ಗಟ್ಟಿಮೇಳ ರಕ್ಷ್ ಗೆ ಬಹದ್ದೂರ್ ಡೈರೆಕ್ಟರ್ ಚೇತನ್ ಆಕ್ಷನ್ ಕಟ್….ವರಮಹಾಲಕ್ಷ್ಮಿ ಹಬ್ಬ ಬರ್ಮ ಸಿನಿಮಾ ಅನೌನ್ಸ್ ಬಹದ್ದೂರ್, ಭರ್ಜರಿ, ಭರಾಟೆ ಹಾಗೂ ಜೇಮ್ಸ್ ಸಿನಿಮಾಗಳ ಸಾರಥಿ ಚೇತನ್ ಕುಮಾರ್ ಹೊಸ ಸಿನಿಮಾ ಇಂದು ಘೋಷಣೆಯಾಗಿದೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಚಿತ್ರತಂಡ ಶೀರ್ಷಿಕೆ ರಿವೀಲ್ ಮಾಡಿದೆ. ಬರ್ಮ ಎಂಬ ವಿಭಿನ್ನ ಬಗೆಯ ಟೈಟಲ್ ಇರುವ ಸಿನಿಮಾಗೆ ಗಟ್ಟಿಮೇಳ ಧಾರಾವಾಹಿಯ ರಕ್ಷ್ ರಾಮ್ ನಾಯಕ. ಅಂದಹಾಗೇ ಸಂಸ್ಕೃತದಲ್ಲಿ ಬರ್ಮ ಅಂದರೆ ಬ್ರಹ್ಮ ವಾಸಿಸುವ ಜಾಗ ಎಂದರ್ಥ.
ಇನ್ನೂ ಓದಿ *ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ಸೆಟ್ಟೇರಿತು ರೂಪೇಶ್ ಶೆಟ್ಟಿ-ಜಾಹ್ನವಿ ‘ಅಧಿಪತ್ರ’ ಸಿನಿಮಾ*
ಬರ್ಮ..ಆಕ್ಷನ್ ಎಂಟರ್ ಟೈನರ್ ಸಿನಿಮಾವಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿ ಬರಲಿದೆ. ವಿ.ಹರಿಕೃಷ್ಣ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಬಹದ್ದೂರ್, ಭರ್ಜರಿ ಮೂಲಕ ಮೋಡಿ ಮಾಡಿದ್ದ ಹರಿಕೃಷ್ಣ ಹಾಗೂ ಚೇತನ್ ಜೋಡಿ ಮೂರನೇ ಬಾರಿಗೆ ಒಂದಾಗುತ್ತಿರುವುದು ಸಹಜವಾಗಿ ನಿರೀಕ್ಷೆ ಹೆಚ್ಚಿಸಿದೆ.
ಇನ್ನೂ ಓದಿ ಯುವ ನಟ ವಿಕ್ರಾಂತ್ ನಟನೆಯ ‘ಸ್ಪಾರ್ಕ್ ಲೈಫ್’ ಬಿಡುಗಡೆಗೆ ಮುಹೂರ್ತ ಫಿಕ್ಸ್….ನ.17ಕ್ಕೆ ವಿಶ್ವಾದ್ಯಂತ ಸಿನಿಮಾ ರಿಲೀಸ್
ಬರ್ಮ ಸಿನಿಮಾ ಅನೌನ್ಸ್ ದಿನವೇ ಆಡಿಯೋ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಇದಪ್ಪ ಚೇತನ್ ಸಿನಿಮಾಗಳ ರೆಕಾರ್ಡ್ ಎನ್ನುತ್ತಿದ್ದಾರೆ ಗಾಂಧಿನಗರದ ಮಂದಿ. ಈಗಾಗಲೇ ರಕ್ಷ್ ರಾಮ್ ಕಿರುತೆರೆಯಲ್ಲಿ ಖ್ಯಾತಿ ಗಳಿಸಿದ್ದು, ಬರ್ಮ ಮೂಲಕ ಪ್ಯಾನ್ ಇಂಡಿಯಾ ಪ್ರಪಂಚದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ನಿರ್ದೇಶಕ ಚೇತನ್ ಕುಮಾರ್ ಪ್ರತಿ ಸಿನಿಮಾದಲ್ಲೊಂದು ಹೊಸತನ ಹೊತ್ತು ತರುತ್ತಾರೆ. ಅದೇ ನಿರೀಕ್ಷೆ ಬರ್ಮ ಸಿನಿಮಾ ಮೇಲೆಯೂ ಇದೆ. ಮುಂದಿನ ತಿಂಗಳು ಸೆಪ್ಟೆಂಬರ್ ನಿಂದ ಶೂಟಿಂಗ್ ಅಖಾಡಕ್ಕೆ ಚಿತ್ರತಂಡ ಧುಮುಕಲಿದೆ. ಇನ್ನುಳಿದ ತಾರಾ ಬಳಗ ಹಾಗೂ ತಾಂತ್ರಿಕ ವರ್ಗದ ಮಾಹಿತಿಯನ್ನು ಒಂದೊಂದಾಗಿ ಚಿತ್ರತಂಡ ನೀಡಲಿದೆ.