ಕೆಜಿಎಫ್ ನಟ ಬಿಎಸ್ ಅವಿನಾಶ್ ಪ್ರಯಾಣಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರಿಗೆ ಅನಿಲ್ ಕುಂಬ್ಳೆ ವೃತ್ತದ ಬಳಿ ಬುಧವಾರ ಕಂಟೈನರ್ ವೊಂದು ಡಿಕ್ಕಿ ಹೊಡೆದೆದಿದ್ದು, ಅಪಘಾತದಲ್ಲಿ ಐಷಾರಾಮಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
‘ಕೆಜಿಎಫ್ 2’ ಸಿನಿಮಾದ ಆಂಡ್ರೂವ್ ಪಾತ್ರದಲ್ಲಿ ಅವಿನಾಶ್ ನಟಿಸಿ ಜನಮನ ಗೆದ್ದಿದ್ದಾರೆ. (ಜೂನ್ 29) ಬೆಳಗ್ಗೆ ‘ಕೆಜಿಎಫ್ 2’ ನಟ ಬಿ ಎಸ್ ಅವಿನಾಶ್ ಪ್ರಯಾಣಿಸುತ್ತಿದ್ದ ವೇಳೆ ಕಾರು ಅಪಘಾತ ಸಂಭವಿಸಿದೆ. ಅವರು ಕಾರು ಜಖಂಗೊಂಡಿದ್ದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
(ಜೂನ್ 29) ಬೆಳ್ಳಂಬೆಳಗ್ಗೆ 6 ಗಂಟೆ ಸುಮಾರಿಗೆ ಅವಿನಾಶ್ ಅನಿಲ್ ಕುಂಬ್ಳೆ ಸರ್ಕಲ್ ಬಳಿ ತೆರಳುತ್ತಿದ್ದರು. ಎಂ ರಸ್ತೆಗೆ ತೆರಳುತ್ತಿದ್ದರು. ಈ ವೇಳೆ ಅವರ ಬೆಂಜ್ ಕಾರಿಗೆ ಗೂಡ್ಡ್ ಲಾರಿ ಡಿಕ್ಕಿ ಹೊಡೆದಿತ್ತು. ಈ ಪರಿಣಾಮ ಅವರ ಕಾರು ಜಖಂಗೊಂಡಿತ್ತು. ಗೂಡ್ಸ್ ಲಾರಿ ಚಾಲಕ ಶಿವಗೌಡನನ್ನು ಕಬ್ಬನ್ ಪೇಟೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಅಪಘಾತದಲ್ಲಿ ಸ್ಯಾಂಡಲ್‌ವುಡ್ ನಟ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅವಿನಾಶ್ ಅವರು ಕೆಜಿಎಫ್ ಚಿತ್ರದಲ್ಲಿ ಆಂಡ್ರ್ಯೂಸ್ ಪಾತ್ರದಲ್ಲಿ ಕಾಣಿಸಿದ್ದು, ಅವರ ಪಾತ್ರಕ್ಕೆ ಎಲ್ಲಡೆ ಉತ್ತಮ ಪ್ರತಿಕ್ರಯೆ ವ್ಯಕ್ತವಾಗಿತ್ತು
ಅವಿನಾಶ್ ಖಳನಾಯಕನ ಲುಕ್‌ಗೆ ಸಿನಿಪ್ರೇಮಿಗಳು ಮೆಚ್ಚುಗೆ ಸೂಚಿಸಿದ್ದರು. ಈ ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಕನ್ನಡದಲ್ಲಿ ಮತ್ತೊಬ್ಬ ಸ್ಟಾರ್ ಖಳನಾಯಕ ಹುಟ್ಟಿಕೊಂಡು ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯಿಂದಲೂ ಆಫರ್‌ಗಳು ಬರುತ್ತಿವೆಯಂತೆ.