Sandalwood Leading OnlineMedia

ಬಿಗ್‌ ಬಾಸ್‌ ಬಗ್ಗೆ ಕಿಚ್ಚ ಮತ್ತೆ ಟ್ವೀಟ್‌ : ಈ ಬಾರಿ ವಾಹಿನಿ ಬಗ್ಗೆ ಏನಿದೆ ಮ್ಯಾಟರ್..?

ಬಿಗ್ ಬಾಸ್ ಸೀಸನ್ 11.. ಸತತ ಹನ್ನೊಂದನೇ ವರ್ಷವೂ ಬಿಗ್ ಬಾಸ್ ಅನ್ನು ಅತ್ಯದ್ಭುತವಾಗಿ ನಡೆಸಿಕೊಂಡು ಬಂದ ಹೆಗ್ಗಳಿಕೆ ಕಿಚ್ಚನಿಗೆ ಸಲ್ಲುತ್ತದೆ. ಆದರೆ ಸೀಸನ್ 12ಕ್ಕೆ ಕಿಚ್ಚ ಮುಂದುವರೆಯಲ್ಲ ಎಂಬುದು ಬಿಗ್ ಬಾಸ್ ಫ್ಯಾನ್ಸ್ ಬೇಸರ. ಕಿಚ್ಚ ಸುದೀಪ್ ಯಾವಾಗ ಬಿಗ್ ಬಾಸ್ ಗೆ ಗುಡ್ ಬೈ ಹೇಳುತ್ತಿರುವ ಪೋಸ್ಟ್ ಹಾಕಿದರೋ ಅಂದಿನಿಂದ ಸಾಕಷ್ಟು ವಿಚಾರಗಳು ಚರ್ಚೆಗೆ ಗ್ರಾಸವಾಗಿವೆ. ಸುದೀಪ್ ಅವರಿಗೆ ವಾಹಿನಿ ಏನಾದರೂ ನೋವು ಮಾಡೀತಾ ಎಂಬೆಲ್ಲಾ ಸುದ್ದಿಗಳು ವೈರಲ್ ಆಗುತ್ತಿವೆ. ಕಳೆದ ಎರಡ್ಮೂರು ದಿನದಿಂದ ಹಬ್ಬಿದ ಸುದ್ದಿಗೆ ಇದೀಗ ಸುದೀಪ್ ಅವರೇ ಉತ್ತರ ನೀಡಿದ್ದಾರೆ.


ಇಂದು ಮತ್ತೊಂದು ಟ್ವೀಟದ ಮಾಡುವ ಮೂಲಕ ಕ್ಲಾರಿಟಿ ಕೊಟ್ಟಿದ್ದಾರೆ. ‘ನನ್ನ ಒಂದು ಟ್ವೀಟ್ ಗೆ ನೀವುಹ ಸ್ಒಂದಿಸಿರುವ ರೀತಿಗೆ ಹಾಗೂ ನಿಮ್ಮ ಪ್ರೀತಿ ಮತ್ತು ಬೆಂಬಲವನ್ನು ನಾನು ಮೆಚ್ಚುತ್ತೇನೆ. ಇದು ನನಗೆ ತುಂಬಾ ಸಂತೋಷವಾಗಿದೆ. ಆದರೆ ನನ್ನ ಹಾಗೂ ಚಾನೆಲ್ ನಡುವೆ ಏನೋ ಸಂಘರ್ಷವಾಗಿದೆ ಎಂದು ಹರಿದಾಡುತ್ತಿರುವ ವಿಡಿಯೋ ಹಾಗೂ ಪ್ರತಿಕ್ರಿಯೆಗಳನ್ನು ಸೃಷ್ಟಿಸುತ್ತಿರುವವರಿಗೆ ನಾನು ಕೇಳಿಕೊಳ್ಳುವುದು ಇಷ್ಟೇ. ನಾವೂ ಒಂದು ದೀರ್ಘವಾದ ಹಾಗೂ ಪಾಸಿಟಿವ್ ಹಾದಿಯಲ್ಲಿ ಸಾಗಿದ್ದೇವೆ. ಇದರಲ್ಲಿ ಒಬ್ಬರಿಗೊಬ್ಬರು ಅಗೌರವದಿಂದ ನಡೆದುಕೊಳ್ಳುವ ಪ್ರಶ್ನೆಯೇ ಹುಟ್ಟುವುದಿಲ್ಲ.


ಇದರ ಸುತ್ತ ಹುಟ್ಟಿರುವ ವಿಚಾರಗಳು ಸುಳ್ಳುಗಳೇ ಆಗಿವೆ. ಹಾಗೇ ಹುಟ್ಟು ಹಾಕಿದವರಲ್ಲಿ ಮಾಹಿತಿಯ ಕೊರತೆಯೂ ಇದೆ. ನಾನು ಮಾಡಿದ ಟ್ವೀಟ್ ಅತ್ಯಂತ ಪ್ರಾಮಾಣಿಕವಾದದ್ದಾಗಿದೆ. ನನ್ನ ಮತ್ತು ಕಲರ್ಸ್ ಕನ್ನಡದ ನಡುವಿನ ಸಂಬಂಧ ಒಂದು ಅದ್ಭುತವಾದದ್ದು. ಅವರು ನನ್ನನ್ನು ತುಂಬಾ ಗೌರವದಿಂದ ನಡೆಸಿಕೊಂಡಿದ್ದಾರೆ. ಡೈರೆಕ್ಟರ್ ಪ್ರಕಾಶ್ ಅದ್ಭುತ ಪ್ರತಿಭೆ ಇರುವ ವ್ಯಕ್ತಿ. ನನ್ನೊಂದಿಗೆ ಕೆಲಸ ಮಾಡಿದವರು ಯಾವುದೋ ಅಪವಾದ ಎದುರಿಸುತ್ತಿದ್ದರೆ, ಅದನ್ನು ನೋಡಿಕೊಂಡು ಸಂಭ್ರಮಿಸುವ ವ್ಯಕ್ತಿ ನಾನಲ್ಲ’ ಎಂದು ಹಬ್ಬಿರುವ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ.

Share this post:

Related Posts

To Subscribe to our News Letter.

Translate »