Sandalwood Leading OnlineMedia

ನಿರೀಕ್ಷೆ ಹುಟ್ಟಿಸಿದ ಕ್ಯಾಂಪಸ್‌ಕ್ರಾಂತಿ ಟ್ರೈಲರ್

 

     ಈಹಿಂದೆ ಸ್ಟೂಡೆಂಟ್ಸ್ ಹಾಗೂ ಬಿಂದಾಸ್‌ ಗೂಗ್ಲಿ ಚಿತ್ರಗಳನ್ನು ನಿರ್ದೇಶಿಸಿದ್ದ ಸಂತೋಷ್‌ಕುಮಾರ್ ಅವರ  ಮತ್ತೊಂದು ಚಿತ್ರ ಕ್ಯಾಂಪಸ್ ಕ್ರಾಂತಿ. ಇದೇ ತಿಂಗಳ ೨೪ರಂದು ತೆರೆಕಾಣುತ್ತಿರುವ  ಈ ಚಿತ್ರದ ಟ್ರೈಲರ್ ಬಿಡುಗಡೆ ಹಾಗೂ ೨ ಹಾಡುಗಳ ಪ್ರದರ್ಶನ ಇತ್ತೀಚೆಗೆ ನಡೆಯಿತು. ಕಾಲೇಜ್ ಹುಡುಗರ ನಡುವೆ ನಡೆಯುವ  ಕಥೆಯಿದಾಗಿದ್ದು, ಈ ಚಿತ್ರದಲ್ಲಿ  ಆರ್ಯ ಹಾಗೂ ಆರತಿ ಮತ್ತಯ ಅಲಂಕಾರ್ ಹಾಗೂ ಇಶಾನಾ  ನಾಯಕ, ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ಸಿನಿರಸಿಕರಿಗೆ ಮನೋರಂಜನೆಯ “ಫುಲ್ ಮೀಲ್ಸ್” ನೀಡಲಿದ್ದಾರೆ ಲಿಖಿತ್ ಶೆಟ್ಟಿ

 

      ಹಿರಿಯ ನಿರ್ಮಾಪಕ ಎಸ್.ಏ. ಚಿನ್ನೇಗೌಡ್ರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತ ಸಂತೋಷ್ ನನ್ನ ಸ್ವಂತ ತಂಗಿ ಮಗ. ಚಿತ್ರದ ಟ್ರೈಲರ್ ನೋಡಿದ್ದೇನೆ, ಹೊಸ ಕಲಾವಿದರು ತುಂಬಾ  ಚನ್ನಾಗೇ ಆಕ್ಟ್ ಮಾಡಿದ್ದಾರೆ. ಒಳ್ಳೇದಾಗಲಿ ಎಂದು ತಂಡಕ್ಕೆ ಶುಭ ಕೋರಿದರು. ನಂತರ ಹಿರಿಯ ನಟ ಕೀರ್ತಿರಾಜ್ ಮಾತನಾಡುತ್ತ,ಇವರೆಲ್ಕರೂ ತುಂಬಾ ಶ್ರದ್ಧೆಯಿಂದ ಸಿನಿಮಾ ಮಾಡಿದ್ದಾರೆ. ಚಿತ್ರದಲ್ಲಿ ನಾನೊಬ್ಬ ರಿಚ್ ಬ್ಯುಸಿನೆಸ್ ಮ್ಯಾನ್ ಆಗಿದ್ದೇನೆ. ಇಬ್ಬರೂ ನಾಯಕರ ತಂದೆ, ವಾಣಿಶ್ರೀ  ತಾಯಿಯಾಗಿ ಅಭಿನಯಿಸಿದ್ದಾರೆ ಎಂದು ಹೇಳಿದರು.

ಫೆಬ್ರವರಿ 17 ರಂದು ಅದ್ದೂರಿಯಾಗಿ ನಡೆಯಲಿದೆ “ಸಿರಿ ಲಂಬೋದರ ವಿವಾಹ” (ಎಸ್ ಎಲ್ ವಿ)

