Sandalwood Leading OnlineMedia

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಅಣ್ಣ ತಂಗಿಯ ವಿಡಿಯೋ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಯಾಗಿದ್ದ ಸಂಗೀತಾ ಶೃಂಗೇರಿ ಅವರು ನಿನ್ನೆ ಅದ್ಧೂರಿಯಾಗಿ ತಮ್ಮ ಬರ್ತ್​ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ನೆಚ್ಚಿನ ನಟಿಯ ಹುಟ್ಟು ಹಬ್ಬದ ನಿಮಿತ್ತ ಅಭಿಮಾನಿಗಳು ಹೊಸ, ಹೊಸ ಫೋಟೋಗಳನ್ನು ಶೇರ್​ ಮಾಡಿಕೊಂಡು ಶುಭ ಕೋರಿದ್ದರು.

 

ಇದನ್ನೂ ಓದಿ :`ಕುಂಟೆ ಬಿಲ್ಲೆ’ ಆಡಲು ಸಿದ್ದೇಗೌಡರು ಸಿದ್ಧ!

ಇದೀಗ ಬಿಗ್​ಬಾಸ್​ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ಡ್ರೋನ್​ ಪ್ರತಾಪ್ ಪ್ರೀತಿಯ ಅಕ್ಕ ಸಂಗೀತಾ ಶೃಂಗೇರಿ ಮನೆಗೆ ಭೇಟಿ ಕೊಟ್ಟಿದ್ದಾರೆ. ಇವರ ಜೊತೆಗೆ ಬಿಗ್​ಬಾಸ್​ ಸ್ಪರ್ಧಿ ನೀತು ಕೂಡ ಭಾಗಿಯಾಗಿದ್ದರು. ಇನ್ನೂ, ಹುಟ್ಟು ಹಬ್ಬದ ನಿಮಿತ್ತ ಡ್ರೋನ್ ಪ್ರತಾಪ್ ಹಾಗೂ ನೀತು ವನಜಾಕ್ಷಿ ಅವರು ಕೇಕ್​ ತೆಗೆದುಕೊಂಡು ಸಂಗೀತಾ ಶೃಂಗೇರಿ ಅವರ ಮನೆಗೆ ಆಗಮಿಸಿದ್ದರು. ಜೊತೆಗೆ ರಕ್ಷಕ್ ಬುಲೆಟ್, ವಿನಯ್ ಗೌಡ, ನಮ್ರತಾ ಗೌಡ, ಅವರು ಎಲ್ಲರ ಜೊತೆಗೆ ಗ್ರ್ಯಾಂಡ್ ಆಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು.

 

 

 

ಸಂಗೀತಾ ಶೃಂಗೇರಿ ಅವರ ಮನೆಗೆ ಭೇಟಿ ಕೊಟ್ಟ ಡ್ರೋನ್​ ಪ್ರತಾಪ್​ ಅವರಿಗಾಗಿಯೇ ವಿಶೇಷವಾದ ಗಿಫ್ಟ್​ ನೀಡಿದ್ದಾರೆ. ಡ್ರೋನ್​ ಪ್ರತಾಪ್​ ಪ್ರೀತಿಯ ಅಕ್ಕ ಸಂಗೀತ ಶೃಂಗೇರಿಗೆ ತಿಳಿ ಹಸಿರು ಬಣ್ಣದ ಚೂಡಿದಾರ್​ ಅನ್ನು ಗಿಫ್ಟ್​ ಆಗಿ ನೀಡಿದ್ದಾರೆ. ಜೊತೆಗೆ ಪ್ರೀತಿಯ ಅಕ್ಕ ಜೊತೆಗಿರುವೆ ಸದಾ ಅಂತಾ ಬರೆದುಕೊಂಡು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ :ಟ್ರೇಲರ್ ನಲ್ಲೇ ಮೋಡಿ ಮಾಡಿದ`ಮೂರನೇ ಕೃಷ್ಣಪ್ಪ’  ಮೇ 24ಕ್ಕೆ ರಿಲೀಸ್

ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಈ ಇಬ್ಬರಿಗೂ ಶುಭ ಹಾರೈಸುತ್ತಿದ್ದಾರೆ.

Share this post:

Related Posts

To Subscribe to our News Letter.

Translate »