Sandalwood Leading OnlineMedia

‘ಬಾಂಡ್ ರವಿ’ ಭರ್ಜರಿ ಆಕ್ಷನ್ ಸೀನ್ಸ್ ಖದರ್…ಹೇಗಿತ್ತು ಮಂಡ್ಯ ಹೈದನ ಪವರ್?

ಬಾಂಡ್ ರವಿ’ ಭರ್ಜರಿ ಆಕ್ಷನ್ ಸೀನ್ಸ್ ಖದರ್…ಹೇಗಿತ್ತು ಮಂಡ್ಯ ಹೈದನ ಪವರ್?

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಪ್ರಮೋದ್ ನಟನೆಯ ಬಹು ನಿರೀಕ್ಷಿತ ಸಿನ್ಮಾ ಬಾಂಡ್ ರವಿ ಚಿತ್ರದ ಶೂಟಿಂಗ್ ಭರದಿಂದ ಸಾಗ್ತಿದೆ. ಈಗಾಗಲೇ 70ರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ, ಬೆಂಗಳೂರಿನ HMTಯಲ್ಲಿ ಸಾಹಸ ದೃಶ್ಯದ ಚಿತ್ರೀಕರಣ ನಡೆಸಿದೆ.

ಖ್ಯಾತ ಸಾಹಸ ನಿರ್ದೇಶಕ ಮಾಸ್ಟರ್ ವಿನೋದ್ ಸಾಹಸ ಸಂಯೋಜನೆಯಲ್ಲಿ ಭರ್ಜರಿ ಸಾಹಸ ಸನ್ನಿವೇಶದ ಚಿತ್ರೀಕರಣ ನಡೆದಿದೆ. ಪ್ರಮೋದ್, ಸಹಕಲಾವಿದರು ಭರ್ಜರಿ ಆಕ್ಷನ್ ಸೀನ್ಸ್ ಭಾಗಿಯಾಗಿದ್ದರು.

ಕಳೆದ‌ ಹನ್ನೊಂದು ವರ್ಷದಿಂದ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿರುವ ಪ್ರಜ್ವಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಇದೊಂದು ಕಮರ್ಷಿಯಲ್, ಆಕ್ಷನ್-ಲವ್ ಸ್ಟೋರಿ ಸಿನಿಮಾವಾಗಿದ್ದು, ಲೈಫ್ ಲೈನ್ ಫಿಲ್ಮಸ್ ಬ್ಯಾನರ್ ನಡಿ ನರಸಿಂಹಮೂರ್ತಿ ಬಂಡವಾಳ ಹೂಡ್ತಿದ್ದಾರೆ.

ಈ‌ ಹಿಂದೆ ನರಸಿಂಹಮೂರ್ತಿ ಮಾದ ಮನಸಿ ಸಿನಿಮಾ ನಿರ್ಮಾಣ ಮಾಡಿದ್ದರು. ಪ್ರಮೋದ್ ಗೆ ಜೋಡಿಯಾಗಿ ಮಾಯಕನ್ನಡಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಕಾಜಲ್ ಕುಂದರ್ ನಾಯಕಿಯಾಗಿ ನಟಿಸ್ತಿದ್ದಾರೆ.

ಮಲ್ಲಿಕಾರ್ಜುನ್ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಕೊಂಡಿದ್ದಾರೆ. ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್, ತೆಲುಗಿನ ಖ್ಯಾತ ನಟ ರವಿ ಪ್ರಕಾಶ್ ಮುಖ್ಯ ಭೂಮಿಕೆಯಲ್ಲಿ ನಟಿಸ್ತಿದ್ದು, ಕೆಎಸ್ ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಸಂಕಲನ, ಸುನಿಲ್&ದೇವ್ ಎನ್ ರಾಜ್ ಸಂಭಾಷಣೆ, ಮನೋಮೂರ್ತಿ ಮಧುರ ಸಂಗೀತ, ಜಯಂತ್ ಕಾಯ್ಕಿಣಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಸಿನಿಮಾಕ್ಕಿದೆ.

Share this post:

Related Posts

To Subscribe to our News Letter.

Translate »