ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗಳನ್ನು ನೋಡುವುದಕ್ಕೇನೆ ಮಜ. ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳು ಆಡುತ್ತಿದ್ದರೆ ಹೊರಗೆ ಕೂತು ನೋಡುವ ವೀಕ್ಷಕ ಚೆನ್ನಾಗಿ ಆಡುವ ಸ್ಪರ್ಧಿಗೆ ಬೆನ್ನು ತಟ್ಟುತ್ತಾ ಇರುತ್ತಾರೆ. ಓಡು ಓಡು, ನಿಧಾನ, ಆ ಕಡೆ ಬರಬೇಕಿತ್ತು, ಛೇ ಬಿದ್ದೋಯ್ತಾ ಹೀಗೆಲ್ಲಾ ಹೊರಗೆ ಕುಂತವರ ಬಾಯಿಂದಾನೇ ಮಾತುಗಳು ಬರುತ್ತವೆ. ನಿನ್ನೆ ಒಂದು ಬಾಕ್ಸ್ ಗಳನ್ನು ಹಗ್ಗದ ಮೂಲಕ ಬ್ಯಾಲೆನ್ಸ್ ಮಾಡಿ ಜೋಡಿಸುವ ಆಟವಿತ್ತಲ್ಲ ಆ ರೀತಿಯ ಟಾಸ್ಕ್ ಬಂದಾಗ ಈ ರೀತೊಯ ಜೋಶ್ ಇರುತ್ತೆ. ಆದ್ರೆ ಇಂದಿನ ಟಾಸ್ಕ್ ನಲ್ಲಿ ಎಲ್ಲರು ವ್ಯಾಘ್ರರಾಗಿ ಬಿಟ್ಟಿದ್ದರು.
ಬಿಗ್ ಬಾಸ್ ಇದೀಗ ಮನೆ ಮಂದಿಗೆ ಹೊಸ ಟಾಸ್ಕ್ ಒಂದನ್ನು ನೀಡಿದ್ದಾರೆ. ಅದು ನಿಲ್ಲೆ ನಿಲ್ಲೆ ಕಾವೇರಿ. ಅಂದ್ರೆ ಎದುರಾಳಿಗಳಿಂದ ಡ್ರಮ್ ನಲ್ಲಿರಯವ ನೀರನ್ನು ಆಟಕ್ಕೆ ಇಳಿದವರು ಕಾಪಾಡಿಕೊಳ್ಳಬೇಕು. ಡ್ರಮ್ ನಲ್ಲಿ ಅಲ್ಲಲ್ಲಿ ತೂತುಗಳನ್ನು ಮಾಡಲಾಗಿದೆ. ಅದರ ಮೂಲಕ ನೀರು ಹೊರ ಹೋಗದಂತೆ ಕಾಪಾಡಿಕೊಳ್ಳುವುದೇ ಹೊಸ ಟಾಸ್ಕ್. ಮೋಕ್ಷಿತಾ, ಐಶ್ಚರ್ಯಾ, ಭವ್ಯಾ ಹಾಗೂ ಅನುಷಾ ರೈ ಎದುರಾಳಿ ತಂಡದವರಾಗಿ ನಿಂತಿದ್ದರು. ರಕ್ಷಕರ ಡ್ರಮ್ ನಿಂದ ನೀರನ್ನು ಹೊರಗೆ ಬಿಡಬೇಕಾಗಿತ್ತು. ಎಲ್ಲರನ್ನು ತಳ್ಳಿ, ನೀರನ್ನು ಕಾಪಾಡಲು ಇಟ್ಟಿದ್ದ ಕೈಯನ್ನು ತಳ್ಳಿ ನೀರು ಪೋಲ್ ಮಾಡುತ್ತಿದ್ದರು. ಆಗ ಜೋರು ಜಗಳವೂ ಹೊತ್ತಿಕೊಂಡಿದೆ. ದೈಹಿಕವಾಗಿಯೂ ಹಲವರಿಗೆ ಪೆಟ್ಟಾಗಿದೆ.
ಭವ್ಯಾ ಅವರು ಚೈತ್ರಾ ಅವರ ಬಳಿ ಹೋಗಿ ನೀರು ಪೋಲು ಮಾಡುವಾಗ ದೈಹಿಕವಾಗಿ ಪೆಟ್ಟು ಮಾಡಿದ್ದಾರೆ. ಕೈ ಮೈ ಎಲ್ಲಾ ಎಳೆದಾಡಲಾಗಿತ್ತು. ಮಂಜಣ್ಣ ಸಮಾಧಾನದಿಂದಾನೇ ಕಾಪಾಡಿಕೊಳ್ಳುತ್ತಾ, ರಾಕ್ಷಸರ ಥರ ನಾವೂ ಆಡ್ತೀವಿ ಆಮೇಲೆ ಎಂದು ಎಚ್ಚರಿಕೆ ಕೊಟ್ಟರು. ಇದರ ನಡುವೆ ಅನುಷಾ ರೈ ಹಾಗೂ ಮೋಕ್ಷಿತಾ, ಸುರೇಶ್ ಅವರ ಹಿಂದೆ ಅಟ್ಯಾಕ್ ಮಾಡುತ್ತಿದ್ದರು. ಆಗ ಸುರೇಶ್ ಜೋರಾಗಿ ಇಬ್ಬರನ್ನು ತಳ್ಳಿದ್ದಾರೆ. ಈ ಘಟನೆಗೆ ಗರಂ ಆದ ಅನುಷಾ ರೈ, ಒಂದು ಕಾಮನ್ ಸೆನ್ಸ್ ಇಲ್ಲ ಹೇಗೆ ನಡೆದುಕೊಳ್ಳಬೇಕು ಅಂತ. ಹಿಂಗೇನಾ ಮನೆಯಲ್ಲಿ ಬೆಳೆಸಿರೋದು. ಕೈಯಲ್ಲಿ ಎಳೆಯೋಕೆ ಬಂದ್ರೆ ಕಾಲಲ್ಲಿ ತಳ್ಳುತ್ತಾರೆ. ಇವರ ಅಪ್ಪ ಸಾಕ್ತಾನಾ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದಕ್ಕೆ ಸುರೇಶ್ ಕೂಡ ಪ್ರತ್ಯುತ್ತರ ನೀಡಿದ್ದು, ಹೇಯ್ ನೀನೆ ಎಳೆದಿದ್ದು ಎಂದು ಜೋರು ಕಿರುಚಿದ್ದಾರೆ.