ಬಣ್ಣದ ಲೋಕದಲ್ಲಿ ದಿನ ಕಳೆದಂತೆ ಹೊಸ ಹೊಸ ನಾಯಕಿಯರ ಪರಿಚಯವಾಗ್ತಿದೆ. ಆದ್ರೆ ಪ್ರತಿಭೆಯ ಜೊತೆಗೆ ಅದೃಷ್ಟ ಇದ್ದವರು ಮಾತ್ರ ಇಲ್ಲಿ ಗಟ್ಟಿಯಾಗಿ ನೆಲೆಯೂರ್ತಾರೆ. ಈ ಸಾಲಿನಲ್ಲಿ ಪ್ರತಿಭಾನ್ವಿತ ನಟಿ ಚೈತ್ರಾ ಆಚಾರ್ ಕೂಡ ಒಬ್ಬರು. ಸ್ಯಾಂಡಲ್‌ವುಡ್‌ನಲ್ಲಿ ಕನ್ನಡದ ನಟಿಯರು ಕಡಿಮೆ ಎನ್ನುವ ಹೊತ್ತಿನಲ್ಲಿ ‘ಗಿಲ್ಕಿ’ ಸಿನಿಮಾದ ನಾಯಕಿ ಚೈತ್ರಾ ಆಚಾರ್ ತಮ್ಮ ಅದ್ಭುತ ನಟನೆಯಿಂದ ಎಲ್ಲರ ಮನಗೆದ್ದರು. ಈಗ ಅವರು ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.ಈ ಬ್ಯೂಟಿಯ ಹೊಸ ಫೋಟೋಶೂಟ್ನ ಚಿತ್ರಗಳು ಇಲ್ಲಿವೆ.