Sandalwood Leading OnlineMedia

ಸೆಲೆಬ್ರೆಟಿ ಸ್ಟೈಲಿಸ್ಟ್ ಭಾರ್ಗವಿ ವಿಖ್ಯಾತಿ ಹೊಸ ಸಾಹಸ – ವಿಖ್ಯಾತಿ ಸ್ಕೂಲ್ ಆಫ್ ಫ್ಯಾಶನ್ ಅಂಡ್ ಡಿಸೈನ್ ಅಕಾಡೆಮಿ ಓಪನ್

ಇತ್ತೀಚೆಗೆ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಗಳತ್ತ ಮುಖ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಪ್ಯಾಶನ್ ಡಿಸೈನರ್ ಗಳಿಗೆ ಸೃಷ್ಟಿಯಾಗಿರುವ ಅಪಾರ ಬೇಡಿಕೆಯೂ ಇದಕ್ಕೆ ಕಾರಣ. ಜೊತೆಗೆ ಬಹು ಬೇಗ ಆಕರ್ಷಿಸುವ ಉದ್ಯಮವೂ ಹೌದು. ಚಿತ್ರರಂಗದಲ್ಲೂ ಇವರಿಗೆ ಬೇಡಿಕೆ ಹೆಚ್ಚಿದೆ. ಅದರಲ್ಲೂ ಯೂನಿಕ್ ಸ್ಟೈಲ್ ಮೂಲಕ ಸೆಲೆಬ್ರೆಟಿಗಳ ಮನಗೆದ್ದರಂತೂ ಸೆಲೆಬ್ರೆಟಿ ಸ್ಟೇಟಸ್ ಕೂಡ ದೊರೆಯುತ್ತೆ. ಆದ್ರೆ ಇದರಲ್ಲಿ ಪರಿಣತಿ ಹೊಂದಬೇಕು ಎಂದರೆ ಉತ್ತಮ ಮಾರ್ಗದರ್ಶನ, ಕಲಿಕೆಗೆ ಒಂದೊಳ್ಳೆ ಅಕಾಡೆಮಿ ಬೇಕು. ಇಂತಹ ಆಸಕ್ತರಿಗಾಗಿಯೇ ಬೆಂಗಳೂರಿನಲ್ಲಿ ‘ವಿಖ್ಯಾತಿ ಸ್ಕೂಲ್ ಆಫ್ ಫ್ಯಾಶನ್ ಅಂಡ್ ಡಿಸೈನ್’ ಅಕಾಡೆಮಿ ತೆರೆಯಲಾಗಿದೆ.
 
  
ಈ ಅಕಾಡೆಮಿಯ ಸೂತ್ರಧಾರಿ ಭಾರ್ಗವಿ ವಿಖ್ಯಾತಿ. ಕಳೆದ ಆರೇಳು ವರ್ಷಗಳಿಂದ ಫ್ಯಾಶನ್ ಡಿಸೈನರ್ ಆಗಿ, ಸೆಲೆಬ್ರೆಟಿ ಸ್ಟೈಲಿಸ್ಟ್ ಆಗಿ ಚಿತ್ರರಂಗ ಹಾಗೂ ಫ್ಯಾಶನ್ ಇಂಡಸ್ಟ್ರಿಯಲ್ಲಿ ಖ್ಯಾತಿ ಗಳಿಸಿದ್ದಾರೆ. ನಟಿ ಶ್ರೀಲೀಲಾ, ನಿಶ್ವಿಕಾ ನಾಯ್ಡು, ದೀಪಿಕಾ ದಾಸ್, ಹರ್ಷಿಕ ಪೂಣಚ್ಚ, ಆರ್ಯನ್ ಸಂತೋಷ್, ಶಾನ್ವಿ ಶ್ರೀವಾಸ್ತವ್, ಸಂಜನಾ ಆನಂದ್ ಸೇರಿದಂತೆ ಹಲವು ತಾರೆಯರಿಗೆ ಸೆಲೆಬ್ರೆಟಿ ಸ್ಟೈಲಿಸ್ಟ್ ಆಗಿ ದುಡಿದ ಖ್ಯಾತಿ ಇವರದ್ದು. ಕೆಲವು ತಾರೆಯರಿಗೆ ಪರ್ಸನಲ್ ಸ್ಟೈಲಿಸ್ಟ್ ಆಗಿಯೂ ಕೆಲಸ ಮಾಡಿದ್ದಾರೆ.
 
 
‘ಬೈ ಟು ಲವ್’, ‘ಡಿಯರ್ ಸತ್ಯ’ ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ತಮ್ಮ ಹಲವು ವರ್ಷಗಳ ಕನಸಿನಂತೆ ಫ್ಯಾಶನ್ ಡಿಸೈನ್ ಅಕಾಡೆಮಿ ತೆರೆದಿದ್ದಾರೆ. ಈ ಮೂಲಕ ಇನ್ನಷ್ಟು ಪ್ರತಿಭೆಗಳನ್ನು ಹೊರತರುವ ಸಾಹಸಕ್ಕೆ ಕೈ ಹಾಕಿದ್ದಾರೆ. ‘ವಿಖ್ಯಾತಿ ಸ್ಕೂಲ್ ಆಫ್ ಫ್ಯಾಶನ್ ಅಂಡ್ ಡಿಸೈನ್ ಅಕಾಡೆಮಿ’ಯಲ್ಲಿ ಫ್ಯಾಶನ್ ಡಿಸೈನಿಂಗ್, ಸೆಲೆಬ್ರೆಟಿ ಸ್ಟೈಲಿಂಗ್, ಮೇಕಪ್ ಕೋರ್ಸ್, ನೈಲ್ ಆರ್ಟ್ ಜೊತೆಗೆ ಫೋಟೋಗ್ರಫಿ ಬಗ್ಗೆಯೂ ತರಭೇತಿ ನೀಡಲಾಗುವುದು. ಬೆಂಗಳೂರಿನ ವಸಂತ ನಗರದಲ್ಲಿ ಈ ಅಕಾಡೆಮಿ ತೆರೆಯಲಾಗಿದ್ದು ಆಸಕ್ತರು ಸಂಪರ್ಕಿಸಬಹುದು.
 

Share this post:

Translate »