Sandalwood Leading OnlineMedia

ಜೂನ್ 3ಕ್ಕೆ ತೆರೆಮೇಲೆ ಸಂದೀಪ್ ಉನ್ನಿಕೃಷ್ಣನ್ ಜೀವನಚರಿತ್ರೆ ಮೇಜರ್ ರಿಲೀಸ್.

ಜೂನ್ 3ಕ್ಕೆ ತೆರೆಮೇಲೆ ಸಂದೀಪ್ ಉನ್ನಿಕೃಷ್ಣನ್ ಜೀವನಚರಿತ್ರೆ ಮೇಜರ್ ರಿಲೀಸ್… ಬೆಂಗಳೂರಿನಲ್ಲಿ ಸಂದೀಪ್ ಅಭಿಮಾನಿಗಳಿಗಾಗಿ ಫ್ರೀ ಶೋ ಆಯೋಜಿಸಿದ್ದ ಚಿತ್ರತಂಡ

ಹುತಾತ್ಮ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನ ಕುರಿತಾಗಿ ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಮೇಜರ್ ಸಿನಿಮಾ‌ ಬರ್ತಾ ಇದೆ.

ಇದೇ ತಿಂಗಳ ಮೂರಕ್ಕೆ ಸಿನಿಮಾ ತೆರೆಗೆ ಬರ್ತಿದೆ. ಹೀಗಾಗಿ ಇಡೀ ತಂಡ ಬೆಂಗಳೂರಿಗೆ ಆಗಮಿಸಿ ಪ್ರಚಾರ ನಡೆಸಿತು.

ತೆಲುಗು ನಟ ಅಡಿವಿ ಶೇಷ್ ಸಂದೀಪ್ ಉನ್ನಿಕೃಷ್ಣನ್ ಪಾತ್ರ ನಿರ್ವಹಿಸುವುದರ ಜೊತೆಗೆ ಸಿನಿಮಾಗೆ ಕಥೆ ಕೂಡ ಬರೆದಿದ್ದು, ಪ್ರಿನ್ಸ್ ಮಹೇಶ್ ಬಾಬು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡ ಅಡಿವಿ ಶೇಷ್, ಸಂದೀಪ್ ಸರ್ ಪಾತ್ರ ಮಾಡುವುದು‌ ದೊಡ್ಡ ಚಾಲೆಂಜ್ ಆಗಿತ್ತು.

ನಾನು ಲೆಫ್ಟ್ ಹ್ಯಾಂಡ್, ಸಂದೀಪ್ ಸಾರ್ ರೈಟ್ ಹ್ಯಾಂಡ್. ಸಂದೀಪ್ ಸಾರ್ ಬಾಲ್ಯ, ಕಾಲೇಜ್ ಮತ್ತು ಸೇನೆಗೆ ಸೇರುವ ವಯಸ್ಸು ಮಾಡೋದು ಕಷ್ಟ ಆಯಿತು. ತೂಕ ಕಡಿಮೆ ಮಾಡಿಕೊಂಡು ನಂತರ ಮತ್ತೆ ತೂಕ ಜಾಸ್ತಿ ಮಾಡಿಕೊಳ್ಳಬೇಕಿತ್ತು. ಅದು ನನಗೆ ಸವಾಲಿನ ಕೆಲಸವಾಗಿತ್ತು. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ.

ಪ್ರಿನ್ಸ್ ಮಹೇಶ್ ಬಾಬು ಈ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು. ಕನ್ನಡದಲ್ಲಿ ಕಿಚ್ಚ ಸುದೀಪ್ ಹಾಗೂ ರಕ್ಷಿತ್ ಶೆಟ್ಟಿ ನನ್ನ ಫೇವರೇಟ್ ನಟರು ಎಂದರು.

ಮೇಜರ್ ಸಂದೀಪ್ ತಂದೆ-ತಾಯಿ ಬೆಂಗಳೂರಿನಲ್ಲಿ ವಾಸವಾಗಿರುವುದರಿಂದ ಅವರ ಪೋಷಕರು ಹಾಗೂ ಅಭಿಮಾನಿಗಳಿಗಾಗಿ ಚಿತ್ರತಂಡ ಬೆಂಗಳೂರಿನಲ್ಲಿ ಉಚಿತ ಶೋ ಆಯೋಜಿಸಿತ್ತು.


ಮುಂಬೈ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನ ಆಧರಿಸಿ ‘ಮೇಜರ್’ ಸಿನಿಮಾ ತೆರೆಗೆ ಬರುತ್ತಿದೆ. ಮುಂಬೈ ದಾಳಿಯ ಕಥೆ ಸಿನಿಮಾದಲ್ಲಿ ಹೈಲೈಟ್ ಆಗಲಿದೆ. ಅನೇಕ ಜನರ ಜೀವ ಉಳಿಸಿದ ಸಂದೀಪ್​ ಅವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಈ ಸಿನಿಮಾ ಸಿದ್ಧಗೊಂಡಿದೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

Share this post:

Related Posts

To Subscribe to our News Letter.

Translate »