ಏಪ್ರಿಲ್ 22, 2025, ಬೆಂಗಳೂರು: ಆದಿತ್ಯ ಬಿರ್ಲಾ ಗ್ರೂಪ್ ಅಡಿಯಲ್ಲಿ ಗ್ರಾಸಿಂ ಇಂಡಸ್ಟ್ರೀಸ್ ಭಾಗವಾಗಿರುವ ಬಿರ್ಲಾ ಓಪಸ್ ಪೇಂಟ್ಸ್ ಇಂದು ಬೆಂಗಳೂರಿನಲ್ಲಿ ತನ್ನ ಹೊಸ ಬಿರ್ಲಾ ಓಪಸ್ ಪೇಂಟ್ ಸ್ಟುಡಿಯೊ ಆರಂಭಿಸಿದೆ. ಬಿರ್ಲಾ ಓಪಸ್ ಪೇಂಟ್ಸ್ ನ ಸಿಇಓ ರಕ್ಷಿತ್ ಹಗರ್ವೆ, ಝೋನಲ್ ಹೆಡ್ ಕಶ್ಯಪ್ ಈ ಸ್ಟುಡಿಯೋವನ್ನು ಉದ್ಘಾಟಿಸಿದರು.ಬಿರ್ಲಾ ಓಪಸ್ ಗುರುಗ್ರಾಮ್, ಲಕ್ನೋ, ಮುಂಬೈ ಮತ್ತು ನವಿ ಮುಂಬೈ ಹಾಗು ಇದೀಗ ಬೆಂಗಳೂರಿನಲ್ಲಿ ಯಶಸ್ವಿಯಾಗಿ ತನ್ನ ಪೇಂಟ್ ಸ್ಟುಡಿಯೊವನ್ನು ವಿಸ್ತರಣೆ ಮಾಡಿದೆ. ಪೇಂಟ್ ಮತ್ತು ಇಂಟೀರಿಯರ್ ಉದ್ಯಮವನ್ನು ಆವಿಷ್ಕಾರ ಮಾಡುವಲ್ಲಿ ಬ್ರಾಂಡ್ ನ ಬದ್ಧತೆಯನ್ನು ಮರು ದೃಢೀಕರಿಸಿದೆ.
ಬಿರ್ಲಾ ಓಪಸ್, ಪೇಂಟ್ಸ್ ಸ್ಟುಡಿಯೊಗಳನ್ನು ಸೃಜನಶೀಲತೆಯ ಕೇಂದ್ರಗಳಾಗಿ ವಿನ್ಯಾಸಗೊಳಿಸಿದೆ. ಇದು ಎಕ್ಸ್ಪೀರಿಯೆನ್ಸ್ ಸೆಂಟರ್ ಆಗಿದ್ದು ಗ್ರಾಹಕರಿಗೆ ಹೊಸ ಐಡಿಯಾಗಳನ್ನು ಕಂಡುಕೊಳ್ಳಲು ಅವಕಾಶ ಕಲ್ಪಿಸುವುದಲ್ಲದೇ, ಬಣ್ಣಗಳನ್ನು ಮುಟ್ಟುವ ಮತ್ತು ಅವುಗಳ ಅನುಭವವನ್ನು ಪಡೆದುಕೊಳ್ಳಲು ಅವಕಾಶ ನೀಡುತ್ತದೆ. ಗ್ರಾಹಕರು ಬಣ್ಣದ ಆಯ್ಕೆ, ರಚನೆಗಳು ಮತ್ತು ಬಳಕೆಯ ತಂತ್ರಗಳ ಕುರಿತು ವೈಯಕ್ತಿಕಗೊಳಿಸಿದ ಸಲಹೆಗಳ ಮೂಲಕ ಉಚಿತ ಪರಿಣಿತರ ಮಾರ್ಗದರ್ಶನ ಪಡೆದುಕೊಳ್ಳಬಹುದಾಗಿದೆ. ವಿಜ್ಯುಲೇಶನ್ ಸಾಧನಗಳು ಗೃಹ ಮಾಲೀಕರಿಗೆ ಆಯ್ಕೆ ಮಾಡಲಾದ ಬಣ್ಣಗಳು ನಿಜ ಜೀವನದ ಹಿನ್ನೆಲೆಗಳಲ್ಲಿ ಹೇಗೆ ಕಾಣುತ್ತವೆ ಎಂದು ಪ್ರಿವ್ಯೂ ಮಾಡಬಹುದಾಗಿದೆ.
