ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಟಾಕ್ಸಿಕ್ ಗೆ ಬಾಲಿವುಡ್ ಬೇಬೂ ಕರೀನಾ ಕಪೂರ್ ನಾಯಕಿ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.ಇದರ ಬಗ್ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇಬ್ಬರು ಮಕ್ಕಳ ತಾಯಿಯಾದ ಬಳಿಕ ಕರೀನಾ ಕಪೂರ್ ಸಿನಿಮಾ ವಿಚಾರದಲ್ಲಿ ಚ್ಯೂಸಿಯಾಗಿದ್ದಾರೆ. ಇದೀಗ ಯಶ್ ಮುಂದಿನ ಸಿನಿಮಾಗೆ ಕರೀನಾ ನಾಯಕಿ ಎಂಬ ಮಾತು ಕೇಳಿಬರುತ್ತಿದೆ.
ಟಾಕ್ಸಿಕ್ ಸಿನಿಮಾವನ್ನು ಹಾಲಿವುಡ್ ರೇಂಜ್ ನಲ್ಲಿ ಶೂಟ್ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ. ನಾಯಕಿ ಪಾತ್ರಧಾರಿಯೂ ಪರಭಾಷೆಯ ಸ್ಟಾರ್ ನಟಿ ಆಗಿರಬಹುದು ಎಂದು ಈಗಾಗಲೇ ಊಹಾಪೋಹಗಳಿತ್ತು.
ಇದೀಗ ಕರೀನಾ ನಾಯಕಿ ಎಂಬ ಸುದ್ದಿ ಹಬ್ಬಿದೆ. ಇದರ ಬಗ್ಗೆ ನೆಟ್ಟಿಗರಲ್ಲಿ ಕೆಲವರು ಕರೀನಾಗೆ ಯಶ್ ಸೂಕ್ತ ಜೋಡಿಯಲ್ಲ, ಅವರಿಗಿಂತ ಯಂಗ್ ಹೀರೋಯಿನ್ ಬೇಕು ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ಕರೀನಾ ಕನ್ನಡಕ್ಕೆ ಬಂದರೆ ಗ್ರೇಟ್ ಎನ್ನುತ್ತಿದ್ದಾರೆ.