುಂತಾದವರು “ಕೈವ” ಚಿತ್ರದ ಕುರಿತು ಮಾತನಾಡಿದರು. .

Share this post:

Related Posts

To Subscribe to our News Letter.

Translate »