Left Ad
ಸೆ.15ಕ್ಕೆ ಬಹುನಿರೀಕ್ಷಿತ `ಬೋಯಾಪಾಟಿರಾಪೋ' ರಿಲೀಸ್ - Chittara news
# Tags

ಸೆ.15ಕ್ಕೆ ಬಹುನಿರೀಕ್ಷಿತ `ಬೋಯಾಪಾಟಿರಾಪೋ’ ರಿಲೀಸ್

ಅಖಂಡ ಸಿನಿಮಾದ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಬೋಯಾಪಾಟಿ ಶ್ರೀನು ನಿರ್ದೇಶನದಲ್ಲಿ ಮೂಡಿಬರ್ತಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಬೋಯಾಪಾಟಿರಾಪೋ.. ಉಸ್ತಾದ್ ರಾಮ್ ಪೋತಿನೇನಿ ನಟನೆಯ ಮಾಸ್ ಆಕ್ಷನ್ ಎಂಟರ್ ಟೈನರ್ ಕಥಾಹಂದರ ಈ ಚಿತ್ರವನ್ನು ಅಕ್ಟೋಬರ್ 20ರಂದು ದಸರಾ ಪ್ರಯುಕ್ತ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿತ್ತು. ಆದರೀಗ ನಿಗದಿತ ಸಮಯಕ್ಕಿಂತಲೂ ಒಂದು ತಿಂಗಳು ಮುಂಚಿತವಾಗಿಯೇ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಸೆಪ್ಟಂಬರ್ 15ರಂದು ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಬೋಯಾಪಾಟಿರಾಪೋ ವಿಶ್ವಾದ್ಯಂತ ರಿಲೀಸ್ ಆಗಲಿದೆ. ವೈಟ್ ಅಂಡ್ ವೈಟ್ ಪಂಚೆ ತೊಟ್ಟು ಕೈಯಲ್ಲಿ ಕಾಫಿ ಕಪ್ ಹಿಡಿದು ಹಸಿರನ್ನೇ ಹಾಸಿ ಹೊದ್ದಿರುವ ಭತ್ತದ ಗದ್ದೆಯಲ್ಲಿ ರಾಮ್ ಪೋತಿನೇನಿ ಕುಳಿತಿರುವ ಸ್ಪೆಷಲ್ ಪೋಸ್ಟರ್ ಮೂಲಕ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿದೆ.

ಇದನ್ನೂ ಓದಿ:  `Agrasena’ movie review: ಹಳ್ಳಿ-ಪಟ್ಟಣದ ವೈರುಧ್ಯಗಳ ನಡುವೆ, ತಂದೆ-ಮಗನ ಭಾವ ಲಹರಿ!

ಲವರ್ ಬಾಯ್ ಆಗಿ ಮಿಂಚುತ್ತಿದ್ದ ರಾಮ್ ಪೋತಿನೇನಿ ಮೊದಲ ಬಾರಿಗೆ ಬೋಯಾಪಾಟಿರಾಪೋ ಸಿನಿಮಾದಲ್ಲಿ ಮಾಸ್ ಅವತಾರದಲ್ಲಿ ನಟಿಸಿದ್ದಾರೆ. ಕನ್ನಡತಿ ಶ್ರೀಲೀಲಾ ರಾಮ್ ಗೆ ಜೋಡಿಯಾಗಿ ನಟಿಸಿದ್ದಾರೆ. ಸಂತೋಷ್ ಡಿಟೇಕ್ ಕ್ಯಾಮೆರಾ ವರ್ಕ್, ತಮನ್ ಎಸ್ ಎಸ್ ಮ್ಯೂಸಿಕ್ ಕಿಕ್ ಚಿತ್ರಕ್ಕಿದೆ. ಈ ಚಿತ್ರವನ್ನು ಶ್ರೀನಿವಾಸ್ ಸಿಲ್ವರ್ ಸ್ಕ್ರೀನ್ ಬ್ಯಾನರ್ ನಡಿ ಶ್ರೀನಿವಾಸ್ ಚಿತ್ತೂರಿ ನಿರ್ಮಾಣ ಮಾಡಿದ್ದಾರೆ. ಜೀ ಸ್ಟುಡಿಯೋಸ್ ಸೌತ್ ಹಾಗೂ ಪವನ್ ಕುಮಾರ್ ಅರ್ಪಿಸುತ್ತಿರುವ ಬೋಯಾಪಾಟಿರ್ಯಾಂಪೋ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ. ಸದ್ಯ ಬೋಯಾಪಾಟಿರಾಪೋ ಎಂಬ ತಾತ್ಕಾಲಿಕ ಶೀರ್ಷಿಕೆ ಫಿಕ್ಸ್ ಮಾಡಲಾಗಿದೆ.

Spread the love
Translate »
Right Ad