Left Ad
ಟಾಸ್ಕ್‌ ಆಡಲು ಹೋಗಿ ಮನುಷ್ಯತ್ವ ಮರೆತರಾ ಸ್ಪರ್ಧಿಗಳು..? - Chittara news
# Tags

ಟಾಸ್ಕ್‌ ಆಡಲು ಹೋಗಿ ಮನುಷ್ಯತ್ವ ಮರೆತರಾ ಸ್ಪರ್ಧಿಗಳು..?

ಬಿಗ್‌ ಬಾಸ್‌ ಮನೆಯಲ್ಲಿ ಕೆಲವು ದಿನಗಳ ಬಳಿಕ ಟಾಸ್ಕ್‌ ಗಳು ಶುರುವಾಗುತ್ತವೆ. ಅವು ಯಾರೂ ಊಹೆ ಮಾಡಲು ಸಾಧ್ಯವಾಗದಂತ ಟಾಸ್ಕ್‌ಗಳು. ಕೆಲವೊಮ್ಮೆ ಬೇರೆ ಸೀಸನ್‌ನಲ್ಲಿ ಆಡಿಸಿದ ಟಾಸ್ಕ್‌ ಮತ್ತೆ ರಿಪೀಟ್‌ ಆಗಲು ಬಹುದು. ಆದರೆ ಬಿಗ್‌ ಬಾಸ್‌ನಲ್ಲಿ ಟಾಸ್ಕ್‌ಗಳನ್ನು ಕೊಟ್ಟಾಗಲೇ ಮನರಂಜನೆಯೂ ಸಿಗುತ್ತದೆ, ಅಟ್‌ ದಿ ಸೇಮ್‌ ಟೈಮ್‌ ಜಗಳ, ಗುದ್ದಾಟವೂ ನಡೆಯುತ್ತದೆ. ಆದ್ರೆ ಯಾವ ರೀತಿಯಾದ ಟಾಸ್ಕ್ ಕೊಡ್ತಾರೆ, ಅದನ್ನ ಬಿಗ್‌ ಬಾಸ್‌ ಮಂದಿ ಹೇಗೆ ಆಡ್ತಾರೆ ಎಂಬುದೇ ಇಲ್ಲಿ ಬಹಳ ಮುಖ್ಯವಾಗುತ್ತದೆ. ಆಟ ಆಡುವಾಗ ಫಿಸಿಕಲ್‌ ಟಾಸ್ಕ್‌ ಅನ್ನೇ ಹೆಚ್ಚಾಗಿ ನೀಡುವ ಕಾರಣ ಸಾಕಷ್ಟು ದೈಹಿಕವಾಗಿಯೂ ಸಮಸ್ಯೆಯಾಗುವ ಸಾಧ್ಯತೆ ಇದೆ.

ಈ ವಾರ ಉಗ್ರಂ ಮಂಜು, ಯಮುನಾ, ಜಗದೀಶ್‌, ಹಂಸ, ಭವ್ಯಾ, ಚೈತ್ರಾ, ಶಿಶಿರ್‌, ಮೋಕ್ಷಿತಾ, ಮಾನಸ ನಾಮಿನೇಟ್‌ ಆಗಿದ್ದಾರೆ. ನಾಮಿನೇಷನ್‌ನಿಂದ ಪಾರಾಗುವುದಕ್ಕೆ ಬಿಗ್‌ ಬಾಸ್‌ ಒಂದು ಟಾಸ್ಕ್‌ ನೀಡಿದೆ. ಚೆಂಡುಗಳನ್ನು ನೀಡಿ, ಅವುಗಳನ್ನು ಕಾಪಾಡಿಕೊಳ್ಳುವುದಕ್ಕೆ ಸಲಹೆ ನೀಡಿದೆ. ಆದರೆ ಈ ಸಮಯದಲ್ಲಿ ಸುಮಾರು ಸ್ಪರ್ಧಿಗಳ ದೇಹಕ್ಕೆ ಹಾನಿಯಾಗಿದೆ.

ಮಾನಸ ಮೇಲೆ ಭವ್ಯಾ ಜೋರಾಗಿ ಬಿದ್ದಿದ್ದಾರೆ. ಭವ್ಯ ಮೇಲೂ ಹಲವರು ಬಿದ್ದಿದ್ದಾರೆ. ಟಾಸ್ಕ್‌ ಮುಗಿಯುವ ವೇಳೆಗೆ ಶಿಶಿರ್‌ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಎಲ್ಲರೂ ಅವರತ್ತ ಗಮನ ಹರಿಸಿದ್ದಾರೆ. ಬಿಗ್‌ ಬಾಸ್‌ ಟಾಸ್ಕ್‌ ನೀಡಿದಾಗಲೇ ಸಾಕಷ್ಟು ಎಚ್ಚರಿಸಿದೆ. ಆದರೆ ಗೆಲ್ಲುವ ಭರದಲ್ಲಿ ಸ್ಪರ್ಧಿಗಳು ಮನುಷ್ಯತ್ವ ಮೀರಿ ಆಟವಾಡಿದ್ದಾರೆ. ಇದರಿಂದ ಜೀವಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ.

 

Spread the love
Translate »
Right Ad