‘ಕ್ರಾಂತಿ’ಗಾಗಿ ಪೋಲ್ಯಾಂಡ್‌ಗೆ ಹಾರಿದ ದರ್ಶನ್, ರಚಿತಾ ರಾಮ್
ಡಿ ಬಾಸ್ ದರ್ಶನ್ ನಟನೆಯ ಬಹು ನಿರೀಕ್ಷಿತ “ಕ್ರಾಂತಿ” ಸಿನಿಮಾ ಶೂಟಿಂಗ್ ಅಬ್ಬರದಿಂದ ಶುರುವಾಗಿದೆ. ಡಿ ಬಾಸ್ ಸಿನಿಮಾವನ್ನ ತೆರೆ ಮೇಲೆ ನೋಡೋಕೆ ಅಭಿಮಾನಿಗಳು ಬಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಯಾವಾಗಪ್ಪ ಚಾಲೆಂಜಿಂಗ್ ಸ್ಟಾರ್ ದರ್ಶನ್ ನ ತೆರೆಮೇಲೆ ನೋಡೋದು ಅಂತ ವೇಟ್ ಮಾಡ್ತಾ ಇದ್ದಾರೆ. ಕ್ರಾಂತಿ ಶೂಟಿಂಗ್ ಕೂಡ ಭರದಿಂದ ಸಾಗುತ್ತಿದೆ. ಕರ್ನಾಟಕ ಅಷ್ಟೇ ಅಲ್ಲದೇ ವಿದೇಶಗಳಲ್ಲೂ ಚಿತ್ರೀಕರಣ ಮಾಡೋ ಮೂಲಕ ನಿರೀಕ್ಷೆಯನ್ನ ದುಪ್ಪಟ್ಟು ಮಾಡುತ್ತಿದೆ. ಕ್ರಾಂತಿ ಸಿನಿಮಾದಲ್ಲಿ ಡಿ ಬಾಸ್ ದರ್ಶನ್ ಯಾವ ರೀತಿ ಕಮಲ್ ಮಾಡುತ್ತಾರೋ ಅನ್ನೋ ದೊಡ್ಡ ಪ್ರಶ್ನೆ ಕೂಡ ಅಭಿಮಾನಿಗಳಲ್ಲಿದೆ.
ಇದೀಗ ಸಿಕ್ಕಿರೋ ಲೇಟೆಸ್ಟ್ ಮಾಹಿತಿ ಪ್ರಕಾರ ಕೊನೆಯ ಹಂತದ ಶೂಟಿಂಗ್‌ಗಾಗಿ ವಿದೇಶಕ್ಕೆ ಹಾರಿದೆ.. ವಿ.ಹರಿಕೃಷ್ಣ ನಿರ್ದೇಶಿಸುತ್ತಿರುವ ಈ ಸಿನಿಮಾ ಟಾಕಿ ಪೋಷನ್ ಸದ್ದಿಲ್ಲದೆ ನಡೆದಿತ್ತು. ಈಗ ಇಡೀ ತಂಡ ಪೋಲ್ಯಾಂಡ್‌ಗೆ ಪಯಣ ಬೆಳೆಸಿದೆ. ದರ್ಶನ್ ಜೊತೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಿರ್ಮಾಪಕಿ ಶೈಲಜಾ ನಾಗ್ ಹಾಗೂ ಅವರ ಪುತ್ರಿ ಪ್ರೈವೆಟ್ ಜೆಟ್‌ನಲ್ಲಿ ಪಯಣ ಬೆಳೆಸಿದ್ದಾರೆ. ಕೊನೆಯ ಹಂತದ ಚಿತ್ರೀಕರಣಕ್ಕೆ ‘ಕ್ರಾಂತಿ’ ಸಿನಿಮಾ ವಿದೇಶದಲ್ಲಿ ಬೀಡು ಬಿಟ್ಟಿದೆ. ಇವರೊಂದಿಗೆ ನಿರ್ದೇಶಕ ವಿ.ಹರಿಕೃಷ್ಣ ಹಾಗೂ ತಂಡ ಪ್ರತ್ಯೇಕವಾಗಿ ಪಯಣ ಬೆಳೆಸಿದೆ ಎನ್ನಲಾಗಿದೆ.
“ನನ್ನ ಎಲ್ಲವನ್ನೂ ತೆಗೆದುಕೊಂಡ ಚಿತ್ರ”: ವಿಜಯ್ ದೇವರಕೊಂಡ
ಡಿಂಪಲ್ ಕ್ವೀನ್ ಹಾಗೂ ಚಾಲೆಂಜಿಂಗ್ ಸ್ಟಾರ್ ಜೋಡಿಯನ್ನು ತೆರೆಮೇಲೆ ನೋಡುವುದೇ ಒಂದು ಖುಷಿ. ಆದರೆ, ಕೆಲವು ವರ್ಷಗಳಿಂದ ರಚಿತಾ ರಾಮ್ ಹಾಗೂ ದರ್ಶನ್ ಒಟ್ಟಿಗೆ ನಟಿಸಿರಲಿಲ್ಲ. ‘ಕ್ರಾಂತಿ’ ಸಿನಿಮಾಗಾಗಿ ಮತ್ತೆ ಈ ಜೋಡಿ ತೆರೆಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಮತ್ತೆ ಈ ಜೋಡಿ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುವುದು ಗ್ಯಾರಂಟಿ ಎಂದು ಭವಿಷ್ಯ ನುಡಿಯಲಾಗಿದೆ. ಸಿನಿಮಾ ಸೆಟ್ಟೇರಿದಾಗ ರಚಿತಾ ರಾಮ್ ” ನಾಲ್ಕೈದು ವರ್ಷದ ಬಳಿಕ ನಾನು ದರ್ಶನ್ ಸರ್ ಅವರೊಂದಿಗೆ ನಟಿಸುತ್ತಿದ್ದೇನೆ. ಆ ಖುಷಿಯನ್ನು ಹೇಳಲು ಅಸಾಧ್ಯ. ತುಂಬಾ ಉತ್ಸಾಹದಿಂದ ಸಿನಿಮಾ ಮಾಡುತ್ತಿದ್ದೇನೆ.” ಎಂದು ರಚಿತಾ ರಾಮ್ ಹೇಳಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಎರಡು ವಿಡಿಯೋ ಹಂಚಿಕೊಂಡಿರೋ ರಚಿತಾ better late then never ಅಂತ ಎರಡು ಪೋಸ್ಟ್ಗಳನ್ನ ಶೇರ್ ಮಾಡಿದ್ದಾರೆ.
https://www.instagram.com/p/Cff2mFYqlSA/
#Kranti in #Polland 😍 pic.twitter.com/AVLdHgxtIL
— Shylaja Nag (@shylajanag) July 1, 2022