Sandalwood Leading OnlineMedia

ಬ್ರಹ್ಮರಾಕ್ಷಸ ಟೀಸರ್ ಬಿಡುಗಡೆ

ಸ್ಯಾಂಡಲ್ ವುಡ್ ಈಗೀಗ ಹೊಸಬರ ಕಾರಣದಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ. ಹೊಸಬರ ಚಿತ್ರಗಳಲ್ಲಿ ಹೊಸತನದ ತಾಂತ್ರಿಕತೆಯ ಸ್ಪರ್ಶವಿರುತ್ತದೆ. ಅಂತಹ ಸಿನಿಮಾಗಳ ಸಾಲಿಗೆ ಸೇರಲಿರುವ ಮೊತ್ತೊಂದು ಚಿತ್ರವೇ ಬ್ರಹ್ಮರಾಕ್ಷಸ. ಒಬ್ಬ ಲೈಟ್‌ಮ್ಯಾನ್ ಆಗಿ ಫಿಲಂ ಇಂಡಸ್ಟ್ರಿಗೆ ಬಂದು ಹಲವಾರು ನಿರ್ದೇಶಕರ ಬಳಿ ಕೆಲಸ ಕಲಿತ ಶಂಕರ್.ವಿ. ಮೊದಲಬಾರಿಗೆ ಆ್ಯಕ್ಷನ್‌ಕಟ್ ಹೇಳಿರುವ ಚಿತ್ರ ಬ್ರಹ್ಮರಾಕ್ಷಸ. ಜ್ಯೋತಿ ಆರ್ಟ್ಸ್ ಮೂಲಕ ಕೆಎಂಪಿ. ಶ್ರೀನಿವಾಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಅಂಕುಶ್ ಏಕಲವ್ಯ, ಪಲ್ಲವಿಗೌಡ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಮತೊಂದು ವಿಶಿಷ್ಠ ಪಾತ್ರದಲ್ಲಿ ವೈಜನಾಥ್ ಬಿರಾದಾರ್ ಕಾಣಿಸಿಕೊಂಡಿದ್ದಾರೆ.ಈಗಾಗಲೇ ತನ್ನೆಲ್ಲ ಕೆಲಸಗಳನ್ನು ಮುಗಿಸಿಕೊಂಡು ಸೆನ್ಸಾರ್ ಹಂತದಲ್ಲಿರುವ ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಇದನ್ನೂ ಓದಿ  ದಿ ಗೋಟ್ ಲೈಫ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್: ಏಪ್ರಿಲ್ 10ಕ್ಕೆ ಪ್ರೇಕ್ಷಕರ ಮುಂದೆ ಪೃಥ್ವಿರಾಜ್ ಸುಕುಮಾರನ್ ಚಿತ್ರ

ಮೊದಲು ನಿರ್ಮಾಪಕ ಶ್ರೀನಿವಾಸ ಮಾತನಾಡುತ್ತ ನನ್ನ‌ ಮೊದಲ ಚಿತ್ರ ಕಲಿವೀರ. ಮೀಡಿಯಾದವರ ಮಾತು ಮೀರಿ ಅದನ್ನು ರಾಂಗ್ ಟೈಂನಲ್ಲಿ ರಿಲೀಸ್ ಮಾಡಿದ್ದೆ. ಇದು ಹಾಗಾಗಲ್ಲ. ನೂರು ಪಟ್ಟು ಸಸ್ಪೆನ್ಸ್, ಆಕ್ಷನ್, ಥ್ರಿಲ್ಲರ್ ಇದೆ. ಇದರಲ್ಲಿ ೫ ಸುಂದರ ಹಾಡುಗಳಿವೆ. ಕನ್ನಡ ಜನ ಚಿತ್ರವನ್ನು ಕೈ ಹಿಡಿಯುವರೆಂಬ ನಂಬಿಕೆಯಿದೆ. ಹೊಸಬರು ಗೆದ್ದರೆ ಇನ್ನೊಂದಷ್ಟು ಸಿನಿಮಾಗಳು ಬರುತ್ತವೆ ಎಂದರು. ನಾಯಕನ ತಾಯಿಯಾಗಿ ನಟಿಸಿರುವ ಭವ್ಯ ಮಾತನಾಡಿ ನಾನು ಚಿಕ್ಕ ಹೀರೋಗೆ ತಾಯಿಯ ಪಾತ್ರ ಮಾಡಿದ್ದೇನೆ. ನಿರ್ದೇಶಕ ಶಂಕರ್ ಎಲ್ಲಾ ವಿಭಾಗದಲ್ಲಿ ಪರಿಣತಿ ಪಡೆದು ನಿರ್ದೇಶಕನಾಗಿದ್ದಾರೆ. ಏಕಲವ್ಯ ತುಂಬಾ ಪ್ರತಿಭಾವಂತ, ಚಿತ್ರದ ಮ್ಯೂಸಿಕ್ ಕ್ಯಾಮೆರಾ ಎಲ್ಲವೂ ಚೆನ್ನಾಗಿದೆ ಎಂದು ಹೇಳಿದರು.ನಂತರ ವೈಜನಾಥ್ ಬಿರಾದಾರ್ ಮಾತನಾಡಿ ಇದೊಂದು ಡಿಫರೆಂಟ್ ಕ್ಯಾರೆಕ್ಟರ್, ೩೦ ವರ್ಷ ಆದಮೇಲೆ ಮೊದಲಬಾರಿಗೆ ನನ್ನ ದಾರಿಬಿಟ್ಟು ಮಾಡಿದ ಚಿತ್ರ ಎಂದು ಹೇಳಿದರು. ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮಾತನಾಡಿ ಸಿನಿಮಾ ಇಷ್ಟು ಚೆನ್ನಾಗಿ ಬರಲು ನಿರ್ಮಾಪಕರೇ ಕಾರಣ. ಈ ಸಿನಿಮಾ ಯಾವುದೇ ಹಾಲಿವುಡ್ ಚಿತ್ರಕ್ಕೂ ಕಮ್ಮಿಯಿಲ್ಲ. ಏಕಲವ್ಯ ಪರ್ ಫಾರ್ಮನ್ಸ್ ನೋಡಿ ಜಾಕಿಚಾನ್ ನೆನಪಾದರು ಎಂದು ಹೊಗಳಿದರು.

