ಜೀ ಕನ್ನಡದಲ್ಲಿ ಈ ಹಿಂದೆ ಬ್ರಹ್ಮಗಂಟು ಎಂಬ ಧಾರಾವಾಹಿ ಬರುತ್ತಿತ್ತು. ಆ ಧಾರಾವಾಹಿಯನ್ನು ಯಾರೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ.
ಈಗಲೂ ಕಥೆಯೂ ನೆನಪಿದೆ, ನಟಿಯ ಹೆಸರು ಚಾಲ್ತಿಯಲ್ಲಿದೆ.
ಬ್ರಹ್ಮಗಂಟು ಎಂದರೆ ಗುಂಡಮ್ಮ ನೆನಪಿಗೆ ಬರುತ್ತಾರೆ. ಇದೀಗ ಅದೇ ಟೈಟಲ್ ಹೊತ್ತು ಮತ್ತೆ ಜೀ ಕನ್ನಡದಲ್ಲಿ ಬರುತ್ತಿದೆ.
ಈ ಮೊದಲೇ ಜೀ ಕನ್ನಡದಲ್ಲಿ ಬ್ರಹ್ಮಗಂಟು ಎಂಬ ಧಾರಾವಾಹಿ ಹಲವು ಎಪಿಸೋಡ್ ಗಳಿಂದ ಜನರ ಮನಸ್ಸನ್ನು ಗೆದ್ದಿತ್ತು. ಬಳಿಕ ಸುಖಾಂತ್ಯ ಕಂಡಿತ್ತು.
ಇದೀಗ ಮತ್ತೆ ಬ್ರಹ್ಮಗಂಟು ಶುರುವಾಗುತ್ತಿದೆ. ಅದಕ್ಕೆ ಸಂಬಂಧಪಟ್ಟಂತ ಪ್ರೋಮೋ ಒಂದನ್ನು ರಿಲೀಸ್ ಮಾಡಿದೆ. ಹೊಸ ಪ್ರೋಮೋ ನೋಡಿದವರಿಗೆ ಕಥೆಯ ಬಗ್ಗೆ ಒಂದಷ್ಟು ಅಂದಾಜು ಸಿಕ್ಕಿದೆ. ಶೀಘ್ರದಲ್ಲಿಯೇ ಧಾರಾವಾಹಿ ಪ್ರಸಾರವಾಗಲಿದೆ.
ಇನ್ನು ಅಧಿಕೃತ ದಿನಾಂಕವನ್ನು ಘೋಷಣೆ ಮಾಡಿಲ್ಲ. ಈಗಾಗಲೇ ಹೊಸ ಧಾರಾವಾಹಿಗಳನ್ನು ಜೀ ಕನ್ನಡ ನೀಡುತ್ತಿದೆ.
ಅದರ ನಡುವೆ ಈಗ ಮತ್ತೊಂದು ಧಾರಾವಾಹಿ ಶುರುವಾಗುತ್ತಿದೆ.ತಂಗಿ, ಅಕ್ಕನಿಗಾಗಿಯೇ ತ್ಯಾಗ ಮಾಡುತ್ತಾಳೆ. ಅಕ್ಕ ಏನೇ ಕೇಳಿದರು ಇಲ್ಲ ಎನ್ನುವ ಮಾತೇ ಇಲ್ಲ.
ಇಬ್ಬರಿಗೂ ಬಟ್ಟೆ ತಂದರೂ ಅಕ್ಕ ಆದವಳು ಎರಡು ಬಟ್ಟೆಯನ್ನು ಮೊದಲು ನಾನೇ ಹಾಕಿಕೊಳ್ಳುತ್ತೇನೆ ಎಂದರು ತಂಗಿಗೆ ಬೇಸರ ಮಾಡಿಕೊಳ್ಳುವುದಿಲ್ಲ.
ಅಕ್ಕ ತಾನೇ ಪರವಾಗಿಲ್ಲ ಬಿಡಿ ಎಂದೇ ಸಮಾಧಾನ ಮಾಡಿಕೊಳ್ಳುತ್ತಾಳೆ. ಇದು ಅಕ್ಕನಿಗೆ ಅಹಂ ಉಂಟಾಗುವುದಕ್ಕೆ ಕಾರಣವಾಗಿದೆ.
ತಂಗಿಯನ್ನು ಬಂಡವಾಳ ಮಾಡಿಕೊಂಡೆ ಅಕ್ಕ ತನ್ನ ಜೀವನ ಸಾಗಿಸುತ್ತಿದ್ದಾಳೆ. ತಂಗಿಗೆ ಅಕ್ಕ ಎಂದರೆ ಎಷ್ಟು ಇಷ್ಟ ಎಂದರೆ ದೇವರ ಬಳಿಯೂ ಅಕ್ಕನ ಬಗ್ಗೆಯೇ ಬೇಡಿಕೊಳ್ಳುತ್ತಾಳೆ.
ಹೀಗೆ ಅಕ್ಕ ತಂಗಿಯರ ಕಥೆಯನ್ನು ಹೊತ್ತ ಬ್ರಹ್ಮಗಂಟು ಯಾರ ಜೀವನಕ್ಕೆ ಬೆಸೆಯುತ್ತದೆ ಎಂಬುದನ್ನು ನೋಡಬೇಕಿದೆ.