Sandalwood Leading OnlineMedia

ಫಿಟ್ನೆಸ್‌ ಸೀಕ್ರೆಟ್ ಹೇಳಿದ ಕಿಯಾರ : ನೀವೂ ಫಾಲೋ ಮಾಡುವಷ್ಟು ಸುಲಭ ವರ್ಕೌಟ್

ಇತ್ತಿಚಿನ ದಿನಗಳಲ್ಲಿ ಫಿಟ್ನೆಸ್‌ಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಅದರಲ್ಲೂ ನಟ-ನಟಿಯರು ಫಿಟ್ನೆಸ್‌ ರೆಗ್ಯೂಲರ್‌ ಆಗಿ ಮೆಂಟೈನ್‌ ಮಾಡುತ್ತಾರೆ. ಅವರ ಫಿಟ್ನೆಸ್‌ ಸೀಕ್ರೆಟ್‌ ತಿಳಿದು ಅಭಿಮಾನಿಗಳು ಸಹ ಫಾಲೋ ಮಾಡುತ್ತಾರೆ. ಇದೀಗ ನಟಿ ಕಿಯಾರ ಅಡ್ವಾನಿ ತಮ್ಮ ಫಿಟ್ನೆಸ್‌ ಗುಟ್ಟನ್ನು ರಟ್ಟು ಮಾಡಿದ್ದಾರೆ.

 

ತೆಳ್ಳಗೆ ಬೆಳ್ಳಗೆ ತೆರೆಮೇಲೆ ಸೊಗಸಾಗಿ ಕಾಣಿಸುವ ಕಿಯಾರಾ ಪಡ್ಡೆ ಹುಡುಗರ ನಿದ್ದೆಕದ್ದಿದ್ದಾರೆ. ಬಿಂದಾಸ್ ಫೋಟೊ ಶೂಟ್‌ಗಳ ಮೂಲಕ ಮೋಡಿ ಮಾಡುತ್ತಾರೆ.ಸುಂದರ ಮೈಮಾಟಕ್ಕಾಗಿ ಕಿಯಾರಾ ಡಯೆಟ್ ಹೇಗಿರುತ್ತೆ? ಏನು ತಿನ್ನುತ್ತಾರೆ? ವರ್ಕೌಟ್ ಹೇಗಿರುತ್ತೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಕೆಲ ದಿನಗಳ ಹಿಂದೆ ತಮ್ಮ ಡಯೆಟ್, ವರ್ಕೌಟ್ ಬಗ್ಗೆ ಆಕೆ ಹೇಳಿದ್ದ ವಿಡಿಯೋ ಈಗ ವೈರಲ್ ಆಗ್ತಿದೆ.

 

ಕರೀನಾ ಕಪೂರ್ ನಡೆಸಿಕೊಡುವ ಸಂದರ್ಶನವೊಂದರಲ್ಲಿ ಕಿಯಾರಾ ತಮ್ಮ ಫಿಟ್‌ನೆಸ್ ಬಗ್ಗೆ ಮಾತನಾಡಿದ್ದರು. “ನನ್ನ ಅದೃಷ್ಟ ಏನು ಅಂದ್ರೆ, ನಾನು ಎಷ್ಟು ಬೇಗ ದಪ್ಪ ಆಗ್ತೀನೋ, ಅಷ್ಟೇ ಬೇಡ ಸಣ್ಣ ಆಗ್ತೀನಿ. ನನಗೆ ಚಿಕ್ಕಂದಿನಿಂದಲೂ ಡ್ಯಾನ್ಸ್, ಸ್ವಿಮ್ಮಿಂಗ್ ಮಾಡುತ್ತೀನಿ. ಅದು ಬಹಳ ಇಷ್ಟ. ಪ್ರತಿದಿನ ಒಂದು ಗಂಟೆ ವ್ಯಾಯಾಮಕ್ಕೆ ಮೀಸಲಿಟ್ಟಿದ್ದೀನಿ. ಡ್ಯಾನ್ಸ್, ಸ್ವಿಮ್ಮಿಂಗ್ ಅದರಲ್ಲಿ ಇರುತ್ತದೆ. ಜಿಮ್ ಕೂಡ ಫಿಟ್‌ನೆಸ್ ಭಾಗವೇ. ಇದನ್ನೆಲ್ಲಾ ಇಷ್ಟಪಟ್ಟು ಮಾಡಿದರೆ ಚೆನ್ನಾಗಿರುತ್ತದೆ. ವರ್ಕೌಟ್‌ ಮಾಡಿ ಅಯ್ಯೋ ಸುಸ್ಯಾಯ್ತು ಎಂದುಕೊಳ್ಳಬಾರದು” ಎಂದಿದ್ದಾರೆ.

 

ಬಾಲಿವುಡ್ ನಟಿ ಕಿಯಾರಾ ಅದ್ವಾನಿ ಕಳೆದ ವರ್ಷ ಹಸೆಮಣೆ ಏರಿದ್ದರು. ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾರನ್ನು ಪ್ರೀತಿಸಿ ಕೈ ಹಿಡಿದರು. ಮದುವೆ ಬಳಿಕ ಕೂಡ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಸದ್ಯ ‘ವಾರ್‌-2’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Share this post:

Translate »