ಇಂದು ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ಹಿಂದೂಗಳ ಕಾಯುತ್ತಿದ್ದಂತ ಗಳಿಗೆ ಬಂದೇ ಬಿಟ್ಟಿದೆ. ಬಾಲರಾಮನಿಗೆ ಪ್ರಾಣ ಪ್ರತಿಷ್ಠಾಪನೆಯಾಗಲೂ ಕ್ಷಣಗಣನೆ ಶುರುವಾಗಿದೆ. ಇಡೀ ಅಯೋಧ್ಯೆ ಮಧುವಣಗಿತ್ತಿಯಂತೆ ಅಲಂಕಾರಗೊಂಡಿದೆ. ದೇಶದೆಲ್ಲೆಡೆ ರಾಮನ ಜಪ ಶುರುವಾಗಿದೆ. ರಾಮನ ನೆಲದಲ್ಲಿ ತಾರೆಗಳ ಕಲರವವೂ ಜೋರಾಗಿದೆ.
ಇದನ್ನೂ ಓದಿ ‘ಅಪ್ಪಾ ಐ ಲವ್ ಯೂ’ ಎಂದ ನೆನಪಿರಲಿ ಪ್ರೇಮ್…ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆ ಮಾಡಿದ ಆಕ್ಷನ್ ಪ್ರಿನ್ಸ್..
ಮಧ್ಯಾಹ್ನ 12.20ರ ಶುಭ ಮುಹೂರ್ತದಲ್ಲಿ ರಾಮಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆಯಾಗಲಿದೆ. ಈ ಅಪರೂಪದ ಸುಂದರ ಕ್ಷಣಕ್ಕೆ ನಮ್ಮ ತಾರಾ ಬಳಗವೂ ಸಾಕ್ಷಿಯಾಗಲಿದೆ. ಈಗಾಗಲೇ ಆಹ್ವಾನ ಸ್ವೀಕರಿಸಿದ ತಾರೆಯರು ಅಯೋಧ್ಯೆಗೆ ತಲುಪಿದ್ದಾರೆ.
ಇದನ್ನೂ ಓದಿ ಜನಪ್ರಿಯ ಶಾಸಕ ಪ್ರದೀಪ್ ಈಶ್ವರ್ ಅವರಿಂದ ಬಿಡುಗಡೆಯಾಯಿತು “ಜಸ್ಟ್ ಪಾಸ್” ಚಿತ್ರದ ಹಾಡು
ಕನ್ನಡದ ನಟ ರಿಷಭ್ ಶೆಟ್ಟಿ ಪತ್ನಿ ಜೊತೆಗೆ ಅಯೋಧ್ಯೆ ರೀಚ್ ಆಗಿದ್ದಾರೆ. ಅಮಿತಾಬ್ ಬಚ್ಚನ್, ಕಂಗನಾ, ರಜನೀಕಾಂತ್, ಧನುಶ್, ರಣದೀಪ್ ಹೂಡಾ ದಂಪತಿ, ಅನುಪಮ್ ಖೇರ್, ದೇವೇಗೌಡರ ಕುಟುಂಬ ಸೇರಿದಂತೆ ಹಲವರು ಅಯೋಧ್ಯೆಯಲ್ಲಿ ರಾಮನ ಭಕ್ತಿಗೆ ಪಾತ್ರರಾಗಲು ಹಾಜರಾಗಿದ್ದಾರೆ.