Sandalwood Leading OnlineMedia

ವೈರಲ್ ಆಗುತ್ತಿರುವ ನಟ ದರ್ಶನ್ ಹೇರ್ ಸ್ಟೈಲ್ ಹಿಂದಿನ ರಹಸ್ಯ ಏನು ??

ದರ್ಶನ್ ಹೊಸ ಹೇರ್‌ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹೊಸ ಹೇರ್ ಸ್ಟೈಲ್ ಅಸಲಿಯತ್ತೇನು ಎನ್ನುವ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಸ್ಟೈಲಿಶ್ ಹೇರ್‌ ಸ್ಟೈಲ್‌ನಲ್ಲಿ ದರ್ಶನ್! ನಟ ದರ್ಶನ್ ಹೊಸ ಹೇರ್ ಸ್ಟೈಲ್ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಹಿಂದೆಂದೂ ಕಾಣಿಸಿಕೊಂಡಿರದ ಹೊಸ ಸ್ಟೈಲಿಶ್ ಹೇರ್ ಸ್ಟೈಲ್‌ನಲ್ಲಿ ನಟ ದರ್ಶನ್ ಕಾಣಿಸಿಕೊಂಡಿದ್ದಾರೆ. ಹಲವು ಕಡೆ ಸಾರ್ವಜನಿಕ ಸ್ಥಳಗಳಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ದರ್ಶನ್ ಹೊಸ ಲುಕ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಎಲ್ಲೆಲ್ಲೂ ಇದೇ ಚರ್ಚೆ ಶುರುವಾಗಿದೆ.

ಹೌದು ಮೂಲಗಳ ಮಾಹಿತಿಯ ಪ್ರಕಾರ ನಟ ದರ್ಶನ್ ಹೇರ್ ಸ್ಟೈಲ್ ತಮ್ಮ ಮುಂದಿನ ಸಿನಿಮಾಗಾಗಿ ಈ ಹೇರ್‌ ಸ್ಟೈಲ್ ಮಾಡಿಕೊಂಡಿದ್ದಾರೆ. ದರ್ಶನ್ ಮುಂದಿನ ಸಿನಿಮಾ D56. ಇದೆ ಚಿತ್ರಕ್ಕಾಗಿ ನಟ ದರ್ಶನ್ ತಮ್ಮ ಹೇರ್ ಸ್ಟೈಲ್ ಬದಲಿಸಿಕೊಂಡಿದ್ದಾರೆ ಎನ್ನಲ್ಲಾಗಿದೆ.

ನಟ ದರ್ಶನ್ D56 ಸಿನಿಮಾಗಾಗಿ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ನಿರ್ದೇಶಕ ತರುಣ್ ಸುಧೀರ್ ಆಕ್ಷನ್ ಕಟ್ ಹೇಳುತ್ತಿದ್ದು, ಸಿನಿಮಾದ ಬಹುತೇಕ ಕೆಲಸಗಳು ಶುರುವಾಗಿವೆ. ಸದ್ಯ ದರ್ಶನ್ ಅವರ ಲುಕ್ ಟೆಸ್ಟ್ ನಡೆಯುತ್ತಿದ್ದು, ಫಸ್ಟ್ ಲುಕ್ ಗಾಗಿ ದರ್ಶನ್ ವಿಭಿನ್ನ ಪ್ರಯೋಗ ಮಾಡುತ್ತಿದ್ದಾರೆ. ಅದರಲ್ಲಿ ಹೊಸ ಹೇರ್ ಸ್ಟೈಲ್ ಕೂಡ ಒಂದು. ಅದೇನೇ ಇದ್ದರೂ ಹೊಸ ಹೇರ್ ಸ್ಟೈಲ್‌ಲ್ಲಿ ದರ್ಶನ್ ಅವ್ರನ್ನ ಕಂಡ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ದರ್ಶನ್ ಈ ಲುಕ್‌ನಲ್ಲಿ ಮತ್ತಷ್ಟು ಯಂಗ್ ಮತ್ತು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

D56 ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ಲಾಂಚ್‌ಗೆ ಭರದ ತಯಾರಿ ನಡೆದಿದೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸಿನಿಮಾ ಸೆಟ್ಟೇರಲಿದೆ ಎನ್ನುವ ಮಾಹಿತಿ ಇದೆ. ಜೊತೆಗೆ ವರಮಹಾಲಕ್ಷ್ಮಿ ಹಬ್ಬದಂದು ನಟ ದರ್ಶನ್ ಲುಕ್ ಕೊಡ ಲಾಂಚ್ ಆಗಲಿದೆ. ಹಾಗಾಗಿ ಇದೇ ಲುಕ್‌ನಲ್ಲಿ ದರ್ಶನ್ ಕಾಣಿಸಿಕೊಳ್ಳುತ್ತಾರಾ ಅಥವಾ ಬೇರೆ ಲುಕ್‌ನಲ್ಲಿ ಎಂಟ್ರಿ ಕೊಡಲಿದ್ದಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಇದೆಲ್ಲದಕ್ಕೂ ವರಮಹಾಲಕ್ಷ್ಮಿ ಹಬ್ಬದಂದು ಉತ್ತರ ಸಿಗಲಿದೆ.

Share this post:

Translate »