ಪುನೀತ್ ರಾಜ್ ಕುಮಾರ್ ಭದ್ರತೆಯಲ್ಲಿ ಚಲಪತಿ ಒಂಚೂರು ಕುಂದು ಉಂಟಾಗದ ರೀತಿಯಲ್ಲಿ ಅವರು ಕೆಲಸ ಮಾಡುತ್ತಿದ್ದು ಆದರೆ ಸದ್ಯ ಇದೀಗ ಪುನೀತ್ ರಾಜ್ ಕುಮಾರ್ ಅವರೇ ಇಲ್ಲ. ಹಾಗಾಗಿ ತಾನು ಯಾರಿಗೆ ರಕ್ಷಣೆ ನೀಡುವ ಎನ್ನುವ ಚಲಪತಿ ಅದೇ ಕಾರಣಕ್ಕಾಗಿ ತಮ್ಮ ಕೆಲಸವನ್ನು ತೊರೆದಿದ್ದಾರೆ ಎಂದು ಹೇಳಲಾಗಿದೆ. ಹೌದು ಪುನೀತ್ ರಾಜ್ ಕುಮಾರ್ ಅವರ ಮನೆಯೊಂದ ಹೊರಬಂದ ಬಳಿಕ ಚಲಪತಿ ಮಾತನಾಡಿದ್ದು ಪುನೀತ್ ಸರ್ ಇಲ್ಲದೆ ಏಳು ತಿಂಗಳು ಕಳೆಯಿತು. ನಿಜಕ್ಕೂ ಅವರಿಲ್ಲ ಎಂದು ನನಗೆ ಅನಿಸಿಲ್ಲ. ಹೌದು ತಮ್ಮ ಕೆಲಸವನ್ನು ಬಂದು ಮುಗಿಸಿ ಹೋಗಿದ್ದು ಅವರು ನನಗೆ ದೇವರು. ನಾನು ಅಗಲುವವರೆಗೂ ನನ್ನ ಎದೆಯಲ್ಲಿ ಅವರನ್ನು ಇಟ್ಟು ಪೂಜೆ ಮಾಡ್ತೀನಿ ಎನ್ನುತ್ತಾರೆ.
ಈ ತಿಂಗಳು ಸರಳತೆಯ ಸಾಮ್ರಾಟ ನಟ ಪುನೀತ್ ರಾಜಕುಮಾರ್ ಅಗಲಿ 8 ತಿಂಗಳು ಕಳೆಯಲಿದ್ದು ಈಗಲೂ ಸಹ ಕನ್ನಡಿಗರು ಪುನೀತ್ ರಾಜ್ ಕುಮಾರ್ ನೆನೆಸಿಕೊಂಡೇ ದಿನ ಕಳೆಯುತ್ತಿದ್ದಾರೆ. ಇದರ ನಡುವೆ ಬಹಳ ವರ್ಷಗಳಿಂದ ಪುನೀತ್ ರಾಜ್ ಕುಮಾರ್ ರವರ ಬಾಡಿಗಾರ್ಡ್ ಮತ್ತು ಗನ್ ಮ್ಯಾನ್ ಆಗಿ ಕೆಲಸ ಮಾಡಿದ್ದ ಚಲಪತಿ ತಮ್ಮ ಕೆಲಸವನ್ನು ತೊರೆದಿದ್ದು ಪುನೀತ್ ರಾಜ್ ಕುಮಾರ್ ರವರು ಇದ್ದಾಗ ಅವರೆಲ್ಲಿಯೇ ಸಾರ್ವಜನಿಕ ಸಮಾರಂಭಗಳಿಗೆ ಹೋದರೂ ಕೂಡ ಅವರೊಂದಿಗೆ ರಾಮನ ಬಂಟ ಹನುಮಂತನಂತೆ ಕಾಯುತ್ತಿದ್ದ ಚಲಪತಿ ಎನ್ನುವ ಹೆಸರು ಕನ್ನಡ ಚಿತ್ರರಂಗಕ್ಕೂ ಪರಿಚಿತ ಎನ್ನಬಹುದು.
ಸದ್ಯ ಇದೀಗ ಪುನೀತ್ ರಾಜ್ ಕುಮಾರ್ ಅವರೇ ಇಲ್ಲ. ಹಾಗಾಗಿ ತಾನು ಯಾರಿಗೆ ರಕ್ಷಣೆ ನೀಡುವ ಎನ್ನುವ ಚಲಪತಿ ಅದೇ ಕಾರಣಕ್ಕಾಗಿ ತಮ್ಮ ಕೆಲಸವನ್ನು ತೊರೆದಿದ್ದಾರೆ ಎಂದು ಹೇಳಲಾಗಿದೆ. ಹೌದು ಪುನೀತ್ ರಾಜ್ ಕುಮಾರ್ ಅವರ ಮನೆಯೊಂದ ಹೊರಬಂದ ಬಳಿಕ ಚಲಪತಿ ಮಾತನಾಡಿದ್ದು ಪುನೀತ್ ಸರ್ ಇಲ್ಲದೆ ಏಳು ತಿಂಗಳು ಕಳೆಯಿತು. ನಿಜಕ್ಕೂ ಅವರಿಲ್ಲ ಎಂದು ನನಗೆ ಅನಿಸಿಲ್ಲ. ಹೌದು ತಮ್ಮ ಕೆಲಸವನ್ನು ಬಂದು ಮುಗಿಸಿ ಹೋಗಿದ್ದು ಅವರು ನನಗೆ ದೇವರು. ನಾನು ಅಗಲುವವರೆಗೂ ನನ್ನ ಎದೆಯಲ್ಲಿ ಅವರನ್ನು ಇಟ್ಟು ಪೂಜೆ ಮಾಡ್ತೀನಿ ಎನ್ನುತ್ತಾರೆ.
