ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಹುಟ್ಟುಹಬ್ಬ ಬೇರೆ ಹತ್ತಿರವಿದ್ದು, ಹೊಸ ಸಿನಿಮಾದ ಅನೌನ್ಸ್ ಮೆಂಟ್ ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಎಲ್ಲಾ ವಿಶೇಷತೆಗಳಿಗೂ ಮುನ್ನ ನಟ ದರ್ಶನ್, ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಕುಟುಂಬ ಸಮೇತ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ ‘ಶಾಖಾಹಾರಿ’ ಪ್ರೀ-ರಿಲೀಸ್ ಇವೆಂಟ್…,ಮಲೆನಾಡಿನ ಥ್ರಿಲ್ಲರ್ ಕಥೆಗೆ ಅಶ್ವಿನಿ-ಸುಕ್ಕ ಸೂರಿ ಸಾಥ್..
ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಜೊತೆಗೆ ತಿರುಪತಿಗೆ ಭೇಟಿ ನೀಡಿದ್ದಾರೆ. ವಿನೀಶ್ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಫ್ಯಾಮಿಲಿ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿದೆ.
ಇದನ್ನೂ ಓದಿ ’ಗಾಡ್ ಪ್ರಾಮಿಸ್’ ಎಂದ ಕಾಂತಾರದ ನಟ…ನಿರ್ದೇನಕ್ಕಿಳಿದ ಕುಂದಾಪುರದ ಸೂಚನ್ ಶೆಟ್ಟಿ..
ಕನ್ನಡದ ಜನಪ್ರಿಯ ನಿರ್ದೇಶಕ ಮಿಲನಾ ಪ್ರಕಾಶ್ ಅವರ ಹೊಸ ಸಿನಿಮಾದಲ್ಲಿ ದರ್ಶನ್ ನಟಿಸಲಿದ್ದಾರೆ. ಸಿನಿಮಾದ ಚಿತ್ರೀಕರಣ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಅದಕ್ಕೆ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನವನ್ನು ದರ್ಶನ್ ಪಡೆದುಕೊಂಡಿದ್ದಾರೆ. ಶಾಸಕ ಸತೀಶ್ ರೆಡ್ಡಿ, ಸಚ್ಚಿದಾನಂದ ಇನ್ನೂ ಕೆಲವು ದರ್ಶನ್ರ ಆಪ್ತರು ಒಟ್ಟಿಗೆ ತಿರುಪತಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ‘ರಾಬರ್ಟ್’ ಸಿನಿಮಾದ ಬಿಡುಗಡೆ ವೇಳೆಯಲ್ಲಿಯೂ ಸಹ ನಟ ದರ್ಶನ್ ತಿರುಪತಿಗೆ ಭೇಟಿ ನೀಡಿದ್ದರು.