ಕ್ಯಾಮರಾ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರ ಚಾಂದಿನಿಬಾರ್. ಮೈಸೂರು ಮೂಲದ ರಾಘವೇಂದ್ರ ಮತ್ತು ಗೆಳೆಯರೆಲ್ಲ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ, ರಾಘವೇಂದ್ರ ಅವರೇ ಚಿತ್ರದ ನಿರ್ದೇಶನ ಮಾಡುವ ಜೊತೆಗೆ ನಾಯಕನಾಗೂ ಅಭಿನಯಿಸಿದ್ದಾರೆ. ಬಾರ್ ನಲ್ಲಿ ಜೀವನ ಕಟ್ಟಿಕೊಂಡವರ ಕಥೆಯಿದು. ಇದೇ ತಿಂಗಳ ೨೧ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಿದ್ದವಾಗಿರುವ ಈ ಚಿತ್ರದ ಆಡಿಯೋ ಹಾಗೂ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ ಈ ಸಿನಿಮಾ ಮಾಡಬೇಕೆಂದು ಹೊರಟಾಗ ತುಂಬಾ ತೊಂದರೆಗಳಾದದ್ದು ಸಹಜ. ಆಗ ನಮಗೆ ಕೆಂಪರಾಜ್ ಅವರು ಬೆನ್ನೆಲುಬಾಗಿ ನಿಂತರು. ಪ್ರತಿ ಹಂತದಲ್ಲೂ ನಮ್ಮ ಜೊತೆ ನಿಂತಿದ್ದರು. ಇನ್ನು ಚಿತ್ರದಲ್ಲಿ ಬರುವ ಎಲ್ಲ ಪಾತ್ರಗಳೂ ಲೈವ್ ಕ್ಯಾರೆಕ್ಟರ್ ಗಳೇ. ಟೈಟಲ್ ಇಟ್ಟಾಗಲೇ ನೆಗೆಟಿವ್ ಶುರುವಾಗಬಹುದು ಅನಿಸಿತ್ತು. ಇದನ್ನು ಬಸ್ಟಾಂಡ್ ಥರ ಉಪಯೋಗಿಸಿಕೊಂಡಿದ್ದೇವೆ. ಇಲ್ಲಿ ಜೀವನ, ಪ್ರೀತಿ, ಪ್ರೇಮ,ತ್ಯಾಗ, ನಗು, ಅಳು ಎಕ್ಕವೂ ಇದೆ. ಹತಾಶ ಭಾವನೆಯಿಂದ ಜೀವನ ಕಟ್ಟಿಕೊಳ್ಳಲು ಹೊರಟ ಹುಡುಗ ಏನಾಗುತ್ತಾನೆ, ಆತನ ಜೀವನ ಯಾವ ಹಾದಿ ಪಡೆದುಕೊಳ್ಳುತ್ತದೆ ಎಂದು ಚಿತ್ರದಲ್ಲಿ ಹೇಳಿದ್ದೇವೆ. ನಮ್ಮ ಕಥೆಯಲ್ಲಿ ಬರುವ ಐವತ್ತಕ್ಕೂ ಹೆಚ್ಚು ಪಾತ್ರಗಳ ಜರ್ನಿ ಏನಾಗುತ್ತದೆ, ಸಿದ್ದು, ನಂದ, ಸುಮ, ಸುಚಿಯಂಥ ಹತ್ತಕ್ಕೂ ಹೆಚ್ಚು ಪಾತ್ರಗಳ ಜರ್ನಿ ಇಲ್ಲಿ ಪ್ರಮುಖವಾಗಿ ಕಂಡುಬರುತ್ತದೆ. ಕಮರ್ಷಿಯಲ್ ಎಂಟರ್ ಟೈನ್ ಮೆಂಟ್ ಸಿನಿಮಾ ಇದಾಗಿದೆ.
`Shivaji Surathkal-2’ Review: ನೀ `ಮಾಯಾವಿ’ಯೊಳಗೋ.. `ಮಾಯಾವಿ’ ನಿನ್ನೋಳಗೋ!
