Left Ad
‘ಬಿಗ್ ಬಾಸ್’ ರಂಜಿತ್ ಕುಟುಂಬ ಕಲಹ: ಪತ್ನಿ ಮೇಲೆ ಹಲ್ಲೆ ಆರೋಪ - Chittara news
# Tags

‘ಬಿಗ್ ಬಾಸ್’ ರಂಜಿತ್ ಕುಟುಂಬ ಕಲಹ: ಪತ್ನಿ ಮೇಲೆ ಹಲ್ಲೆ ಆರೋಪ

‘ಬಿಗ್ ಬಾಸ್ ಕನ್ನಡ ಸೀಸನ್ 11’ ಖ್ಯಾತಿಯ ನಟ ರಂಜಿತ್ ಕುಟುಂಬ ಆಸ್ತಿ ಸಂಬಂಧಿತ ಕಲಹದಿಂದ ಸುದ್ದಿಯಲ್ಲಿದ್ದಾರೆ. ಆಸ್ತಿಗಾಗಿ ಉಂಟಾದ ಗಲಾಟೆಯ ವೇಳೆ ಅವರ ಅಕ್ಕ ರಶ್ಮಿ ಹಾಗೂ ಪತ್ನಿ ನಡುವೆ ಘರ್ಷಣೆ ನಡೆದಿದ್ದು, ಪತ್ನಿ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ರಂಜಿತ್ ಅವರಿಂದ ಕೇಳಿಬಂದಿದೆ.

ರಂಜಿತ್ ಪ್ರಕಾರ, ಅವರ ಅಕ್ಕ ಮನೆಯಲ್ಲಿ ನುಗ್ಗಿ ಅಡುಗೆ ಸಾಮಗ್ರಿಗಳನ್ನು ಎಸೆಯಲು ಪ್ರಾರಂಭಿಸಿದ್ದು, ಅದನ್ನು ತಡೆಯಲು ಬಂದ ಪತ್ನಿಯೊಂದಿಗೆ ಗಲಾಟೆ ಉಂಟಾಗಿದೆ. ತಮ್ಮ ಮೇಲೆ ತಪ್ಪು ಆರೋಪ ಹಾಕಲಾಗುತ್ತಿದ್ದು, ವಿಡಿಯೋದಲ್ಲಿ ಸಂಪೂರ್ಣ ಸತ್ಯತೆ ತೋರಿಸಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಘರ್ಷಣೆಯ ಸಂದರ್ಭದಲ್ಲಿ ತಂದೆಯೂ ತಮಗೂ, ಪತ್ನಿಗೂ ಹಲ್ಲೆ ನಡೆಸಿದ್ದಾರೆ ಎಂದು ರಂಜಿತ್ ಆರೋಪಿಸಿದ್ದಾರೆ. “ನಾನು ಸೆಲೆಬ್ರಿಟಿ ಆಗಿರುವುದರಿಂದ ವಿಡಿಯೋ ಮಾಡಿ ವೈರಲ್ ಮಾಡಲು ಯತ್ನಿಸುತ್ತಿದ್ದಾರೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಸ್ತಿ ವಿವಾದದ ಹಿನ್ನೆಲೆ 2017-18ರಲ್ಲಿ ‘ಶನಿ’ ಧಾರಾವಾಹಿ ಮಾಡಲು ರಂಜಿತ್ ತೆಗೆದುಕೊಂಡ ಮನೆಯ ಲೋನ್ ಅಕ್ಕನ ಹೆಸರಲ್ಲಿ ಮಾಡಲಾಗಿತ್ತು. ಆದರೆ ಇಎಮ್‌ಐ ನಾನೇ ಕಳಿಸುತ್ತಿದ್ದೇನೆ, ಮದುವೆಯಾದ ನಂತರ ಅದನ್ನು ನನ್ನ ಪತ್ನಿ ಕಳಿಸಬೇಕು ಎಂಬ ಒತ್ತಾಯ ಅಕ್ಕನಿಂದ ಬಂದಿದೆ. ಈ ಕಾರಣದಿಂದ ಕಲಹ ಗಂಭೀರವಾಗಿದೆ ಎಂದು ಅವರು ತಿಳಿಸಿದ್ದಾರೆ.

“ಈ ವಿಷಯ ಕೋರ್ಟ್‌ನಲ್ಲಿ ತೀರ್ಮಾನಗೊಳ್ಳಬೇಕು. ಮನೆ ಬಿಡಬೇಕು, ಹಣ ಕೊಡಬೇಕು ಎನ್ನುವ ಬೇಡಿಕೆ ಅಸಾಧ್ಯ. ನನಗೆ ಸತ್ಯ ಸಾಬೀತು ಮಾಡುವ ಸಾಕ್ಷಿಗಳಿವೆ” ಎಂದು ರಂಜಿತ್ ಸ್ಪಷ್ಟನೆ ನೀಡಿದ್ದಾರೆ.

Spread the love
Translate »
Right Ad