ಬಿರ್ಲಾ ಓಪಸ್ ಪೇಂಟ್ಸ್ ಆಚೆಗೂ ಪೇಂಟ್ ಸ್ಟುಡಿಯೋ ವಾಲ್ ಪೇಪರ್ ಗಳು, ಡಿಸೈನರ್ ಫಿನಿಷ್ ಗಳು ಮತ್ತು ಸಮಗ್ರ ಅಲಂಕರಣದ ಪರಿಹಾರಕ್ಕೆ ವಿಶೇಷ ಕೋಟಿಂಗ್ ಆಯ್ಕೆಗಳನ್ನು ಕೂಡಾ ಹೊಂದಿರುತ್ತದೆ.ಈ ಮಳಿಗೆಯು ಪೂರ್ಣ ಶ್ರೇಣಿಯ 170+ ಉತ್ಪನ್ನಗಳನ್ನು ಪ್ರದರ್ಶಿಸುವುದಲ್ಲದೆ ವಿಶೇಷ ಸೇವೆಗಳನ್ನೂ ಒದಗಿಸುತ್ತದೆ, ಅದರಲ್ಲಿ ಬಣ್ಣದ ಆಯ್ಕೆ, ಆವಿಷ್ಕಾರಕ ಬಳಕೆ ತಂತ್ರಗಳು ಮತ್ತು ಶ್ರೀಮಂತ ಸ್ಥಳೀಯ ಪರಂಪರೆಯಿಂದ ಸ್ಫೂರ್ತಿ ಪಡೆದ ಕ್ಯುರೇಟೆಡ್ ಡೆಕೊರ್ ಹಾಗು ಪರಿಣಿತರ ಸಲಹೆಗಳನ್ನೂ ಕೂಡ ಪಡೆಯಬಹುದು.
ಬಿರ್ಲಾ ಓಪಸ್ ಪೇಂಟ್ಸ್ ಭಾರತದಾದ್ಯಂತ ತನ್ನ ರೀಟೇಲ್ ವ್ಯಾಪ್ತಿ ವಿಸ್ತರಿಸುವ ಪ್ರಗತಿಯ ಕಾರ್ಯತಂತ್ರದಲ್ಲಿ ಗಮನಾರ್ಹ ಹೆಜ್ಜಿಯಿಟ್ಟಿದೆ. ಮುಂದಿನ ತಿಂಗಳಿನಲ್ಲಿ ದೆಹಲಿ, ಹೈದರಾಬಾದ್, ಕೊಲ್ಕತಾ, ಜೈಪುರ, ಅಹಮದಾಬಾದ್ ಮತ್ತು ಸೂರತ್ ಗಳಲ್ಲಿ ಹೆಚ್ಚುವರಿ ಎಕ್ಸ್ಪೀರಿಯೆನ್ಸ್ ಸೆಂಟರ್ ಗಳನ್ನು ತೆರೆಯಲು ಯೋಜನೆಗಳನ್ನು ರೂಪಿಸಿದೆ.
ಈ ಬಗ್ಗೆ ಮಾತನಾಡಿದ ಬಿರ್ಲಾ ಓಪಸ್ ಪೇಂಟ್ಸ್ ಸಿಇಒ ಶ್ರೀ ರಕ್ಷಿತ್ ಹರ್ಗವೆ , “ಬೆಂಗಳೂರಿನಲ್ಲಿ ನಮ್ಮ ಮೊದಲ ಪೇಂಟ್ ಸ್ಟುಡಿಯೊ ಪ್ರಾರಂಭಿಸುವುದು ಬಿರ್ಲಾ ಓಪಸ್ ಪೇಂಟ್ಸ್ ಗೆ ಪ್ರಮುಖ ಮೈಲಿಗಲ್ಲಾಗಿದೆ. ಗ್ರಾಹಕರು ಬಣ್ಣಗಳ ಆಯ್ಕೆ, ರಚನೆಗಳು ಮತ್ತು ಬಳಕೆಯ ಕುರಿತು ಉಚಿತವಾಗಿ ಎಕ್ಸ್ಪರ್ಟ್ಸ್ ಗಳ ಬಳಿ ಮಾಹಿತಿ ಪಡೆಯಬಹುದು ಎಂದರು. ಪ್ರತಿಯೊಂದು ಬಿರ್ಲಾ ಓಪಸ್ ಎಕ್ಸ್ಪೀರಿಯೆನ್ಸ್ ಸೆಂಟರ್ ಗಳು ನಮ್ಮ ಪೇಂಟ್ ಕ್ರಾಫ್ಟ್ ಪೇಂಟಿಂಗ್ ಸೇವೆಯ ಮೂಲಕ ಪೇಂಟಿಂಗ್ ಸೇವೆಗಳನ್ನೂ ಒದಗಿಸುತ್ತಿದ್ದು ಪ್ರತಿ ಪೇಂಟ್ ಸ್ಟುಡಿಯೊ ಕೂಡಾ ಸ್ಥಳೀಯ ಸಂಸ್ಕೃತಿ, ಪರಂಪರೆ ಮತ್ತು ವಾಸ್ತುಶಿಲ್ಪದಿಂದ ಸ್ಫೂರ್ತಿ ಪಡೆದ ಬಣ್ಣಗಳನ್ನು ಹೊಂದಿವೆ ಎಂದರು.