ಬಾಲಿವುಡ್ನಲ್ಲಿ ಯಾವ ಜೋಡಿ ಯಾವಾಗ ಬೇರ್ಪಡುತ್ತಾರೆ ಎನ್ನುವುದೇ ಗೊತ್ತಾಗಲ್ಲ. ಕೆಲವರು ಪ್ರೀತಿಸುತ್ತಾರೆ, ಕೆಲವರು ಬ್ರೇಕಪ್ ಮಾಡ್ಕೊಳ್ತಾರೆ. ಕೆಲವರು ಮದುವೆಯಾಗಿ ಬೇರ್ಪಡುತ್ತಾರೆ ಹೀಗೆ ಹತ್ತು ಹಲವು ಬೆಳವಣಿಗೆ ಅಗುತ್ತಲೇ ಇರುತ್ತದೆ. ಇತ್ತೀಚೆಗೆ ಬಾಲಿವುಡ್ ಜೋಡಿಯ ಡಿವೋರ್ಸ್ ವಿಚಾರ ಸುದ್ದಿ ಮಾಡಿದೆ. ಬಾಲಿವುಡ್ ನಟ ಗೋವಿಂದ ಅವರ ಪತ್ನಿ ಸುನೀತಾ ಅಹುಜಾ ಅವರು ತಮ್ಮ ಮಕ್ಕಳಾದ ಟೀನಾ ಮತ್ತು ಯಶವರ್ಧನ್ ಅವರೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಈ ವರ್ಷದ ಆರಂಭದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಇವರಿಬ್ಬರೂ ಶೀಘ್ರ ಬೇರ್ಪಡುತ್ತಾರೆ ಎನ್ನಲಾಗಿದೆ. ಈ ಸುದ್ದಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಅವರ ಕಮೆಂಟ್ಗಳು ಅವರ ಸಂಬಂಧದಲ್ಲಿ ಸಮಸ್ಯೆಯಾಗಿ ಎನ್ನುವ ಬಗ್ಗೆ ಊಹಾಪೋಹಗಳಿಗೆ ದಾರಿ ಮಾಡಿತು. ಆದರೆ ಅವರು ಈಗ ಅಂತಹ ರೂಮರ್ಸ್ ತಳ್ಳಿಹಾಕಿದ್ದಾರೆ. ಇತ್ತೀಚೆಗೆ ಶಿರಡಿ ಟುಡೇಗೆ ನೀಡಿದ ಸಂದರ್ಶನದಲ್ಲಿ, ಗೋವಿಂದ ಅವರೊಂದಿಗೆ ತನ್ನ ಬಾಂಧವ್ಯ ಇನ್ನೂ ಗಟ್ಟಿಯಾಗಿ ಉಳಿದಿದೆ ಎಂದು ಸುನೀತಾ ಸ್ಪಷ್ಟಪಡಿಸಿದ್ದಾರೆ. ನಮ್ಮನ್ನು ಯಾರೂ ಬೇರ್ಪಡಿಸಲು ಸಾಧ್ಯವಿಲ್ಲ. ನಾನು ಅವರೊಂದಿಗೆ ತುಂಬಾ ಮೋಜು ಎಂಜಾಯ್ ಮಾಡಿದ್ದೇವೆ. ಬಹಳಷ್ಟು ಜನರು ಮನೆ ಒಡೆಯಲು ಬಯಸುವ ಜನರಿದ್ದಾರೆ. ನಾನು ಯಾರನ್ನೂ ಮನೆ ಒಡೆಯಲು ಬಿಡುವುದಿಲ್ಲ. ಬಾಬಾ ನನ್ನೊಂದಿಗಿರುವುದರಿಂದ ನಾನು ಗೆಲ್ಲುತ್ತೇನೆ ಎಂದಿದ್ದಾರೆ.
ಮತ್ತೊಂದೆಡೆ ನನ್ನ ಮಗ, ನನ್ನ ಮಗಳು ಮತ್ತು ನಾನು ಒಟ್ಟಿಗೆ ವಾಸಿಸುತ್ತೇವೆ. ಆದರೆ ನಾವು ಮಾತನಾಡಲು ಕಷ್ಟಪಡುತ್ತೇವೆ. ಏಕೆಂದರೆ ಹೆಚ್ಚು ಮಾತನಾಡುವುದು ನಮ್ಮ ಶಕ್ತಿಯನ್ನು ಹೊರಹಾಕುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.