ತಮ್ಮ ಜೀವನದಲ್ಲಿ ಖುಷಿಯಾದಾಗ, ದುಃಖ ಆಗಾಗ ಅದನ್ನು ವ್ಯಕ್ತಪಡಿಸಲು ಬಾರಿಗೆ ಬರುತ್ತಾರೆ ಎನ್ನುವುದಷ್ಟೇ ನಮಗೆ ಗೊತ್ತು. ಆದರೆ ಅಲ್ಲಿಯೇ ತಮ್ಮ ಜೀವನ ರೂಪಿಸಿಕೊಂಡ ಒಂದಷ್ಟು ಜನರ ಕಥೆಯಿದು. ಬಾರ್‌ನಲ್ಲಿ ಕೆಲಸ ಮಾಡುತ್ತ ತಮ್ಮ ಬದುಕನ್ನು ಕಟ್ಟಿಕೊಂಡವರ ಹಿಂದಿರುವ ಕಥೆಯನ್ನು ಚಾಂದಿನಿಬಾರ್ ಮೂಲಕ ಹೇಳಹೊರಟಿದ್ದೇವೆ. ಬರಗೂರು ರಾಮಚಂದ್ರಪ್ಪ, ಮಂಜು ಸ್ವರಾಜ್ ಬಳಿ ನಿರ್ದೇಶನದ ಪಾಠ ಕಲಿತು ಮೊದಲಬಾರಿಗೆ ಈ ಚಿತ್ರ ನಿರ್ದೇಶಿಸಿದ್ದೇನೆ. ನಾನು ಕೂಡ ಬಾರ್ ನಲ್ಲಿ ಕೆಲಸ ಮಾಡಿದ್ದೇನೆ. ಆಗ ಅಲ್ಲಿ ನೋಡಿ, ಕೇಳಿದಂತ ಒಂದಷ್ಟು ವಿಷಯಗಳನ್ನು ಈ ಚಿತ್ರದ ಪಾತ್ರಗಳಾಗಿಸಿದ್ದೇನೆ. ಶುಕ್ರ ಫಿಲಂಸ್ ಸೋಮಣ್ಣ ಅವರು ರಿಲೀಸ್ ಮಾಡಿಕೊಡುತ್ತಿದ್ದಾರೆ ಎಂದರು. ನಾಯಕಿ ಸುಕೃತಿ ಮಾತನಾಡಿ ಚಿತ್ರದಲ್ಲಿ ಒಂದೊಳ್ಳೆ ಕಂಟೆಂಟ್ ಇದ್ದು, ಕಾಮನ್ ಜನರಿಗೆ ಕನೆಕ್ಟ್ ಆಗುತ್ತದೆ ಸುಮ ಎಂಬ ಮಿಡಲ್ ಕ್ಲಾಸ್ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ರಂಗಭೂಮಿಯಲ್ಲಿ ಕೆಲಸ ಮಾಡಿದ ಅನುಭವವಿದೆ ಎಂದರು. ಮತ್ತೊಬ್ಬ ನಾಯಕಿ ರಶ್ಮಿ ಮಾತನಾಡಿ ನಾನು ಕೂಡ ರಂಗಭೂಮಿಯಿಂದ ಬಂದವಳು. ಸುಮ ಎಂಬ ಕಾಲ್ ಗರ್ಲ್ ಪಾತ್ರ. ಈ ಪಾತ್ರದ ಬಗ್ಗೆ ನಿರ್ದೇಶಕರು ಹೇಳಿದಾಗ ಸ್ವಲ್ಪ ಯೋಚಿಸಿದೆ.ಆಕೆ ಬಾರಿಗೆ ಬಂದು ಹೇಗೆ ಚೇಂಜ್ ಆಗ್ತಾಳೆ ಅನ್ನೋದು ಚಿತ್ರದಲ್ಲಿದೆ ಎಂದು ಹೇಳಿದರು. ಸಂಕಲನಕಾರ ಕೆಂಪರಾಜ್ ಅವರೂ ಚಿತ್ರದ ಬಗ್ಗೆ ಮಾತನಾಡಿದರು.
’ರಾಘು’ : solo ಪಾತ್ರದ ಮೂಲಕ ಗೆಲ್ಲೋ ಭರವಸೆಕೊಟ್ಟ ಚಿನ್ನಾರಿಮುತ್ತ
ಈಗಾಗಲೇ ಚಿತ್ರದ ಟೀಸರ್ ಹಾಗೂ ೩ ಹಾಡುಗಳು ಬಿಡುಗಡೆಯಾಗಿದ್ದು, ಈಗ ಟ್ರೈಲರ್ ಕೂಡ ಗಮನ ಸೆಳೆದಿದೆ. ಬಾರ್‌ನಲ್ಲಿ ಕೆಲಸ ಮಾಡೋ ಹುಡುಗನಲ್ಲಿ ಪ್ರೀತಿ ಹೇಗೆ ಹುಟ್ಟುತ್ತೆ, ಹೇಗೆ ಬ್ರೇಕಪ್ ಆಗುತ್ತೆ, ನಂತರ ಆತನ ಜೀವನ ಹೇಗೆ ಸಾಗುತ್ತೆ ಎಂಬುದನ್ನು ಒಂದಷ್ಟು ತಿರುವುಗಳ ಮೂಲಕ ಚಿತ್ರದಲ್ಲಿ ಹೇಳಲಾಗಿದೆ. ಮೈಸೂರು ಸುತ್ತಮುತ್ತ ೪೩ ದಿನಗಳ ಕಾಲ ಈ ಚಿತ್ರಕ್ಕೆ ಬಾರ್ ಸೆಟ್ ಹಾಕಿ ಶೂಟಿಂಗ್ ನಡೆಸಲಾಗಿದೆ. ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ಆಗಿದ್ದು ಯು/ಎ ಸರ್ಟಿಫಿಕೇಟ್ ಸಿಕ್ಕಿದೆ, ಇನ್ನು ಚಿತ್ರದಲ್ಲಿ ಒಟ್ಟು ೫ ಹಾಡುಗಳಿದ್ದು, ಅದರಲ್ಲಿ ೨ ಡ್ಯುಯೆಟ್ ಹಾಡು, ಒಂದು ಟೈಟಲ್ ಸಾಂಗ್, ಎಣ್ಣೆ ಸಾಂಗ್ ಹಾಗೂ ಪ್ಯಾಥೋ ಸಾಂಗ್ ಕೂಡ ಇದೆ. ವಿಶಾಖ ನಾಗಲಾಪುರ ಹಾಗೂ ಕಾರ್ತೀಕ್ ನಾಗಲಾಪುರ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಭರತ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.