ಇನ್ನು ನಾನು ಅವರ ಮನೆಯಲ್ಲಿ ಕೆಲಸ ಬಿಟ್ಟಿದ್ದೇನೆ ಅಂತಲ್ಲ. ದಿನಾ ಮನೆಗೆ ಬಂದು ಕೂತು ಹೋಗೋದಿಕ್ಕೆ ಬೇಜಾರಾಗ್ತಿದೆ ಎಂದು ಅಶ್ವಿನಿ ಮೇಡಂ ಅವರ ಬಳಿ ಹೇಳಿದ್ದೆ. ಅದಕ್ಕೆ ಅವರು ಸರಿ ನಿಮ್ಮ ಕೆಲಸ ಇದ್ರೆ ಮಾಡಿಕೊಳ್ಳಿ ಏನಾದರೂ ಅಗತ್ಯವಿದ್ದಾಗ ಹೇಳಿ ಕಳಿಸುತ್ತೇನೆ ಆಗ ಬನ್ನು ಅಂದರು ಅವರು ಕರೆದಾಗ ಹೋಗಿ ಕೆಲಸ ಮಾಡುತ್ತೇನೆ. ನಮ್ಮ ಯಜಮಾನ್ರು ಅಪ್ಪು ಸರ್‌ಗೆ ಸುಳ್ಳು ಹೇಳಬಾರದು. ಹೌದು ನಾನು ಹಾಗೆ ನಿಯತ್ತಾಗಿ ಇದ್ದೆ. ಅಪ್ಪು ಸರ್ ಮನೆಯಿಂದ ನಿಯತ್ತಾಗಿ ಕೆಲಸ ಮಾಡಿ ಬಂದಿದ್ದೇನೆ. ಅಪ್ಪು ಸರ್ ಯಿಂದ ನಾನು ಕಲಿತಿದ್ದು ಎಲ್ಲರ ಜೊತೆ ಖುಷಿ ಆಗಿರಬೇಕು ಎಲ್ಲರಿಗೂ ಒಳ್ಳೆದು ಮಾಡಬೇಕು ಅಂತ.
ಅವರ ಜೊತೆ ನಾವು ಇದ್ದಿದ್ದು ಅಂದ ಮೇಲೆ ನಾನು ಹಾಗೇ ಇರುತ್ತೇನೆ. ಅಪ್ಪು ಸರ್ ಹೆಸರು ಹಾಳಾಗದ ಹಾಗೆ ನಡೆದುಕೊಳ್ಳುತ್ತೇನೆ ಎಂದು ಚಲಪತಿ ಹೇಳಿದ್ದಾರೆ. ಇನ್ನು ಅಪ್ಪು ಸರ್ ಇಲ್ಲದೆ ಅವರ ಮನೆಗೆ ಹೋಗಿ ಬರುತ್ತಿದ್ದೆ. ಕಳೆದ ಆರು ತಿಂಗಳಿನಿಂದ ಹಾಗೇ ದಿನ ದೂಡಿದ್ದು ಅವರ ಮಕ್ಕಳ ಹೊಟ್ಟೆಯಲ್ಲೇ ಅಪ್ಪು ಸರ್ ಮತ್ತೆ ಹುಟ್ಟಿ ಬರ್ತಾರೆ. ಹೌದು ಅಪ್ಪು ಸರ್ ಬಗ್ಗೆ ಯೋಚನೆ ಮಾಡಿನೇ ನಾನು ಸೊರಗಿ ಹೋಗಿದ್ದು ಅಪ್ಪು ಸರ್ ನ ಮನಸ್ಸಲ್ಲೇ ಇಟ್ಡುಕೊಂಡು ದಿನ ಕಳೆಯುತ್ತಿದ್ದೇನೆ ಎನ್ನುತ್ತಾರೆ.
ಈಗ ಬಳ್ಳಾರಿಯ ಮಹಾಂತೇಶ್ ಅನ್ನೋರು ನನ್ನ ಜೊತೆ ಇರು ಎಂದಿದ್ದಾರೆ. ಹೌದು ಅವರು ಅಪ್ಪು ಸರ್ ಅವರ ದೊಡ್ಡ ಅಭಿಮಾನಿ ಆಗಿದ್ದು ಅವರು ಕೆಲಸಕ್ಕೆ ಅಂತ ಕರೆದಿಲ್ಲ. ನೀವು ಅಪ್ಪು ಬಾಸ್ ಜೊತೆ ಇದ್ದವರು ನಮ್ಮ ಜೊತೆ ಇದ್ದು ನಾಲ್ಕು ಜನಕ್ಕೆ ಒಳ್ಳೆ ಕೆಲಸ ಮಾಡಿಕೊಂಡಿರೋಣ ಅಂದಿದ್ದಾರೆ. ಹಾಗಾಗಿ ಅವರೊಂದಿಗೆ ಇದ್ದೇನೆ ಎಂದು ಚಲಪತಿ ಹೇಳಿದ್ದಾರೆ. ಸದ್ಯ ನಾನು ಅಪ್ಪು ಅಭಿಮಾನಿಯೇ ಮನೆಯೊಂದರಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ತಿಳಿಸಿದರು.