 ನಿರ್ದೇಶಕ ಸಂತೋಷ್‌ಕುಮಾರ್ ಮಾತನಾಡುತ್ತ ನಾನೇನೇ ಕಲಿತಿದ್ದರೂ ಅದಕ್ಕೆ ನಮ್ಮ ಮಾವಂದಿರೇ ಕಾರಣ.  ಕಾಲೇಜ್ ಹುಡುಗರೆಲ್ಲ ಸೇರಿ ಮಾಡುವ ಕ್ರಾಂತಿಯ ಕಥೆ ಇದಾಗಿದ್ದು,  ಕರ್ನಾಟಕ, ಮಹಾರಾಷ್ಟ್ರ ಗಡಿಯ ಅಗ್ನಿರಾಂಪುರ ಎಂಬ ಕಾಲ್ಪನಿಕ ಊರೊಂದರಲ್ಲಿ  ನಡೆಯುವ ಕಥೆ. ೧೯೪೭ರಲ್ಲಿ ನಮಗೆಲ್ಲ ಸ್ವಾತಂತ್ರ್ಯ ಬಂತು. ಆಗ ಶಾಂತಿಯಿಂದಲೇ ಹೋರಾಡಿ ಗೆದ್ದಿದ್ದೇವೆ‌. ಎಲ್ಲರ ಮನಸನ್ನು ಗೆದ್ದು ಕ್ರಾಂತಿ ಮಾಡಬೇಕು. ಗಡಿ ಭಾಗದಲ್ಲಿ ಲೋಕಲ್ ಕ್ರೈಮ್, ರೌಡಿಸಂ ಹೇಗಿರುತ್ತೆ, ಅದು ಹುಡುಗರ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಇದನ್ನೆಲ್ಲ ಆ ಹುಡುಗರು ಹೇಗೆ ತಡೆಯುತ್ತಾರೆ, ೨೧ ವರ್ಷದಿಂದಲೂ ಆ ಊರಲ್ಲಿ ಕನ್ನಡ ರಾಜ್ಯೋತ್ಸವ ನಿಂತು ಹೋಗಿರುತ್ತೆ, ಈ ಹುಡುಗರೆಲ್ಲ ಸೇರಿ ಅಲ್ಲಿ ಮತ್ತೆ ರಾಜ್ಯೋತ್ಸವ ಆಚರಿಸುತ್ತಾರೆ. ಎಂಟರ್ಟೈನ್ಮೆಂಟ್ ಜೊತೆಗೆ ಕನ್ನಡ ಭಾಷೆ, ಸಂಸ್ಕ್ರತಿ, ಕನ್ನಡತನವನ್ನು ಬೆಳೆಸಬೇಕು, ವಿದ್ಯಾರ್ಥಿಗಳು ಜವಾಬ್ದಾರಿ ತೆಗೆದುಕೊಂಡರೆ ಏನು ಬೇಕಾದರೂ ಮಾಡಬಹುದು ಅಲ್ಲದೆ ಗಡಿಸಮಸ್ಯೆ ವಿದ್ಯಾರ್ಥಿಗಳ ಮೇಲೆ ಯಾವರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಿದ್ದೇನೆ. ನನ್ನ ಹಿಂದಿನಿಂದಲೂ ಯೂಥ್ ಒರಿಯಂಟೆಡ್ ಕಥೆಗಳನ್ನೇ ಮಾಡಿಕೊಂಡು ಬಂದಿದ್ದೇನೆ. ಚಿತ್ರದಲ್ಲಿ ಕಾಮಿಡಿ, ಥ್ರಿಲ್ಲರ್, ಆಕ್ಷನ್ ಎಲ್ಲವನ್ನೂ ಕಲರ್ ಫುಲ್ ಆಗಿ ತೋರಿಸಿದ್ದೇವೆ   ಚಿತ್ರದ ಪ್ರೊಮೋಷನ್ ಗೆ ಕಂಪನಿಯೊಂದು ಕೈಜೋಡಿಸಿದೆ ಎಂದು ಹೇಳಿದರು. ನಟ ಆರ್ಯ‌ ಮಾತನಾಡಿ ನಾನು ಮೈಸೂರಿನವನು, ಪಿಹೆಚ್ ಡಿ ಮಾಡುತ್ತಲೇ ಬರವಣಿಗೆ ಆರಂಭಿಸಿದೆ. ಸ್ಕ್ರಿಪ್ಟ್ ಹಂತದಿಂದಲೂ ನಾನು ಜೊತೆಗಿದ್ದೇನೆ. ಎಂದು ಹೇಳಿದರು.

ʻಅಥಿʼ ಆರಂಭ : ರೆಡ್‌ ಅಂಡ್‌ ವೈಟ್‌ ಸೆವೆನ್‌ ರಾಜ್‌ ನಿರ್ಮಾಣದಲ್ಲಿ ಮತ್ತೊಂದು ಚಿತ್ರ

     ನಟಿ ಆರತಿ ಕನಸು ಎಂಬ ಕಾಲೇಜು ಸ್ಟೂಡೆಂಟ್ ಆಗಿ ನಟಿಸಿದ್ದಾರೆ.   ಇಶಾನಾ  ಪಾತ್ರದ ಹೆಸರು ಲಕ್ಷ್ಮಿ. ೪ ಶೇಡ್ ಇದೆ.  ನಾಯಕ ಅಲಂಕಾರ್ ಒಬ್ಬ ಶ್ರೀಮಂತ ಮನೆತನದ ಯುವಕ ಆದಿಯಾಗಿ ನಟಿಸಿದ್ದಾರೆ. ನಂದಗೋಪಾಲ್  ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿ.ಮನೋಹರ್ ಅವರು ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದು ಸಂಗೀತ ನಿರ್ದೇಶನ ಮಾಡಿದ್ದಾರೆ. ಪಿಕೆಹೆಚ್ ದಾಸ್ ಅವರ ಕ್ಯಾಮೆರಾವರ್ಕ್ ಈ ಚಿತ್ರಕ್ಕಿದೆ. ಇನ್ನು  ಚಿತ್ರದಲ್ಲಿ ೫ ಸಾಹಸ ದೃಷ್ಯಗಳಿದ್ದು, ಕುಂಗ್ ಫು ಚಂದ್ರು ಸಾಹಸ ಸಂಯೋಜನೆ  ಮಾಡಿದ್ದಾರೆ. ಫ್ಯಾಷನ್ ಮೂವೀಮೇರ‍್ಸ್ ಮೂಲಕ ನಿರ್ದೇಶಕ ಸಂತೋಷ್‌ಕುಮಾರ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ, ಹನುಮಂತೇಗೌಡ್ರು,  ಭವಾನಿ ಪ್ರಕಾಶ್, ಧನಂಜಯ್ ಇತರೆ ಪಾತ್ರಗಳಲ್ಲಿದ್ದಾರೆ.

 

Share this post:

Translate »