ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಕಂಗನಾ ರಣಾವತ್ ಮಂಡಿಯಲ್ಲಿ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ಆಸ್ತಿ ವಿವರ ಹಂಚಿಕೊಂಡಿದ್ದಾರೆ. ಅದರಲ್ಲಿ ತಮ್ಮ ಬಳಿ 91 ಕೋಟಿ ರೂಪಾಯಿ ಮೌಲ್ಯದ ಆಸ್ತಿಇದೆ ಎಂದು ಉಲ್ಲೇಖಿಸಿದ್ದಾರೆ. ಈ 91 ಕೋಟಿಯಲ್ಲಿ ಸುಮಾರು 29 ಕೋಟಿ ರೂಪಾಯಿಗಳ ಚರಾಸ್ತಿಗಳು ಮತ್ತು ಅಂದಾಜು 63 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳು ಸೇರಿವೆ.
17.38 ಕೋಟಿ ರೂಪಾಯಿ ಸಾಲ ಕೂಡ ನನ್ನ ಮೇಲಿದೆ ಎಂದಿರುವ ಕಂಗನಾ, 2021-22ರಲ್ಲಿ ತಮ್ಮ ವಾರ್ಷಿಕ ಆದಾಯ 12.30 ಕೋಟಿ ರೂ. ಎಂದು ಘೋಷಿಸಿರುವ ಕಂಗನಾ, 2022-23ರಲ್ಲಿ ಇದು 4.13 ಕೋಟಿ ರೂ.ಗೆ ಕುಸಿದಿದೆ ಎಂದು ತಿಳಿಸಿದ್ದಾರೆ. ಇನ್ನೂ ಹೆಚ್ಚು ಕಡಿಮೆ 93 ಲಕ್ಷದ ಬಿಎಂಡಬ್ಲ್ಯು , 58 ಲಕ್ಷ ಬೆಲೆ ಬಾಳುವ ಮರ್ಸಿಡಿಸ್ ಜಿಎಲ್ಇ 250 ಡಿ ಮತ್ತು3.91 ಕೋಟಿ ರೂ.
ಮೌಲ್ಯದ ಮರ್ಸಿಡೆಸ್ ಬೆನ್ಜ್ ಮೇಬ್ಯಾಚ್ ಕಾರುಗಳು ಒಡತಿಯೂ ಹೌದು ಕಂಗನಾ ರಣಾವತ್. ಇದಲ್ಲದೇ ತನ್ನ ಅಫಿಡವಿಟ್ನಲ್ಲಿ ತನ್ನ ಕೈಯಲ್ಲಿ ಕೇವಲ 2 ಲಕ್ಷ ರೂ ಇದೆ ಎಂದು ನಮೂದಿಸಿರುವ ಕಂಗನಾ ರಣಾವತ್, ಸುಮಾರು 5 ಕೋಟಿ ರೂ. ಮೌಲ್ಯದ 6.70 ಕೆಜಿ ಚಿನ್ನ, 50 ಲಕ್ಷ ರೂ ಮೌಲ್ಯದ 60 ಕೆಜಿ ಬೆಳ್ಳಿ ಹಾಗೂ 3 ಕೋಟಿ ರು. ಮೌಲ್ಯದ ವಜ್ರಗಳು ತಮ್ಮ ಬಳಿ ಇರುವುದಾಗಿ ಕಂಗನಾ ರಣಾವತ್ ತಿಳಿಸಿದ್ದಾರೆ.
ಯಾವುದೇ ಕೃಷಿ ಅಥವಾ ಕೃಷಿಯೇತರ ಭೂಮಿ ಇಲ್ಲ ಎಂದಿರುವ ಕಂಗನಾ ರಣಾವತ್, 6 ವಾಣಿಜ್ಯ ಕಟ್ಟಡಗಳನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಮುಂಬೈನಲ್ಲಿರುವ ಒಂದು ವಾಣಿಜ್ಯ ಕಟ್ಟಡದ ಮೌಲ್ಯವೇ ಸುಮಾರು 24 ಕೋಟಿ ರೂಪಾಯಿ ಅನ್ನುವುದು ವಿಶೇಷ. ಇನ್ನು ಇದೇ ಅಫಿಡೆವಿಟ್ನಲ್ಲಿ ತನ್ನ ಓದಿನ ಗುಟ್ಟಿನ ಬಗ್ಗೆಯೂ ತಿಳಿಸಿದ್ದು, ಗರಿಷ್ಠ ವಿದ್ಯಾಭ್ಯಾಸ 12ನೇ ತರಗತಿ ಎಂದು ತಿಳಿಸಿದ್ದಾರೆ.