ಬಾಲಿವುಡ್ ನಟಿ ಪೂಜಾ ಹೆಗ್ಡೆ ಕಾರ್ಕಳದ ಕಣಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಹಲವು ವಿಷಯಗಳ ಬಗ್ಗೆ ತುಳುವಿನಲ್ಲೇ ಮಾತನಾಡಿದ್ದಾರೆ. ಅದರಲ್ಲೂ ಕಣಜೂರಿನ ತನ್ನ ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.
ಹಳೆಯ ನೆನಪುಗಳು ತುಂಬಾ ಇವೆ. ಪ್ರತಿವರ್ಷ ಊರಿಗೆ ಬಂದಾಗ ಇಲ್ಲಿ ಕಣಜಾರ್ನಲ್ಲಿ ನನ್ನ ತಂದೆಯ ತಂದೆ ಅಂದ್ರೆ ಅಜ್ಜನ ಮನೆಗೆ ಭೇಟಿ ನೀಡುತ್ತಿದ್ದೆ. ಇಲ್ಲಿಗೆ ಬಂದಾಗ ಇಲ್ಲೇ ಉಳಿದುಕೊಳ್ಳುತ್ತ ಇದ್ದೇವು. ತುಂಬಾ ಗಮ್ಮತ್ ಮಾಡಿ ಹೋಗ್ತಾ ಇದ್ದೇವು.
ಬೇಸಿಗೆ ರಜೆ ಕಳೆದು ಬಾಂಬೆಗೆ ವಾಪಸ್ ಹೋಗುವ ಸಮಯದಲ್ಲಿ ನಾವು ಅಳುತ್ತಾ ಇದ್ದೆವು. ಯಾಕೆಂದರೆ ನಮಗೆ ಊರು ಬಿಟ್ಟು ಹೋಗಲು ಮನಸ್ಸಾಗುತ್ತ ಇರಲಿಲ್ಲ. ರಜೆ ಸಮಯದಲ್ಲಿ ಊರಿಗೆ ಬಂದು ಕಸಿನ್ಗಳ ಜತೆ ತುಂಬಾ ಗಮ್ಮತ್ ಆಗುತ್ತ ಇತ್ತು. ಯಾವಾಗಲೂ ಇದು ಒಳ್ಳೆಯ ನೆನಪು. ಭೂತ ದೈವಗಳು ನಮಗೆ ಗೈಡ್ (ಮಾರ್ಗದರ್ಶನ) ಮಾಡುತ್ತ ಇರುತ್ತವೆ. ಬಾಲ್ಯದಿಂದಲೇ ಭೂತದೈವಗಳನ್ನು ನಾನು ನೋಡುತ್ತಿದ್ದೇನೆ.
ನಮ್ಮ ಕುಟುಂಬ ಈ ಆರಾಧನೆ ಮಾಡುತ್ತ ಬಂದಿದೆ. ಇದು ನಮ್ಮ ಸಂಸ್ಕೃತಿಯ ಭಾಗವಾಗಿ ಜತೆಯಾಗಿ ಇದೆ. ಇದು ನಮಗೆ ಯಾವುದೂ ಹೊಸತಲ್ಲ. ನಾನು ಜೀವನದಲ್ಲಿ ಇಷ್ಟು ಸಾಧನೆ ಮಾಡಲು ಎಲ್ಲಾ ಆ ದೈವಗಳ ಆಶೀರ್ವಾದವೇ ಕಾರಣ.
ನಾನು ಮೊದಲ ಬಾರಿಗೆ ಇಂತಹ ಸ್ಪರ್ಧೆಗೆ ಹೋದಾಗ ನನಗೆ ಯಾರೂ ಕೂಡ ಟಿಪ್ಸ್ ನೀಡಿರಲಿಲ್ಲ. ಆ ಅನುಭವದ ನೆನಪು ಬ್ಲರ್ ಆಗಿ ನೆನಪಿದೆ. ಅದು ತುಂಬಾ ಸುಂದರ ಅನುಭವ. ಅಲ್ಲಿಂದ ನನಗೆ ಜೀವನದಲ್ಲಿ ಇನ್ನಷ್ಟು ಅನುಭವ ಹೆಚ್ಚಾಯಿತು ಎಂದು ನಟಿ ಪೂಜಾ ಹೆಗ್ಡೆ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಈ ಸಮಯದಲ್ಲಿ ಇವರ ತಯಾರಿ ಹೇಗಿತ್ತೆಂದು ಮಾಹಿತಿ ನೀಡಿದ್ದಾರೆ.