ಬಿಗ್ ಬಾಸ್ ಕನ್ನಡ ಸೀಸನ್ 11 ಟಾಸ್ಕ್‌ಗಳು ಶುರುವಾದ ಮೇಲೆ ಸಾಕಷ್ಟು ಇಂಟ್ರೆಸ್ಟಿಂಗ್ ಎನಿಸುವುದಕ್ಕೆ ಶುರುವಾಗಿದೆ. ಸ್ಪರ್ಧೆಯು ಹೆಚ್ಚಿದೆ. ಅದರಲ್ಲೂ ನರಕವಾಸಿಗಳು ನಾವ್ಯಾವಾಗ ಸ್ವರ್ಗಕ್ಕೆ ಹೋಗುತ್ತೀವೋ ಅಂತ ಕಾಯುತ್ತಿದ್ದಾರೆ. ಇದರ ನಡುವೆ ನರಕವಾಸಿಗಳಲ್ಲಿ ಕೊಂಚ ಮನಸ್ತಾಪವೂ ಇದ್ದು, ಅವರವರೇ ಬೇಗ ಕೋಪ ಮಾಡಿಕೊಳ್ಳುತ್ತಾರೆ. ಆದರೆ ಈಗ ಟಾಸ್ಕ್ ಮೂಲಕ ನರಕವಾಸಿಗಳಿಗೆ ಸ್ವರ್ಗ ಪ್ರಾಪ್ತಿಯಾಗುವ ಕಾಲ ಹತ್ತಿರ ಬಂದಿದೆ.
ನರಕದಲ್ಲಿರುವವರು ತಮ್ಮ ಸಾಮರ್ಥ್ಯವನ್ನು ತೋರಿಸಿ ಮತ್ತೆ ಸ್ವರ್ಗಕ್ಕೆ ಬರಬೇಕಿದೆ. ಅದಕ್ಕೆ ಇರುವ ದಾರಿ ಎಂದರೆ ಬಿಗ್ ಬಾಸ್ ನೀಡುವ ಟಾಸ್ಕ್‌ಗಳನ್ನು ಗೆಲ್ಲಲೇಬೇಕಾಗಿದೆ. ಈಗಾಗಲೇ ಟಾಸ್ಕ್ ಗೆದ್ದು ಆಗಿದೆ. ಈ ವಾರದ ನಾಮಿನೇಷನ್‌ನಿಂದ ಪಾರಾಗುವುದಕ್ಕೂ ಬಿಗ್ ಬಾಸ್ ನೀಡುವ ಟಾಸ್ಕ್‌ಗಳನ್ನು ಗೆಲ್ಲಬೇಕಿದೆ. ಟಾಸ್ಕ್‌ನಲ್ಲಿ ಯಡವಟ್ಟಾದರೆ, ರೂಲ್ಸ್ ಬ್ರೇಕ್ ಮಾಡಿದರೆ ಬಿಗ್ ಬಾಸ್ ಶಿಕ್ಷೆ ಕೊಡದೆ ಇರುವುದಿಲ್ಲ. ಇದೀಗ ಸ್ವರ್ಗ ನಿವಾಸಿಯಾಗಿದ್ದ ಐಶ್ವರ್ಯಾಗೆ ಹಂಸ ಮಾಡಿದ ತಪ್ಪಿನಿಂದ ನರಕ ಪ್ರಾಪ್ತಿಯಾಗಿದೆ.
ನರಕಕ್ಕೆ ಹೋಗುವುದಕ್ಕೆ ಐಶ್ವರ್ಯಾಗೆ ಕೊಂಚವೂ ಇಷ್ಟವಿಲ್ಲ. ಇದರ ನಡುವೆ ಹಂಸ ಕೂಡ ಬಿಗ್ ಬಾಸ್ ಬಳಿ ಮನವಿ ಮಾಡಿಕೊಂಡರು. ತಪ್ಪು ನನ್ನದೇ, ನನಗೆ ಶಿಕ್ಷೆ ಕೊಡಿ. ಕ್ಯಾಪ್ಟನ್ ಬೇಕಾದರೆ ಬೇರೆ ಯಾರನ್ನಾದರೂ ಮಾಡಿ. ಆದರೆ ಐಶ್ವರ್ಯಾಗೆ ಶಿಕ್ಷೆ ಕೊಡಬೇಡಿ ಎಂದರು. ಆದರೆ ಬಿಗ್ ಬಾಸ್ ಒಮ್ಮೆ ತೆಗೆದುಕೊಂಡ ನಿರ್ಧಾರವೇ ಫೈನಲ್. ಇದರಿಂದ ಒಬ್ಬರು ತಪ್ಪು ಮಾಡಿದರು ಇಡೀ ಮನೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬ ಸಂದೇಶವನ್ನು ಸಾರಿದಂತೆ ಆಗಿದೆ.
ಬಿಗ್ ಬಾಸ್ ನಿರ್ಧಾರದಿಂದ ಆ ಕಡೆ ಐಶ್ವರ್ಯಾ ಕಣ್ಣೀರು ಹಾಕುತ್ತಿದ್ದರೆ, ಲಾಯರ್ ಜಗದೀಶ್ ಮಾತ್ರ ಖುಷಿ ಪಟ್ಟರು. ಅದೆಷ್ಟರಮಟ್ಟಿಗೆ ಅಂದ್ರೆ ಬಿದ್ದು ಬಿದ್ದು ನಗುವಷ್ಟು ಖುಷಿ ಪಟ್ಟರು. ಗೋಲ್ಡ್ ಸುರೇಶ್ ಕೂಲ್ ಕೂಲ್ ಎಂದರು ಸ್ವರ್ಗ ನಿವಾಸಿ ನರಕಕ್ಕೆ ಹೋಗಿದ್ದು, ಹಾಲು ಕುಡಿದಷ್ಟೇ ಸಂತೋಷವಾಗಿದೆ ಜಗದೀಶ್ ಅವರಿಗೆ.