ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ನೂರು ದಿನಗಳ ಆಟ ಮುಗಿಸಿ ಮುನ್ನುಗ್ಗುತ್ತಿದ್ದಾರೆ. 17 ಮಂದಿಯಲ್ಲಿ ಈಗ ಬಿಗ್ ಬಾಸ್ ಮನೆಯಲ್ಲಿ ಉಳಿದಿರುವುದು 9 ಮಂದಿ ಮಾತ್ರ. ಫಿನಾಲೆ ತಲುಪುವುದಕ್ಕೂ ಮುನ್ನ ಮನೆಯಿಂದ ಇನ್ನು ನಾಲ್ಕು ಜನ ಖಾಲಿಯಾಗುತ್ತಾರೆ. 5 ಜನ ಫಿನಾಲೆ ವೇದಿಕೆ ಏರುತ್ತಾರೆ. ಈ ವಾರ ಯಾರು ಮನೆಯಿಂದ ಹೊರ ಹೋಗಬಹುದು ಎಂಬ ಕ್ಯೂರಿಯಾಸಿಟಿ ಎಲ್ಲರಲ್ಲೂ ಇದೆ.

ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ಬಾಸ್ ಮನೆಯೊಳಗೆ ಪ್ರವೇಶ ಪಡೆದಿದ್ದ ಹನುಮಂತ ವೀಕ್ಷಕರ ಮನಸ್ಸು ಗೆದ್ದಿದ್ದಾನೆ. ಇದ್ದಿದ್ದನ್ನು ಇದ್ದಂಗೆ ಹೇಳುತ್ತಾ? ತನ್ನ ಗಾಯನದಿಂದ ಮನೆಯೊಳಗಿರುವ ಸ್ಪರ್ಧಿಗಳ ಮನಸ್ಸು ಗೆದ್ದಾನೆ. ಟಾಸ್ಕ್‌ಗಳಲ್ಲೂ ಹನುಮಂತ ಮುಂದಿದ್ದ. ಅದರಲ್ಲೂ ಫಿನಾಲೆಗೆ ಟಿಕೆಟ್ ಪಡೆಯುವ ಟಾಸ್ಕ್‌ಗಳಲ್ಲಿ ಹನುಮಂತ ಆಕ್ಟಿವ್ ಆಗಿ ಭಾಗವಹಿಸಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾನೆ. ವೈಲ್ಡ್ ಕಾರ್ಟ್ ಎಂಟ್ರಿ ಕೊಟ್ಟು ಫಿನಾಲೆವರೆಗೂ ಪ್ರವೇಶ ಮಾಡಿದ ಕನ್ನಡದ ಮೊದಲ ಸ್ಪರ್ಧಿ ಎನಿಸಿಕೊಂಡಿದ್ದಾರೆ.

ಭವ್ಯಾ ಗೌಡ, ತ್ರಿವಿಕ್ರಮ್, ಮೋಕ್ಷಿತಾ , ಚೈತ್ರಾ ಕುಂದಾಪುರ ಹಾಘೂ ಧನರಾಜ್ ಆಚಾರ್ ಇದ್ದಾರೆ. ಈ ವಾರ ಐವರು ಮಂದಿಯಲ್ಲಿ ಒಬ್ಬರು ಇಲ್ಲವೇ ಇಬ್ಬರು ಮನೆಯಿಂದ ಹೊರ ಹೋಗಬಹುದು ಎಂದು ಅಂದಾಜು ಮಾಡಲಾಗುತ್ತಿದೆ.ಈ ವಾರ ಎಲಿಮಿನೇಷನ್ ಪ್ರಕ್ರಿಯೆಯಿಂದ ಸೇಫ್ ಆದವರು ಉಗ್ರಂ ಮಂಜು, ಗೌತಮಿ ಜಾದವ್ ಹಾಗೂ ರಜತ್. ಈ ವಾರ ರಜತ್ ಕ್ಯಾಪ್ಟನ್ ಆಗಿದ್ದರಿಂದ ಸೇಫ್ ಆಗಿದ್ದಾರೆ. ಇನ್ನು ಉಗ್ರಂ ಮಂಜು ಹಾಗೂ ಗೌತಮಿ ಜಾದವ್ ಇಬ್ಬರು ಚೆನ್ನಾಗಿ ಆಟ ಆಡಿದ್ದರಿಂದ ಅವರು ಸೇಫ್ ಆದರು.ಧನರಾಜ್ ಹಾಗೂ ಚೈತ್ರಾ ಕುಂದಾಪುರ ಇಬ್ಬರು ಎಲಿಮಿನೇಟ್ ಆಗಬಹುದು ಎಂದು ಅಂದಾಜು ಮಾಡಲಾಗುತ್ತಿದೆ.