ಇದನ್ನೂ ಓದಿ  ‘ಹಿರಣ್ಯ’ ಮಾಸ್ ಟೀಸರ್ ಹವಾ…ಮ್ಯಾಸೀವ್ ಸ್ಟಾರ್ ರಾಜವರ್ಧನ್ ಭರ್ಜರಿ ಆಕ್ಷನ್

ಏಕಲವ್ಯ ಮಾತನಾಡಿ ಇದು ೮೦-೮೦ರ ದಶಕದಲ್ಲಿ ನಡೆವಂಥ ಕಥೆ. ಕಲಿವೀರ ಮಾಡುವಾಗಲೇ ಶಂಕರ್ ಪರಿಚಯವಾದರು. ನಾನೇ ನಿರ್ಮಾಪಕರಿಗೆ ಪರಿಚಯಿಸಿದೆ. ನಾವೆಷ್ಟೇ ಕಷ್ಟಪಟ್ಟಿದ್ದರೂ ತೆರೆಮೇಲೆ ನೋಡಿದಾಗ ಅದೆಲ್ಲ ಮರೆತುಹೋಗುತ್ತದೆ ಎಂದು ಭಾವುಕರಾದರು.
ಪಲ್ಲವಿಗೌಡ ಮಾತನಾಡಿ ಇಡೀ ಸಿನಿಮಾ ರಾತ್ರಿಯಲ್ಲೇ ನಡೆಯುತ್ತೆ. ಅಂಕುಷ್ ಗರ್ಲ್ ಫ್ರೆಂಡ್ ಆಗಿ, ಹೆಂಡತಿಯಾಗಿ ಕಾಣಿಸಿಕೊಂಡಿದ್ದೇನೆ ಎಂದರು.
ನಿರ್ದೇಶಕ ಶಂಕರ್ ಮಾತನಾಡಿ ನಾನು ಸಿನಿಮಾಗೆ ಬರುತ್ತೇನೆ ಅಂದುಕೊಂಡೇ ಇರಲಿಲ್ಲ.
ಬಡತನದಲ್ಲೇ ಬೆಳೆದವನು. ೩ ಕಿರುಚಿತ್ರಗಳನ್ನು ಮಾಡಲು ನನ್ನ ತಾಯಿಯ ಒಡವೆಗಳನ್ನೆಲ್ಲ ಅಡವಿಟ್ಟಿದ್ದೆ ಎಂದು ಹಿಂದಿನ ದಿನಗಳನ್ನು ನೆನಪಿಸಿಕೊಂಡರು.
ಬ್ರಹ್ಮರಾಕ್ಷಸ ೧೯೮೦-೯೦ರ ಸಮಯದಲ್ಲಿ ನಡೆಯುವ ಒಂದು ರಿವೆಂಜ್ ಸ್ಟೋರಿಯಾಗಿದ್ದು, ಜೊತೆಗೊಂದು ಮೆಸೇಜ್ ಕೂಡ ಇದೆ. ೩ ಜನ ಸಮಾಜಕ್ಕೆ ಒಳ್ಳೆಯದು ಮಾಡಲೆಂದು ಹೊರಟಾಗ ಏನೋ ಒಂದು ಘಟನೆ ನಡೆಯುತ್ತದೆ, ಇಲ್ಲಿ ನಾಯಕ ಹಾಗೂ ಬಿರಾದಾರ್ ಮಾವ ಅಳಿಯನಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ಚಿತ್ರದ ೯೦ರಷ್ಟು ಭಾವನ್ನು ರಾತ್ರಿ ವೇಳೆಯಲ್ಲೇ ಚಿತ್ರೀಕರಿಸಲಾಗಿದ್ದು, ಬಹುತೇಕ ಕಥೆ ಮಳೆಯಲ್ಲೇ ನಡೆಯುತ್ತದೆ, ಅನಿರುದ್ದ ಅವರ ಕ್ಯಾಮೆರಾವರ್ಕ್ ಈ ಚಿತ್ರದಲ್ಲಿದ್ದು, ಎಂ.ಎಸ್.ತ್ಯಾಗರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಅರವಿಂದ್ ರಾವ್, ಸ್ವಪ್ನ, ಪುರುಷೋತ್ತಮ್, ಬಲ ರಾಜವಾಡಿ. ರಥಾವರ ದೇವು, ಭುವನ್‌ಗೌಡ, ಚಿಕ್ಕಹೆಜ್ಜಾಜಿ ಮಜದೇವ್, ಶಿವಾನಂದಪ್ಪ ಹಾವನೂರು ಸೇರಿದಂತೆ ಹಲವಾರು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ,

Share this post:

Related Posts

To Subscribe to our News Letter.

Translate »