ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಬೆಂಕಿ ಜ್ವಾಲೆಯಾಗಿ ಉರಿಯುತ್ತಿದೆ. ಬಿಗ್ ಬಾಸ್ ಸೀಸನ್ 11ರ ಫಿನಾಲೆಗೆ ಇನ್ನು ಒಂದೇ ವಾರವಷ್ಟೇ ಬಾಕಿ ಇರೋದು. ಇದು ಕಡೆಯ ನಾಮಿನೇಷನ್ ಪ್ರಕ್ರಿಯೆಯಾಗಿದೆ. ಹೀಗಾಗಿ ಈ ವಾರ ನಾಮಿನೇಷನ್ ಆಗುವವರು ಯಾರೆಂಬ ಕುತೂಹಲವಿದೆ. ಬಿಗ್ ಬಾಸ್ ಮನೆಯಲ್ಲಿರುವ 8 ಸ್ಪರ್ಧಿಗಳಲ್ಲಿ ಒಬ್ಬರಲ್ಲ ಇಬ್ಬರು ಔಟ್ ಆಗೋದು ಫಿಕ್ಸ್ ಆಗಿದೆ. ಧನರಾಜ್, ಮಂಜು, ತ್ರಿವಿಕ್ರಮ್, ರಜತ್, ಮೋಕ್ಷಿತಾ, ಭವ್ಯಾ, ಗೌತಮಿ ಈ 7 ಮಂದಿಯಲ್ಲಿ ಇಬ್ಬರು ಬಿಗ್ ಬಾಸ್ ಮನೆಯಿಂದ ಆಚೆ ಬರುತ್ತಾರೆ ಎನ್ನಲಾಗಿದೆ. ಹೀಗಾಗಿ ಕೊನೆ ಕ್ಷಣದಲ್ಲೂ ಬಿಗ್ ಬಾಸ್ ಸ್ಪರ್ಧಿಗಳ ಮಾಡು ಇಲ್ಲವೇ ಮಡಿ ಹೋರಾಟ ನಡೆಸುತ್ತಿದ್ದಾರೆ.
ಫಿನಾಲೆ ವೀಕ್‌ಗೆ ಯಾರು ಬರೋದು ಬೇಡ ಅನ್ನೋ ಟಾಸ್ಕ್‌ನಲ್ಲಿ ಭವ್ಯಾ ಅವರು ಮೂವರಿಗೆ ಶಾಕ್ ಕೊಟ್ಟಿದ್ದಾರೆ. ಮಂಜು, ಗೌತಮಿ, ತ್ರಿವಿಕ್ರಮ್ ಅವರನ್ನು ಭವ್ಯಾ ನಾಮಿನೇಟ್ ಮಾಡಿದ್ದು ಕಾರಣಗಳನ್ನು ಕೊಟ್ಟಿದ್ದಾರೆ. ಎಲಿಮಿನೇಷನ್ ಟಾಸ್ಕ್‌ನಲ್ಲಿ ಮಂಜು ಅವರ ಕಣ್ಣಿಗೆ ಗೌತಮಿ ಮಾತ್ರ ಹೆಣ್ಣಾಗಿ ಕಾಣಿಸಿಕೊಳ್ಳುತ್ತಾರೆ. ಗೌತಮಿ ಅವರು ಟಾಸ್ಕ್‌ನಲ್ಲಿ ನನಗೆ ಮೂಗು ತರಚುತ್ತಿದೆ ಎಂದ ಕೂಡಲೇ ಮಂಜು ಅವರು ನಮ್ಮನ್ನ ಜೋರಾಗಿ ತಳ್ಳಿ ಎತ್ತಿ ಬಿಸಾಡುತ್ತಾರೆ. ಗೌತಮಿ ಅವರು ಅಂದ್ರೆ ಹಾಗೇ ಹೀಗೆ ಯಾಕೆ? ಬೇರೆಯವರು ಯಾರು ಹೆಣ್ಣು ಮಕ್ಕಳು ಅಲ್ವಾ? ಅವರು ಒಬ್ಬರೇ ಹೆಣ್ಣು ಮಕ್ಕಳಾ ಎಂದು ಪ್ರಶ್ನಿಸಿದ್ದಾರೆ. ಭವ್ಯಾ ಪಂಚಿಂಗ್ ಡೈಲಾಗ್‌ಗಳಿಗೆ ಮಂಜು ಅವರು ಕೂಡ ಉತ್ತರಿಸಿದ್ದಾರೆ. ಹೌದು ನನಗೆ ಒಳ್ಳೆಯವರು ಬಯಸುವವರು ಒಳ್ಳೆಯವರು. ನೀನು ಹೇಳಿದ ಹಾಗೆ ಕೇಳೋಕೆ ಬಿಗ್ ಬಾಸ್‌ನವರು ನನ್ನ ಇಲ್ಲಿಗೆ ಕಳುಹಿಸಿಲ್ಲ. ರಾತ್ರಿಯೆಲ್ಲಾ ತ್ರಿವಿಕ್ರಮ್ ಅವರ ಜೊತೆ ಮಾತನಾಡೋಕೆ ನಿಮ್ಮನ್ನ ಕಳುಹಿಸಿದ್ದಾರಾ ಎಂದಿದ್ದಾರೆ. ಇದಕ್ಕೆ ಹೌದು ನಾನು ಅದಕ್ಕೆ ಬಂದಿರೋದು. ಏಟಿಗೆ ಏಟು ಎಂದು ಭವ್ಯಾ ಮಂಜುಗೆ ಖಡಕ್ ಸವಾಲು ಹಾಕಿದ್ದಾರೆ.
ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮಂಜು ಮನೆಯವರ ಟಾರ್ಗೆಟ್ ಆಗಿದ್ದಾರೆ. ಎಲ್ಲರೂ ಕೂಡ ಅವರ ಮೇಲೆ ಸಾಲು ಸಾಲು ದೂರು ನೀಡಿದ್ದಾರೆ. ರಜತ್ ಹಾಗೂ ಭವ್ಯಾ ಮಾತ್ರ ಪಂಚಿಂಗ್ ಡೈಲಾಗ್ ಹೊಡೆದಿದ್ದಾರೆ. ಈ ವಾರ ಯಾರೂ ಮನೆಯಿಂದ ಹೊರಗೆ ಹೋಗ್ತಾರೆ ಎಂಬ ಕ್ಯೂರಿಯಾಸಿಟಿ ಇದೆ.