Sandalwood Leading OnlineMedia

ಪರಶುರಾಮನ ಕುರಿತು ಬಾಲಿವುಡ್​ನಲ್ಲಿ ಸಿನಿಮಾ..?

ಕರ್ನಾಟಕದ ಕರಾವಳಿ ಭಾಗವನ್ನು ಪರಶುರಾಮನ ಸೃಷ್ಟಿ ಎಂದೇ ಕರೆಯಲಾಗುತ್ತದೆ. ಇದೇ ಕಾರಣಕ್ಕೆ ‘ಕಾಂತಾರ’ ಸಿನಿಮಾ ಪ್ರೀಕ್ವೆಲ್​ನಲ್ಲಿ ಪರಶುರಾಮನ ಕತೆಯನ್ನು ಸಹ ಹೇಳಲಾಗುತ್ತಿದೆ ಎನ್ನಲಾಗುತ್ತಿದೆ. ಆದರೆ ಇದೀಗ ಇದೇ ಪರಶುರಾಮನ ಕುರಿತು ಬಾಲಿವುಡ್​ನಲ್ಲೂ ಸಿನಿಮಾ ನಿರ್ಮಾಣವಾಗುತ್ತಿದೆ. ಖ್ಯಾತ ಮತ್ತು ಪ್ರತಿಭಾವಂತ ನಟರೊಬ್ಬರು ಪರಶುರಾಮನ ಪಾತ್ರದಲ್ಲಿ ನಟಿಸಲಿದ್ದಾರೆ.

ಬಯೋಪಿಕ್ ಮಾದರಿಯ ಸಿನಿಮಾಗಳಲ್ಲಿ ನಟಿಸುವಲ್ಲಿ ನಿಸ್ಸೀಮ ಎನಿಸಿಕೊಂಡಿರುವ ವಿಕ್ಕಿ ಕೌಶಲ್ ಅವರು ಪರಶುರಾಮನ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಹಿಂದೆ ‘ಸ್ಯಾಮ್ ಬಹದ್ಧೂರ್’ ಸಿನಿಮಾದಲ್ಲಿ ಆರ್ಮಿ ಜನರಲ್ ಮಾಣಿಕ್​ಷಾ, ‘ಸರ್ದಾರ್ ಉದ್ಧಮ್’ ಸಿನಿಮಾದಲ್ಲಿ ಉದ್ಧಮ್ ಸಿಂಗ್, ಈಗ ಬಿಡುಗಡೆ ಆಗಲಿರುವ ‘ಛಾವಾ’ ಸಿನಿಮಾದಲ್ಲಿ ಛತ್ರಪತಿ ಸಾಂಬಾಜಿ ಮಹಾರಾಜ್, ‘ಸಂಜು’ ಸಿನಿಮಾದಲ್ಲಿ ಸಂಜಯ್ ದತ್ ಗೆಳೆಯನ ಪಾತ್ರ ಹೀಗೆ ಹಲವು ಬಯೋಪಿಕ್ ಪಾತ್ರಗಳಲ್ಲಿ ನಟಿಸಿ ತಮ್ಮ ಪ್ರತಿಭೆಯನ್ನು ಹಲವು ಬಾರಿ ಋಜುವಾತುಪಡಿಸಿದ್ದಾರೆ.

ಇದೀಗ ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸುತ್ತಿದ್ದು, ಸಿನಿಮಾದ ಮೊದಲ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದೆ. ಪೋಸ್ಟರ್ ನೋಡಿಯೇ ವಿಕ್ಕಿ ಕೌಶಲ್ ಈ ಸಿನಿಮಾಕ್ಕೆ ಸೂಕ್ತ ಆಯ್ಕೆ ಎಂಬುದು ತಿಳಿಯುತ್ತಿದೆ. ಉದ್ದನೆಯ ಗಡ್ಡ ಬಿಟ್ಟು, ಉರಿವ ಕಣ್ಣುಗಳಿಂದ ಸಿಟ್ಟಿನಿಂದ ನೋಡುತ್ತಿರುವ ವಿಕ್ಕಿ ಕೌಶಲ್ ಚಿತ್ರ ಸಖತ್ ಆಗಿದೆ. ಸಿನಿಮಾಕ್ಕೆ ‘ಮಹಾವತಾರ’ ಎಂದು ಹೆಸರಿಡಲಾಗಿದೆ. ನಿರೇನ್ ಭಟ್ಟ ಅವರು ‘ಮಹಾವತಾರ’ ಸಿನಿಮಾಕ್ಕೆ ಚಿತ್ರಕತೆ ರಚಿಸುತ್ತಿದ್ದು, ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ.

Share this post:

Related Posts

To Subscribe to our News Letter.

Translate »