Sandalwood Leading OnlineMedia

ಮೈಸೂರಿನ ಬಂಡೀಪುರಕ್ಕೆ ಭೇಟಿ ಕೊಟ್ಟ ಬಿಗ್​ಬಾಸ್​ ಚಲುವೆ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಅದೇ ರೀತಿ ಸಂಗೀತಾ ಶೃಂಗೇರಿ ಅವರು ಕೂಡ ಸುದ್ದಿಯಲ್ಲಿ ಇರುವಂತ ನಟಿ. ಬಿಗ್​ಬಾಸ್​ ಸೀಸನ್​ 10ರಿಂದ ಅತಿ ಹೆಚ್ಚು ಫ್ಯಾನ್ಸ್​​ಗಳನ್ನು ಗಳಿಸಿಕೊಂಡಿದ್ದಾರೆ ನಟಿ ಸಂಗೀತಾ.

ಬಿಗ್​ಬಾಸ್​ ಮೂಲಕ ಸಿಂಹಿಣಿ ಅಂತಲೇ ಖ್ಯಾತಿ ಪಡೆದಿರೋ ಸಂಗೀತಾ ಶೃಂಗೇರಿ ಅವರು ವಿಶೇಷವಾದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

 

 

 

 

ಇದೀಗ ಬಿಗ್​ಬಾಸ್​ ಬೆಡಗಿ ಮೈಸೂರಿನ ಬಂಡೀಪುರಕ್ಕೆ ತೆರಳಿದ್ದಾರೆ. ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ಕೊಟ್ಟು ಒಂದು ಗಂಟೆಗೂ ಹೆಚ್ಚು ಕಾಲ ಸಫಾರಿ ಮಾಡಿದ್ದಾರೆ. ಅದಕ್ಕಾಗಿಯೇ ಸಫಾರಿ ಉಡುಗೆ ತೊಟ್ಟು ಜೀಪ್​ನಲ್ಲಿ ಸುತ್ತಲಿನ ದೃಶ್ಯಗಳನ್ನು ನೋಡುತ್ತಾ ಅಭಯಾರಣ್ಯದ ಸುತ್ತು ಹಾಕಿದ್ದಾರೆ.

 

 

ಇದೇ ವಿಡಿಯೋವನ್ನು ನಟಿ ಸಂಗೀತಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಅತ್ಯಂತ ಅದ್ಭುತವಾದ ಸಫಾರಿ ಅನುಭವ ಇದು. ಒಂದು ಗಂಟೆಗೂ ಹೆಚ್ಚು ಕಾಲ ಹುಲಿಗಳನ್ನು ನೋಡುವುದೇ ಒಂದು ಆನಂದ ಎಂದು ಬರೆದುಕೊಂಡಿದ್ದಾರೆ.

 

 

 

 

ಇನ್ನು ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕರ್ನಾಟಕ ಸಿಂಹಿಣಿ, ಸಿಂಹಿಣಿ ಹುಲಿಯನ್ನು ಸೆರೆ ಹಿಡಿಯುವ ದೃಶ್ಯ ಅದ್ಭುತವಾಗಿದೆ ಎಂದು ಕಾಮೆಂಟ್​ ಮಾಡಿದ್ದಾರೆ. ಸದ್ಯ ಬಿಗ್​ಬಾಸ್​ನಿಂದ ಹೊರಬಂದ ಕೂಡಲೇ ಸಂಗೀತಾ ಶೃಂಗೇರಿ ನಟನೆಯ ಮಾರಿಗೋಲ್ಡ್ ಸಿನಿಮಾ ರಿಲೀಸ್​​ ಆಗಿತ್ತು. ಈ ಸಿನಿಮಾದಲ್ಲಿ ದಿಗಂತ್ ಮಂಚಾಲೆ ನಾಯಕನಾಗಿ ನಟಿಸಿದ್ದಾರೆ

 

 

 

 

 

 

 

 

 

 

 

Share this post:

Related Posts

To Subscribe to our News Letter.

Translate »