ಈ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿ ರಾಯಭಾರಿಯಾಗಿ ಪುನೀತ್ ರಾಜ್‌ಕುಮಾರ್ ಜವಾಬ್ದಾರಿ ಹೊತ್ತಿದ್ದರು. ಇದೀಗ ಅದೇ ಚಾಮರಾಜನಗರ ಕ್ಷೇತ್ರಕ್ಕೆ ಮತದಾನ ಜಾಗೃತಿ ಮೂಡಿಸುವ ರಾಯಬಾರಿಯಾಗಿ ಬಿಗ್ ಬಾಸ್ ಸ್ಪರ್ಧಿ, ನಟ ಕಾರ್ತಿಕ್ ಮಹೇಶ್ ಆಯ್ಕೆಯಾಗಿದ್ದಾರೆ.

ಲೋಕಸಭಾ ಚುನಾವಣೆಗೆ ದಿನಾಂಕ್ ಅನೌನ್ಸ್ ಆಗಿದೆ. ರಾಜಕೀಯ ಪಕ್ಷಗಳು ಈಗಾಗಲೇ ತಮ್ಮ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿವೆ. ಅದರ ಜೊತೆಗೆ ಪ್ರಚಾರ ಕಾರ್ಯವೂ ಜೋರಾಗಿಯೇ ನಡೆಯುತ್ತಿದೆ. ಜನರ ಬಳಿ ತಮ್ಮ ಅಭಿವೃದ್ದಿ ಕಾರ್ಯಗಳನ್ನು ಹಿಡಿದುಕೊಂಡು ಮತ ಕೇಳುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಗೆಲುವಿಗಾಗಿ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿವೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ನೀರಿನ ಸಮಸ್ಯೆ : ಖಾಸಗಿ ಬೋರ್ವೆಲ್ ಗಳ ವಶಕ್ಕೆ ಜಲಮಂಡಳಿ ನಿರ್ಧಾರ.

ಚುನಾವಣೆ ಅಂತ ಬಂದಾಗ ಸಾಕಷ್ಟು ಜನ ಮತ ಚಲಾಯಿಸುವುದೇ ಇಲ್ಲ. ಅಂದು ರಜೆಯ ದಿನವಾಗಿದ್ದರು ಮತ ಚಲಾವಣೆಗೆ ಆಸಕ್ತಿಯನ್ನು ತೋರುವುದಿಲ್ಲ. ಮತ ಚಲಾವಣೆಯ ಮಹತ್ವವನ್ನು ಚುನಾವಣಾಧಿಕಾರಿಗಳು ಮಾಡುತ್ತಲೇ ಇರುತ್ತವೆ. ಇದೀಗ ಮತದಾನದ ಜಾಗೃತಿ ಮೂಡಿಸಲು ಬಿಗ್ ಬಾಸ್ ನಲ್ಲಿ ಎಲ್ಲರ ಗಮನ ಸೆಳೆದಿದ್ದಂತ, ಎಲ್ಲರ ಮನಸ್ಸು ಗೆದ್ದು, ಕಪ್ ಅನ್ನು ಗೆದ್ದುಕೊಂಡು ಬಂದಂತ ನಟ ಕಾರ್ತಿಕ್ ಮಹೇಶ್ ಅವರನ್ನು ರಾಯಬಾರಿಯನ್ನಾಗಿ ನೇಮಕ ಮಾಡಲಾಗಿದೆ.
ಇದನ್ನೂ ಓದಿ:ಜೊಮಾಟೋ ಸಿಇಒ ದೀಪಿಂದರ್ ಗೋಯಲ್ ಗೆ ಕೂಡಿ ಬಂತು ಕಂಕಣ ಭಾಗ್ಯ : ಆ ವಧು ಯಾರು..
ಚಾಮರಾಜ ನಗರ ಜಿಲ್ಲಾಡಳಿತ ಮೂವರು ಪ್ರಮುಖ ಯುವ ಕಣ್ಮಣಿಗಳನ್ನು ಮತದಾನದ ರಾಯಭಾರಿಗಳನ್ನಾಗಿ ನೇಮಕ ಮಾಡಿದೆ. ʻದೇಶದ ಗರ್ವʼ ಎಂಬ ವಿಶೇಷ ಧ್ಯೇಯವಾಕ್ಯದೊಂದಿಗೆ ಜಿಲ್ಲಾ ಸ್ವೀಪ್ ಸಮಿತಿಯನ್ನು ರಚಿಸಲಾಗಿದ್ದು, ಮತದಾನದ ಜಾಗೃತಿ ಮೂಡಿಸಲು ಈ ಬಾರಿ ಮೂವರು ರಾಯಭಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ನಾಗ್ ತಿಳಿಸಿದ್ದಾರೆ. ಚಾಮರಾಜ ನಗರ ಕ್ಷೇತ್ರದ ಮತದಾನ ಏಪ್ರಿಲ್ 26ರಂದು ನಡೆಯಲಿದೆ. ಏಪ್ರಿಲ್ ನಾಲ್ಕರವರೆಗೆ ನಾಮಪತ್ರ ಸಲ್ಲಿಸಬಹುದು. ಏಪ್ರಿಲ್ 5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 8ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನ. ಏಪ್ರಿಲ್ 26ರಂದು ಮತದಾನ, ಜೂನ್ 4ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಇದನ್ನೂ ಓದಿ :ಡೀಪ್ ಫೇಕ್ ವಿಡಿಯೋ : ಇಟಲಿಯ ಪ್ರಧಾನಿ ವಿಚಾರ ಪ್ರಸ್ತಾಪಿಸಿ ಕಂಗನಾ ಹೇಳಿದ್ದೇನು..?
ಇನ್ನು ಚುನಾವಣೆಯನ್ನು ಹೊರತು ಪಡಿಸಿದರೆ ನಟ ಕಾರ್ತಿಕ್, ಸಿನಿಮಾದ ವಿಚಾರದಲ್ಲೂ ಬ್ಯುಸಿಯಾಗಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಗಳನ್ನು ಕೇಳುತ್ತಿರುವ ಕಾರ್ತಿಕ್, ಒಂದೊಳ್ಳೆ ಕಥೆಗಾಗಿ ಕಾಯುತ್ತಿದ್ದಾರೆ. ಕಥೆ ಓಕೆ ಆದ ಕೂಡಲೇ ಸಿನಿಮಾ ಕೆಲಸಗಳನ್ನು ಶುರು ಮಾಡುತ್ತಾರೆ. ಈಗಾಗಲೇ ಅವರನ್ನು ಡೊಳ್ಳು ಸಿನಿಮಾದಲ್ಲಿ ನೋಡಿದ ಅಭಿಮಾನಿಗಳಿಗೆ ಅವರೆಷ್ಟು ಪ್ರತಿಭಾವಂತ ನಟ ಎಂಬುದು ಅರಿವಾಗಿದೆ. ಹೀಗಾಗಿ ಅಭಿಮಾನಿಗಳ ಮನಮುಟ್ಟುವಂತ ಸಿನಿಮಾಗಳನ್ನೇ ಕಾರ್ತಿಕ್ ಮಾಡಬೇಕಾಗಿರುವ ಕಾರಣ, ಕಥೆಯ ವಿಚಾರದಲ್ಲಿ ಸಾಕಷ್ಟು ಎಚ್ಚರವಹಿಸಿದ್ದಾರೆ.
